ಬಾಳೆಹಣ್ಣಿನ ಸಾಸಿವೆ
ಬೇಕಿರುವ ಸಾಮಗ್ರಿ
ಬಾಳೆಹಣ್ಣು ೨-೩. ಕಾಯಿತುರಿ ೧/೨ ಲೋಟ, ಸಾಸಿವೆ ೧ ಚಮಚ, ಕೊತ್ತಂಬರಿ ೧/೪ ಚಮಚ. ಎಳ್ಳು ೧/೪ ಚಮಚ,ಕೆಂಪು ಮೆಣಸು ೧/೨ ಚೂರು, ಹಸಿಮೆಣಸು ೧-೨, ಅರಸಿನ ೧/೪ ಚಮಚ. ಮೊಸರು ೧-೨ ಚಿಕ್ಕಸೌಟು, ರುಚಿಗೆ ಉಪ್ಪು ಬೇಕಾದರೆ ಬೆಲ್ಲ. ಒಗ್ಗರಣೆಗೆ ಕೆಂಪು ಮೆಣಸು, ಸಾಸಿವೆ, ಎಣ್ಣೆ ೧ ಚಮಚ, ಬೇಕಾದರೆ ಇಂಗಿನ ಚೂರು,
ತಯಾರಿಸುವ ವಿಧಾನ
ಬಾಳೆಹಣ್ಣನ್ನು ಚಿಕ್ಕದಾಗಿ ಹೆಚ್ಚಿಟ್ಟುಕೊಳ್ಳಿ. ಕಾಯಿತುರಿ, ಕೆಂಪುಮೆಣಸು, ಹಸಿಮೆಣಸು, ಸಾಸಿವೆ, ಎಳ್ಳು, ಕೊತ್ತಂಬರಿ ಅರಿಸಿನ ಹಾಕಿ ರುಬ್ಬಿ ಇದಕ್ಕೆ ಮೊಸರು, ಉಪ್ಪು ಬೇಕಾದರೆ ಬೆಲ್ಲ ಹೆಚ್ಚಿದ ಬಾಳೆಹಣ್ಣು, ಹಾಕಿ ಚೆನ್ನಾಗಿ ಕಯ್ಯಾಡಿಸಿ ಇದಕ್ಕೆ ಕೆಂಪು ಮೆಣಸು, ಸಾಸಿವೆ, ಎಣ್ಣೆ, ಇಂಗು ಹಾಕಿ ಚಟಪಟ ಎಂದ ಮೇಲೆ ಸಾಸಿವೆಗೆ ಹಾಕಿ ಕೈಯ್ಯಾಡಿಸಿ,
-ಕಲ್ಪನಾ ಪ್ರಭಾಕರ ಸೋಮನಳ್ಳಿ