ಬಾಳೆಹಣ್ಣಿನ ಹಲ್ವಾ

ಬಾಳೆಹಣ್ಣಿನ ಹಲ್ವಾ

ಬೇಕಿರುವ ಸಾಮಗ್ರಿ

ನೇಂದ್ರ ಬಾಳೆಹಣ್ಣು ೨-೩, ತುಪ್ಪ ೧ ರಿಂದ ಒಂದೂವರೆ ಕಪ್, ಚಿಟಿಕೆ ಉಪ್ಪು. ಸಕ್ಕರೆ ಎರಡುವರೆ ಕಪ್, ಏಲಕ್ಕಿ ಹುಡಿ, ಗೋಡಂಬಿ ಚೂರುಗಳು.

ತಯಾರಿಸುವ ವಿಧಾನ

ಎರಡು ಕಪ್ ಕಿವುಚಿದ ಬಾಳೆಹಣ್ಣು ಪೇಸ್ಟನ್ನು ನಾಲ್ಕು ಚಮಚ ತುಪ್ಪ ಸೇರಿಸಿ ಬಾಣಲೆಯಲ್ಲಿ ಸಣ್ಣ ಉರಿಯಲ್ಲಿ ಸಟ್ಟುಗದಲ್ಲಿ ಮಗುಚುತ್ತಾ ಇರಬೇಕು. ಆಗಾಗ ಸ್ವಲ್ಪ ತುಪ್ಪ ಹಾಕುತ್ತಿರಬೇಕು. ಹಣ್ಣಿನ ಹಸಿ ವಾಸನೆ (ಸ್ಮೆಲ್) ಹೋದಾಗ ಘಂ ಪರಿಮಳ ಬರುತ್ತದೆ. ಆಗ ಚಿಟಿಕೆ ಉಪ್ಪು ಸೇರಿಸಿ (ಇದು ಪಾಕ ಕಡ್ಪ ಆಗಲು ಸಹಕಾರಿ) ಸಕ್ಕರೆ, ಸ್ವಲ್ಪ ಏಲಕ್ಕಿ ಪುಡಿ ಸೇರಿಸಿ ಮಗುಚುತ್ತಿರಬೇಕು. ತುಪ್ಪ ಪಾಕದಲ್ಲಿ ಬಿಟ್ಟು ಕೊಂಡು ಬರುವಾಗ, ಮತ್ತೆ ತುಪ್ಪ ಹಾಕುವುದು ಬೇಡ. ತುಪ್ಪದಲ್ಲಿ ಹುರಿದ ಗೋಡಂಬಿ ಸೇರಿಸಿ. ಸಟ್ಟುಗದಲ್ಲಿ ಮಗುಚುವಾಗ ಬಾಣಲೆಯಿಂದ ಪಾಕ ಬಿಡ್ತಾ ಬಂದಾಗ ತುಪ್ಪ ಸವರಿದ ತಟ್ಟೆಗೆ ಹಾಕಿ ,10 ನಿಮಿಷದೊಳಗೆ ತುಂಡಾಗುವಂತೆ ಗೆರೆ ಹಾಕಬೇಕು. ಸವಿಯಾದ ಹಲ್ವಾ ತಿನ್ನಲು ರುಚಿ.

-ರತ್ನಾ ಕೆ.ಭಟ್, ತಲಂಜೇರಿ