ಬಾಳಿನಿಂದೆರಡು ಪುಟಗಳು.......
ಜೀವಧಾರೆಗೆ,
ಹಿಂದುರಿಗಿ ನೋಡಿದಾಗ ನೀನಿಲ್ಲ. ನನ್ನ ಕಣ್ಣೆನ ನೀರೆಲ್ಲ ನನ್ನ ಕಾಲನ್ನು ತೊಳೆಯುತಿತ್ತು.
ಎಷ್ಟೋಂದು ಭಾವುಕನಾಗಿದ್ದೆ, ಯಾರೂ ಕಂಡವರಿಲ್ಲ.
ಯಾವಗೆಂದು ಚಿಂತಿಸುತಿದ್ದೀಯ?
ಹೌದು ಆವತ್ತೇ.........!
ಬೆಳಗ್ಗೆ ಎದ್ದಾಗ ಕನಸಲ್ಲೇ ನಿನ್ನ ಮುಖ ದರ್ಶನವಾಗಿತ್ತು. ತುಂಬಾ ಉತ್ಸುಕನಾಗಿದ್ದೆ. ಯಾಕೆ ಗೊತ್ತಾ? ಆ ದಿನವನ್ನೆ ನಾ ಎಷ್ಟೊಂದು ವಾರಗಳಿಂದ ಕಲ್ಪಿಸುತಿದ್ದೆ, ಕಾಯುತಿದ್ದೆ. ಆ ದಿನದಂದು ನಡೆಯಬೇಕಾದುದು ಬಹಳ ಇದ್ದವು. ಆದರೂ ನಿನ್ನ ಅ ದಿನದ ಭೇಟಿ ಆ ಎಲ್ಲವನ್ನೂ ದೂರ ಕಳಿಸಿಬಿಟ್ಟಿತ್ತು.
ಬೆಚ್ಚಗಿನ ಕಾಫಿ ಲೋಟವನ್ನು ಬಾಯಿಗೆ ಇಟ್ಟು ಕಾಫಿನ ಅಸ್ವಾದಿಸುವಾಗಲು ನಿನ್ನ ನೆನಪು ಕಾಡುತಿತ್ತು, ನಿನ್ನ ನಗುವಿನಷ್ಟು ಸಿಹಿಯಾಗಿತ್ತು. ಯಾಕೊ ಎಂದೂ ನಿನ್ನ ಇಷ್ಟವಾದ ಬಣ್ಣದ ಬಟ್ಟೆ ಹಾಕಿದವನಲ್ಲ, ಆದರೂ ನಿನಗೆ ಎಷ್ಟವಾಗಲಿ ಎಂದು ೨ ವಾರಗಳ ಮುಂಚೆಯೇ ಹೊಲಿದಿದ್ದ ಆಕಾಶ ನೀಲಿ ಬಟ್ಟೆ, ಒಂದು ಸಾಧರಣ ಪ್ಯಾಂಟ್ ಹಾಕೊಂಡು ಬೆನ್ನಿಗೆ ಬ್ಯಾಗ್ ಏರಿಸಿಕೊಂಡು 7 ಗಂಟೆಗೆನೆ ಮನೆ ಬಿಟ್ಟಿದ್ದೆ. ಅದೂ ನೀನು ಆ ಗುಲಾಬಿ ಬಣ್ಣದ ಬಸ್ಸುವಿನಲ್ಲಿ ಬರುತ್ತೀಯಾ, ನಾನೂ ಅದರಲ್ಲೇ ಬರಬೇಕು ಎಂಬ ಆಶೆಯಿಂದ. ಏಕೋ ಗೊತ್ತಿಲ್ಲ,! ಅಂದು ನೀ ಆ ಬಸ್ಸಲ್ಲಿ ಬರಲೇ ಇಲ್ಲ. ಏನ್ಮಡೋದು ನೀನು ಮಲಗೋದು ಚಂದ್ರ ನೆತ್ತಿ ಮೇಲೆ ಬಂದ ನಂತ್ರ ತಾನೇ. ಅದಕೇನೆ ಸ್ವಲ್ಪ ಏಳುವಾಗ ಲೇಟಾಗಿ ಇರಬೇಕು ಏಂದು ನಾನೇ ನೆನಪಿಸಿಕೊಂಡಿದ್ದೆ.
ಬಸ್ಸಿನಿಂದ ಇಳಿಯುವಾಗ ಭಾನು ಸಣ್ಣಾದಾಗಿ ಅಳುತಿದ್ದ. ಅವನಿಗೂ ಏನೋ ಮನಸಿನಲ್ಲಿ ಜಿಗುಪ್ಸೆಯಾಗಿರಬೇಕು. ಹೊರಗಿನ ಬೆಚ್ಚನೆಯನ್ನೂ ಕಡಿಮೆ ಬಿಟ್ಟಿದ್ದ. ಆದರೂ ನನ್ನ ಹೃದಯದ ವೇಗವನ್ನು ಅವನಿಗೆ ಕಡಿಮೆ ಮಾಡಲು ಸಾಧ್ಯ ಆಗಲೇ ಇಲ್ಲ. ಅದು ನಿನ್ನೋಬ್ಬಳ ದರುಶನದಿಂದಲೆ ಸಾಧ್ಯ. ಹೇಗೊ ಸಾವಕಾಶ ತಂದುಕೊಂಡು ಕಾಲೇಜು ಕ್ಯಾಂಪಸ್ ಸೇರಿದ್ದೆ. ಆವತ್ತು “ಇ ದಿನ ಹೀಗೆನೆ ನಡೆಯುತಿತ್ತು ಎಂಬುದು ಕನಸಲ್ಲಿ ಕಂಡಿದ್ದೆ” ಎಂದು ಭಾಸವಾಗುತಿತ್ತು. ಎಂಥ ಮಾಯೆಯಲ್ವ! ಎಲ್ಲರೂ ತಮ್ಮ ತಮ್ಮ ಪ್ರೀತಿಯ ಬಗ್ಗೆ ಕನಸು ಕಾಣಿರಬಹುದು. ಆದರೆ, ನನ್ನಷ್ಟ್ಟು ಬೆಟ್ಟದಷ್ಟು ಕನಸು ಕಂಡವರಿಲ್ಲ. ಉಹುಂ.......
ಯಾಕೆ ಗೊತ್ತ?! ಒಂದು ದಿವಸ, ನಾನು ನಿನ್ನನ್ನ ಚುಕ್ಕಿ ತಾರೆಗಳಿರುವಲ್ಲಿಗೆ ಕರಕೊಂಡು ಹೊಗಿದ್ದೆ. ಎಂಥಾ ಅತ್ಯದ್ಭುತ ಲೋಕ ಗೊತ್ತಾ!
ನಗು ಬರುತಿದೆ ಅಲ್ವ!
ನಗು... ನಗು...ಇನ್ನೂ ಎಷ್ಟು ಎಷ್ಟು ಕನಸ ಕಂಡಿದ್ದೆ ಎಂಬುದು ನಿನಗೇನು ಗೊತ್ತು?!
ಸೂರ್ಯ ನನ್ನ ಹಣೆಯ ನೇರಕ್ಕೇನೆ ಇದ್ದ. ಅವನೂ ನಿನ್ನ ಕಾಯುತಿದ್ದನೋ ಏನು! ಅದಕ್ಕೇನೆ ಮೋಡದ ಮರೆಯಲ್ಲಿ ಮರಗಳ ಎಡೆಗಳಲ್ಲಿ ಇಣುಕಿ ಇಣುಕಿ ನನ್ನ ನೋಡುತ್ತ ಬರುತಿದ್ದ. ಕಾಲೇಜು ಮುಂದುಗಡೆಯ ಹೊಂಗೆ ಮರದ ದಂಡೆಯಲ್ಲಿ ಕಾಯುತ್ತಾ ಕುಳಿತಿದ್ದೆ. ಅ ಮರಕ್ಕೆ ತಿಳಿದಿರಬೇಕು ನನ್ನ ಭಾವನೆಗಳು, ಆ ಜಡಿ ಮಳೆಯಲ್ಲೂ ನನಗೆ ರಕ್ಷಣೆ ಕೊಡುತಿದ್ದ, ತಂಪು ಈಯುತಿದ್ದ.
“ಏನು ಹೇಳಬೇಕು ಅಂದೆ ಏನದು?
ಬೇಗ ಹೇಳು ಯಾರು ಕೇಳಬಾರದು”.
ನನ್ನ Mobileನಲ್ಲಿ ನನ್ನ ಫೇವರೆಟ್ ಹಾಡು ಗುನು ಗುನುತಿತ್ತು.
ಅಬ್ಬಾ..... ಬಂದೇ ಬಿಟ್ಯಲ್ವ?
ಅದೇ White pink Choodi, ಓರೆ-ಕೋರೆ ಆ ಉದ್ದವಾದ ಶಾಲು, ಹೆಗಲಿಗೊಂದು ಕಂದು ವ್ಯಾನಿಟಿ ಬ್ಯಾಗ್. ನಡೆಯುವ ರೀತಿಯಲ್ಲೇ ಗೊತ್ತಾಗಿತ್ತು ದೂರದಲ್ಲಿ ಬರುತ್ತಿರುವುದು ನೀನೆ ಎಂದು.
ನಾನೇ ಭಾಗ್ಯವಂತ. ನಾನು ಕಾಯ್ದುಕೊಂಡಂತಹ ಘಳಿಗೆ ತುಂಬಾ ಸನ್ನಿಹಿತವಾಗಿತ್ತು. ಆಗಲೇ ನನ್ನ ಮನಸ್ಸು ಚಿಕ್ಕ ಕನಸಲ್ಲಿ ಆಟವಾಡುತಿತ್ತು. ‘Hmmmm Plz ನಿನ್ನ ಹೆಜ್ಜೆಯ ಹಿಂದೆ ನನಗೊಂದು ಹೆಜ್ಜೆ ಇರಲಿ’ ಎಂದು. ತುಂಬಾ ಹತ್ತಿರದಲ್ಲಿದ್ದೆ ನಿನಗೆ.
ಏನೋ ನೀನೆ ನನ್ನ ಎದುರು ಬಂದು ನಿಲ್ಲಬೇಕೆ!
ಹೌದು. ನನಗೆ ಬೇಕಾದುದು ಅದೇ ತಾನೇ.
‘ನಿನ್ನ ಛತ್ರಿಯಲ್ಲಿ ಕಾಲುಭಾಗ, ನನಗೆ ಜಾಗ.’
ಅಬ್ಬಾ...! ನಿನ್ನ ಉಸಿರಿನ ಬಿಸಿ ನನ್ನ ಎದೆಗೆ ತಾಕುತಿತ್ತು. ಅಷ್ಟು ಹತ್ತಿರದಲ್ಲಿದ್ದೆ. ಅಪ್ಪಿಕೊಳ್ಳೋಣ ಎಂದಾಯಿತು. ಬೇಡ, ತಪ್ಪಾಗಿ ಅರ್ಥ ಮಾಡಿಕೊಂಡರೆ! ನನ್ನ ಮನಸ್ಸಿನ ಪ್ರಶ್ನೆಗೆ ಆ ಮನಸ್ಸೇ ಉತ್ತರ ಹುಡುಕಿಕೊಂಡು ಬಿಟ್ಟಿತ್ತು. ಮುಕ್ಕಾಲು ಮೂರು ನಿಮಿಷದ ಮೌನ ವ್ರತ. ನಾನೇ ಮಾತಾಡೋಣ ಎಂದು ಕೊಂಡಾಗಲೇ ನೀ, “ಹೇಳು” ಅಂದೆ. ಅಬ್ಬ ಮಾತಡ್ದಿ ತಾನೆ. ಇನ್ನು ನಂತರದ ನನ್ನ ಕಾರ್ಯ. ನನ್ನ ಬಾಯಿಗೆ ಲಗಾಮು ಎಂಬುದೆ ಇರಲಿಲ್ಲ. ನಿನ್ನ ಎಲ್ಲಾ ಪ್ರಶ್ನೆಗಳು, ಉತ್ತರಗಳು, ಬೇಕು ಬೇಡಗಳಿಗೆ ಉತ್ತರಿಸಿದ್ದೆ. ನನ್ನ ಹೃದಯದ ವೇಗ ನನಗೇನೆ ಕೇಳಿಸುವಷ್ಟ್ಟು ಜೋರಾಗಿ ಹೊಡಕೊಳ್ಳುತಿತ್ತು.
ಪಾಪ. ನನ್ನ ಫ್ರೆಂಡ್ ಆಗಿಯೇ ನೊಡ್ತಾ ಎದ್ದಾಳೆ, ಮಾತಡ್ತ ಇದ್ದಾಳೆ. ಹೀಗೆನೆ ಇದ್ದು ಬಿಡೋಣ ಅಂದುಕೊಂಡೆ. ಆದ್ರು ನಿನ್ನ ಮೇಲಿನ Possessive ಅದನ್ನು ಬಿಗಿ ಹಿಡಿದಿತ್ತು. ನಿನ್ನನ್ನು ಬೇರೆಯವನು ಪ್ರೀತಿಸಿಬಿಟ್ರೆ! ನೀನೂ ಅವನನ್ನೇ ಒಪ್ಕೊಂಡು ಬಿಟ್ರೆ! ಅಬ್ಬಾ ಬೇಡ, ಅದಕೇನೆ ಎದೆಯ ಅಂತರಾಳದಿಂದ ಒಂದೇ ಮಾತನ್ನ ಹೇಳಿ ಬಿಟ್ಟೆ.”I Love You”, ಏಕೊ ಆ ಮಾತನ್ನ ಕೇಳೇ ಇಲ್ಲ ಎನ್ನುವ ಹಾಗೆ ನನ್ನ ನೊಡಿದೆ. ನನಗೆ ದಿಗಿಲು, ಏನು ಹೆಳ್ತಾ ಇಲ್ಲವಲ್ಲ ಎಂಬ ದುಗುಡ. “Plz ತುಂಬಾ ತುಂಬಾ ಪ್ರೀತಿಸಿದೀನಿ, ಯಾಕೋ ಗೋತ್ತಿಲ್ಲ, ನನ್ನೋಂದಿಗೆ ನೀನಿರಬೇಕು. ನನ್ನ ಬಾಳಿನ ಹಾಡಿಗೆ ಶೃತಿಯಾಗಬೇಕು. ನಿನ್ನ ನಗುವೇ ನನ್ನ ನೋವಿಗೆ ಅಮೃತವಾಗಬೇಕು, ನಿನ್ನ ಹೆಜ್ಜೆ ಹಿಂದೆ ನನ್ನದೊಂದು ಹೆಜ್ಜೆ ಇರಬೇಕು, ಕೊನೆಯದಾಗಿ ನಿನ್ನ ಹೆಸರಿನ ಮುಂದೆ ನನ್ನ ಹೆಸರಿರಬೇಕು, ಎಂಬುದೇ ಈ ಮುಗ್ದ, ಬೆಂದ ಮನಸ್ಸಿನ ಹಂಬಲ.”
..........(ಇಲ್ಲ...ಉತ್ತರ ಬೇರೆಯೇ ಆಗಿತ್ತು)
“ಫ್ರೆಂ ಡ್ಸ್ ಆಗಿಯೇ ಇದ್ವಿ, ಫ್ರೆಂ ಡ್ಸ್ ಆಗಿಯೇ ಇರೋಣ”.
ಅಬ್ಬ ಎಂಥಾ ಒಳ್ಳೇ ಮಾತು, ಅದೂ ನಿನ್ನ ಬಾಯಿಂದ. ನನಗೆ ದಿಕ್ಕೇ ತೋಚಂತಿಲ್ಲ. ಇನ್ನೂ ಒಂದು ಸಲ ಒತ್ತಿ ಒತ್ತಿ ತಲೆ ಬಾಗಿಕೊಂಡು ಹೇಳಿದೆ, “ದಯವಿಟ್ಟು, ಅರ್ಥ ಮಾಡಿಕೊಳ್ಳು”......
“ ......ಯಾಕೆ ನನ್ನ ಪ್ರೀತಿಸ್ತ ಇದ್ದೀಯಾ?”
ಛತ್ರಿಯನ್ನ ಬಿಸಾಕಿ ನನ್ನ ಮುಖವನ್ನೂ ನೋಡದೆ ಹಿಂದೆಯಿಂದಲೇ ಹೋದೆ.
ಹಿಂದುರುಗಿ ನೋಡಿದಾಗ ನೀನಿಲ್ಲ. ನನ್ನ ಕಣ್ಣೀರು ನನ್ನ ಕಾಲನ್ನು ತೊಳೆಯುತಿತ್ತು. ನನ್ನ ರೂಪು, ನನ್ನ ನೋವನ್ನು ಕಂಡು ಭಾನು ಇನ್ನೂ ಜೋರಾಗಿ ಧೋ ಅನ್ನುತ್ತಿದ್ದ. ಅಳುವಿನಲ್ಲೂ ಸಾಥ್ ಕೊಟ್ಟಿದ್ದ. ನಾನಳುವುದೋ? ಅವನಳುವುದೋ,?, ಇಬ್ಬರೂ ಜೋರಾಗಿ ಅಳುತಿದ್ದೆವು, ಅವನು ಹೊಡೆದಿದ್ದ ಸಿಡಿಲಿಗಿಂತ ನೀ ತಿರಸ್ಕರಿಸಿ, ಅಂದ ಮಾತಿನ ಸಿಡಿಲು ನನ್ನ ಮನಸ್ಸಿಗೆ ಬಡಿದಾಗಿತ್ತು.
ಯಾಕೆ ಪ್ರೀತಿಸಲಿಲ್ಲ ಅಂದ್ರೆ, ಸಾವಿರಾರು ಕಾರಣ ಕೊಡಬಹುದು. ಆದ್ರೆ ಯಾಕೆ ಪ್ರೀತಿಸ್ತ ಇದ್ದೀಯ ಅಂದ್ರೆ ಏನು ಕಾರಣ ಕೊಡಲಿ.?
ಕಾರಣ ಕೊಡೋಣ ಅಂದ್ರೆ ಅಲ್ಲಿ ನೀನಿಲ್ಲ.....
ಬರೀ......ನಾನು......ನಾನು ಮಾತ್ರ.
ಕಾಯಬೇಕಿತ್ತು.ಇಲ್ಲದಿದ್ದಲ್ಲಿ ಫ್ರೆಂ ಡ್ಸ್ ಆಗಿಯೇ ಇರಬಹುದಿತ್ತು. ಎರಡೂ ನನ್ನ ಬಾಳಿಗೆ ಬಂದೊದಗಲಿಲ್ಲ. ಮುಖ ಕಂಡರೂ ಮಾತಡಿಸುತಿಲ್ಲ. ನನ್ನ ಮೇಲೆ ಅಸಹ್ಯನ? ಅದೂ ಗೊತ್ತಿಲ್ಲ. Sorry ಹೇಳೋಣ ಎಂದರೆ ನಾನೇನು ಅಷ್ಟೊಂದು ದೊಡ್ಡ ತಪ್ಪು ಮಾಡಿದವನಲ್ಲ. ನಿನ್ನದೇ ತಪ್ಪು ಎಂದು ಹೇಳುವ Selfish ಅಲ್ಲವೇ ಅಲ್ಲ. ಆದರೂ ಒಂದೆರಡು ಮಾತು ಹೇಳುತಿದ್ದೇನೆ ಕೇಳು.
“ ನಾನು ಎಂದೂ ಒಂದು ಹುಡುಗಿಯ ನೆಪದಲ್ಲಿ, ನೆನಪಲ್ಲಿ ಮುಳುಗಿದವನಲ್ಲ, ರಾತ್ರಿ ಕಳೆದವನಲ್ಲ. ನಿಜವಾಗಿ ಹೇಳಬೇಕೆಂದರೆ ನಾನು ಪ್ರೀತಿಯ ಅರ್ಥವನ್ನು ಅರಿಯದೇ 2-3 ಹುಡುಗಿಯರ ಮನಸ್ಸುಗಳನ್ನು ಅರ್ಥಮಾಡಿಕೊಂಡವನಲ್ಲ, ಅವರ ಪ್ರೀತಿಯ ಕರೆಗೆ ಓ ಗೊಟ್ಟವನಲ್ಲ. ನಡು ರಾತ್ರಿ ನನ್ನ Mobile, Smsನ Tone ರಿಂಗಿಸಿದಾಗ ಅದು ನಿನ್ನದೇ ಇರಲಿ ಎಂದು ಹೇಳುತ್ತಾ ಓದುತ್ತಿದ್ದೆ. ಎಷ್ಟೊಂದು ಹಟವಿತ್ತು ಗೊತ್ತ!? ಹೌದು! ನಾನೊಬ್ಬ ಬೆರಳಷ್ಟು ಕೆಟ್ಟ ಚಟಗಳನ್ನು ಕಂಡು ಕೊಂಡಂತಹ ಹುಡುಗ. ಅದನ್ನೂ ದೂರ ನೂಕಿ ಬಿಟ್ಟಿದ್ದೆ, ಅದೂ ನಿನಗೋಸ್ಕರ.
ನ ಇನ್ನು ಪ್ರೀತಿಸುವ ಹುಡುಗಿ ಅವಳು ನನ್ನ ಮಗಳಾಗಿರಬೇಕು, ಅದಕ್ಕಿಂತ ಹೆಚ್ಚಾಗಿ ಅವಳು ನಮ್ಮ ಮಗಳಾಗಿರಬೇಕು. ಇದು ಆಶೆಯಲ್ಲ ನನ್ನ ಜೀವನಕ್ಕಿರುವ ದಾರಿಗಳಲ್ಲಿ ಒಂದು.
ಇನ್ನು ನೀ ಸಿಕ್ತಿಯೋ ಇಲ್ಲವೋ ಗೊತ್ತಿಲ್ಲ. ಅದು ನಿನಗೆ ಬಿಟ್ಟದ್ದು. ಉಹುಂ......ಏನೂ ತೋಚುತಿಲ್ಲ. ನೀನು ಇರಬಹುದಾದ ನನ್ನ ಜೀವನವನ್ನೆಲ್ಲ ಕಂಡಿದ್ದೆ. ನೀ ಇರದಿದ್ದುದನ್ನು ಕಂಡಿರಲೇ ಇಲ್ಲ.
ಕಾಯ್ತಿನಿ. ಕಾಯ್ತ ಇರ್ತಿನಿ.
ನೀ ಸಿಕ್ತಿಯಾ, ಒಪ್ಕೋತಿಯಾ ಎನ್ನೋ ಸಾವಿರ ನಂಬಿಕೆಗಳಿಂದ.
ಸಿಗದೇ ಇದ್ರೇ?.....
ಉಹುಂ........
ನನ್ನ ಬಾಳಿನಲ್ಲಿ ಗೀಚಲು ಎಷ್ಟೋ ಪುಟಗಳಿವೆ.
ಈ ಹೊತ್ತಿಗೆ ನನ್ನ ಹೆಸರು ಗೊತ್ತಾಗಿರಬೇಕಲ್ವ...
ಇಂತೀ ನಿನ್ನ (....ನೀನೆ ಹೇಳು ಏನಾಗಬೇಕೆಂದು...)