ಬಾಳೆದಿಂಡಿನ ದೋಸೆ

ಬಾಳೆದಿಂಡಿನ ದೋಸೆ

ಬೇಕಿರುವ ಸಾಮಗ್ರಿ

ಸಣ್ಣಗೆ ಹೆಚ್ಚಿದ ಬಾಳೆದಿಂಡಿನ ಹೋಳು ೧ ಕಪ್, ಬೆಳ್ತಿಗೆ ಅಕ್ಕಿ ೨ ಕಪ್, ಕಾಯಿತುರಿ ೧/೪ ಕಪ್, ಉಪ್ಪು ರುಚಿಗೆ ತಕ್ಕಷ್ಟು, ತುಪ್ಪ ಸ್ವಲ್ಪ.

ತಯಾರಿಸುವ ವಿಧಾನ

ಅಕ್ಕಿಯನ್ನು ೧-೨ ಗಂಟೆಗಳ ಕಾಲ ನೀರಿನಲ್ಲಿ ನೆನೆ ಹಾಕಿ. ಅಕ್ಕಿ ಜತೆ ಸಣ್ಣಗೆ ಹೆಚ್ಚಿದ ಬಾಳೆದಿಂಡಿನ ಹೋಳು, ಕಾಯಿತುರಿ, ಉಪ್ಪು ಸೇರಿಸಿ ನುಣ್ಣಗೆ ರುಬ್ಬಿ. ಹಿಟ್ಟು ನೀರುದೋಸೆಗಿಂತ ಸ್ವಲ್ಪ ದಪ್ಪಕ್ಕಿರಲಿ. ಕಾದ ಕಾವಲಿಗೆ ಮೇಲೆ ಎಣ್ಣೆ ಸವರಿ ತೆಳುವಾಗಿ ದೋಸೆ ಹುಯ್ಯಿರಿ. ಮುಚ್ಚಳ ಮುಚ್ಚಿ ೨ ನಿಮಿಷ ಬೇಯಿಸಿ. ಆಮೇಲೆ ಒಂದು ಚಮಚ ತುಪ್ಪ ಹಾಕಿ ತೆಗೆಯಿರಿ. ಇದನ್ನು ಯಾವುದೇ ಚಟ್ನಿಯೊಂದಿಗೆ ಸವಿಯಬಹುದು.

- ಸಹನಾ ಕಾಂತಬೈಲು, ಮಡಿಕೇರಿ