ಬಾಳ ದಾರಿ

ಬಾಳ ದಾರಿ

ಬರಹ

ಕೂಡಿ ಕಳೆದು ಗುಣಿಸಿ ಭಾಗಿಸಿ ಏನ ಮಾಡುವೆ?
ಬಾಳದಾರಿಯಲ್ಲಿ ನೀನು ಏತ್ತ ಸಾಗಿಹೆ?

ಸಾದನೆಯ ಮೆಟ್ಟಿಲನ್ನು ಏಷ್ಟು ಏರಿಹೆ?
ಹಾದಿಯಲ್ಲಿ ಸುಖವು ಮಾತ್ರ ಗೌಣವಾಗಿದೆ

ಏರಿ ಏರಿ ಏರಿ ಏರಿ ಮೇಲೆ ಹೊಗಿಹೆ
ಏರುವಾಗ ದಾರಿ ನಗುವು ಕಾಣದಾಗಿದೆ

ಇಂಥ ಹಾದಿ ಬೇಕೇ ನಿನಗೆ ಹಾಗೆ ಸುಮ್ಮನೆ
ಮುಂದೆ ಮುಂದೆ ಹೊಗುವ ಮೊದಲು ಯೋಚಿಸೊಮ್ಮನೆ