ಬಾಳೆದಿಂಡಿನ ಅಂಬಡೆ
ಬೇಕಿರುವ ಸಾಮಗ್ರಿ
ಬೇಕಾಗುವ ವಸ್ತುಗಳು: ಬಾಳೆ ದಿಂಡು ಸಣ್ಣ ತುಂಡು, ತೊಗರಿ ಬೇಳೆ ೧/೨ ಕಪ್, ಬೆಳ್ತಿಗೆ ಅಕ್ಕಿ ೧/೨ ಕಪ್, ತೆಂಗಿನ ತುರಿ ೧ ದೊಡ್ಡ ಚಮಚ, ಕೆಂಪು ಮೆಣಸು ೬-೭, ಸ್ವಲ್ಪ ಇಂಗು, ಹುಣಸೆ ಹುಳಿ, ರುಚಿಗೆ ಉಪ್ಪು. ಕರಿಯಲು ಎಣ್ಣೆ
ತಯಾರಿಸುವ ವಿಧಾನ
ತಯಾರಿಕಾ ವಿಧಾನ: ಮೊದಲಿಗೆ ಬಾಳೆದಿಂಡಿನ ನಾರನ್ನು ತೆಗೆದು ಸಣ್ಣ ಸಣ್ಣ ತುಂಡುಗಳಾಗಿ ಮಾಡಿ. ಅರ್ಧ ಗಂಟೆ ನೆನೆಯಲು ಹಾಕಿದ ಅಕ್ಕಿ ಹಾಗೂ ತೊಗರಿ ಬೇಳೆಯನ್ನು ಜಾಲರಿಯಲ್ಲಿ ನೀರು ಹೋಗುವಂತೆ ಜಾಲಾಡಿ. ಬಾಳೆದಿಂಡನ್ನು ಹೊರತು ಪಡಿಸಿ ಉಳಿದೆಲ್ಲಾ ಸಾಮಗ್ರಿಗಳನ್ನು ತರಿ ತರಿಯಾಗಿ ನೀರನ್ನು ಹಾಕದೇ ರುಬ್ಬಿರಿ. ಅದಕ್ಕೆ ಬಾಳೆದಿಂಡಿನ ತುಂಡುಗಳನ್ನು ಸೇರಿಸಿ ಅಂಬಡೆ ಆಕಾರದಲ್ಲಿ ಉಂಡೆಗಳನ್ನಾಗಿ ಮಾಡಿ ಕಾದ ಎಣ್ಣೆಯಲ್ಲಿ ಕರಿಯಿರಿ.
ಹೇಳಿದ್ದು ನನ್ನ ಅಮ್ಮ ಕೆ.ಪಿ.ಸುಲೋಚನಾ ರಾವ್