ಬಾಳಿಗೊಂದು ಚಿಂತನೆ - 97
ಅತಃ ಶ್ರೀ ಕೃಷ್ಣ ನಾಮಾದಿ ನ ಭವೇದ್ ಗ್ರಾಹ್ಯಮ್ ಇಂದ್ರಿಯೈಃ/
ಸೇವೋನ್ಮುಖೇ ಹಿ ಜಿಹ್ವಾದೌ ಸ್ವಯಮ್ ಏವ ಸ್ಫುರತ್ಯದಃ//
ಮನಸ್ಸಿನಲ್ಲಿ ಕೆಟ್ಟದ್ದನ್ನು ಬೇಡದ್ದನ್ನು ತುಂಬಿಕೊಂಡು, ಶ್ರೀ ಕೃಷ್ಣನ ದಿವ್ಯ ನಾಮಂಗಳ, ಮಹಿಮೆಯ, ಗುಣಗಳ, ಯಾವುದೇ ಲೀಲೆಗಳ, ಎಷ್ಟು ಓದಿದರೂ, ಜಪಿಸಿದರೂ ಪ್ರಯೋಜನವಿಲ್ಲ. ಇಂದ್ರಿಯಗಳ ಶುದ್ಧತೆ ಮುಖ್ಯವಾಗಿ ಬೇಕು. ಅದು ನಾವು ಹೇಳಿದ ಹಾಗೆ ಕೇಳುವ ಮನೋಸ್ಥಿತಿ ಇರಬೇಕು. ಆಗ ಆ ದೇವನ ಸೇವೆ ಪರಿಪೂರ್ಣ ಆಗಬಹುದು. ‘ನಾನು ದೇವನ ದಾಸಾನುದಾಸ’ ಎಂದು ಹೇಳುತ್ತಾ ಮನಸ್ಸಿಗೆ ಯಾವಾಗ ಬರುತ್ತದೋ ಆಗ ಜಪಿಸಿದರಾಗದು. ಎಲ್ಲದಕ್ಕೂ ಒಂದು ರೀತಿ ನೀತಿ ನಿಯಮ, ಕಾಲ, ಸಮಯ ಇದೆ. ನಮ್ಮ ಸೇವೆ ಸಾರ್ಥಕತೆ ಪಡೆಯಲು ಶ್ರದ್ಧೆ, ಏಕಾಗ್ರತೆ ಮುಖ್ಯ. ಉಪನಿಷತ್ತುಗಳು, ವೇದಗಳು, ಪಂಚತಂತ್ರ ಕಥೆಗಳು ಪುರಾಣಗಳನ್ನು ಓದಿದಾಗ ನಾವು ಜ್ಞಾನವಂತರಾಗಬಹುದು. ಒಬ್ಬ ಸಮರ್ಥ ಗುರುವಿನ ಮೂಲಕ ಇದನ್ನೆಲ್ಲ ಓದಿ ತಿಳಿದು, ಸಮಾಜದಲ್ಲಿ ಪ್ರಚಾರ ಮಾಡುವುದರಿಂದ ಲೋಕಕ್ಷೇಮ ಸಹ ಇದೆ. ಎಲ್ಲಿಯೂ ಧರ್ಮಕ್ಕೆ ಅಪಚ್ಯುತಿ ಆಗದಂತೆ ಜಾಗ್ರತೆ ವಹಿಸಬೇಕು.
ಸಂಗ್ರಹ: ರತ್ನಾ ಕೆ.ಭಟ್ ತಲಂಜೇರಿ
(ಆಧಾರ:ಧರ್ಮ ಏಕೆ?ಹೇಗೆ?)