ಬಾಳ ಬಿಸಿ ಮಾಡು ಬಾ...

ಬಾಳ ಬಿಸಿ ಮಾಡು ಬಾ...

ಕವನ

ಹೊಸತಾದ ಹೂ ನಾನು  

ಹಸನಾಗಿ ಅರಳಿಹೆನು 
ಬಸಿದ ಮಧುವನು ಕಸಿದು 
ಬಾಳ ಬಿಸಿ ಮಾಡು ಬಾ...!
ಇಂದು ಇಂದಿಗೆ ನಲ್ಲ 
ನಾಳೆ ಎಂಬದು ಸಲ್ಲ 
ಬೆಸೆದು ಎದೆಯನೆದೆಗೆ 
ಬಾಳ ಹಸಿರಾಡು ಬಾ...!
-ಮಾಲು