ಬಾಳ ಪಯಣದ ಜೊತೆಗೆ...
ಕವನ
ಬಾಳ ಪಯಣದ ಜೊತೆಗೆ
ನೀನು ಸೆರೆಯಾದೆ ಅಂದು
ನನ್ನೊಲುಮೆ ಜೇನ ಹನಿಯೆ
ನಿನ್ನಂತರಂಗದೊಳು
ನಾ ಈಜಿ ನಲಿಯುತಿರೆ
ಬದುಕೊಂದು ಪ್ರೇಮ ತುಂಗೆ
ಮುತ್ತಿನರಮನೆ ಕಟ್ಟಿ
ಅದರೊಳಗೆ ಕೂರಿಸಿದೆ
ಚೆಲುವಲ್ಲಿ ನೀನು ಮಿಂದೆ
ಕನಸಿನೊಳಗಿನ ಪ್ರೀತಿ
ನನಸಿನಲಿ ಬಂದಿಹುದು
ಒಲವಿನಾ ಪ್ರೀತಿ ಮಹಲೆ
ಮಾಣಿಕ್ಯ ವಜ್ರದೊಳು
ಹೊಳೆವ ಬಂಗಾರವೆ
ಬಂದಿರುವೆ ಮುಕುಟ ಮಣಿಯೆ
ಹೃದಯ ಭಾಷೆಯ ನಡುವೆ
ಸಾಗುತಲಿ ಹರುಷದಲೆ
ಬೆರೆಯೋಣ ಸವಿಯೊಲುಮೆಯೆ
-ಹಾ ಮ ಸತೀಶ, ಬೆಂಗಳೂರು
ಚಿತ್ರ ಕೃಪೆ: ಇಂಟರ್ನೆಟ್ ತಾಣ
ಚಿತ್ರ್