ಬಾಳೆ ಹಣ್ಣಿನ ಗಾರಿಗೆ

ಬಾಳೆ ಹಣ್ಣಿನ ಗಾರಿಗೆ

ಬೇಕಿರುವ ಸಾಮಗ್ರಿ

ಬಾಳೆಹಣ್ಣು - 3, ಅಕ್ಕಿ - 1 ಕಪ್, ಗೋಧಿ ಹಿಟ್ಟು -ಸ್ವಲ್ಪ, ಸಕ್ಕರೆ - ಒಂದು ಕಪ್, ಏಲಕ್ಕಿ ಶುಂಠಿ -ಸ್ವಲ್ಪ, ಕೊಬ್ಬರಿ - 1 ಕಪ್, ತುಪ್ಪ/ಎಣ್ಣೆ - 1 ಕಪ್

ತಯಾರಿಸುವ ವಿಧಾನ

ನೀರಿನಲ್ಲಿ ನೆನೆಹಾಕಿದ ಅಕ್ಕಿಯೊಂದಿಗೆ ಬಾಳೆಹಣ್ಣನ್ನು ಹಾಕಿ ನುಣ್ಣಗೆ ರುಬ್ಬಿಕೊಳ್ಳಿ. ಪುಡಿ ಮಾಡಿದ ಸಕ್ಕರೆ, ಏಲಕ್ಕಿ, ಶುಂಠಿ ಹಾಗೂ ತುರಿದ ಕೊಬ್ಬರಿ ಇವೆಲ್ಲವನ್ನು ಮಿಶ್ರ ಮಾಡಿ ಚೆನ್ನಾಗಿ ನಾದಿ. ಸಣ್ಣ ಸಣ್ಣ ಆಕಾರದಲ್ಲಿ ಉಂಡೆ ಮಾಡಿ. ತುಪ್ಪ/ಎಣ್ಣೆಯಲ್ಲಿ ಹೊಂಬಣ್ಣ ಬರುವವರೆಗೂ ಕರಿಯಿರಿ. ಬಿಸಿ ಬಿಸಿ ಬಲು ರುಚಿ .

Comments

Submitted by ಸುಮ ನಾಡಿಗ್ Mon, 03/25/2013 - 12:35

ಮಮತಾ,
ಈ ಅಡುಗೆಗೆ, ಯಾವ ವಿಧದ ಬಾಳೇಹಣ್ಣು ಉತ್ತಮ? ಏಲಕ್ಕಿ, ಗಾಳಿ, ನೇಂದ್ರ ಬಾಳೆ .....

Submitted by sasi.hebbar Mon, 03/25/2013 - 14:48

ಮೊತ್ತ ಮೊದಲ ಬಾರಿಗೆ ಈ ರೀತಿಯ ತಿನಿಸು ಒಂದು ಇದೆ ಎಂದು ನನಗೆ ನಿಮ್ಮ ಲೇಖನದಿಂದ ಗೊತ್ತಾಯಿತು. ಓದುವಾಗ ಚೆನ್ನಾಗಿದೆ, ತಿನ್ನುವಾಗಲೂ ಚೆನ್ನಾಗಿರಬಹುದು!