ಬಾಳ ಸಂಜೆಯಲೊಮ್ಮೆ

ಬಾಳ ಸಂಜೆಯಲೊಮ್ಮೆ

ಕವನ

 

ಬಾಳ ಸಂಜೆಯಲೊಮ್ಮೆ 
ಹಿಂತಿರುಗಿ ನೋಡಿರಲು..... 
ನನಸಾಗದಾ ಕನಸುಗಳು ಸಾಲು ಸಾಲು
ಮೂರಾರು ವರುಷಗಳು
ತಾಯಿ ಪ್ರೀತಿಯ ಗುಂಡಿಯಲಿ ಮಿಂದೆದ್ದ
ಆ ಬಾಲ್ಯದ ಮಧುರ ನೆನಪುಗಳು ಈಗೇಲ್ಲಿ??
 
ಬಾಲ್ಯದ ದಿನಗಳಲಿ ದಿನ ದಿನವೂ ಹೊಸ ಕನಸು
ಬಂದು ಹೊದರೆಲ್ಲ ಭೂರಮೆಯರು
ಹಸಿ ಮನಸಿನ ಪ್ರೀತಿ ಪ್ರೆಮಗಳು
ಅರ್ಥವಿಲ್ಲದ ಗೀತೆಯಹುದು
 
ಜೀವನದ ಹಾದಿಯಲಿ ಎದುರಾದ ತಿರುವಿನಲಿ
ಕಾಲಚಕ್ರಕೆ ಸಿಕ್ಕು ಸತ್ತ ಕನಸುಗಳೆಸ್ಟು??
ಸಾಧಿಸುವ ಛಲದಲ್ಲಿ ಕಂಡ ಕನಸುಗಳಿಂದು
ಚಪ್ಪಾಳೆ ತಟ್ಟಿ ನಗುತಿಹವು
 
ಹೆಪ್ಪುಗಟ್ಟಿದ ಕಣ್ಣೀರು ಇಬ್ಬನಿಯಾಗಿ
ಮುಸ್ಸಂಜೆ ಮುಖ ಕೆಂಪಾಗಿಹುದು
ಹಕ್ಕಿ,ಪಕ್ಕಿಗಳೇಲ್ಲ ಗೂಡು ಸೇರಿಹವು.
ವ್ಯರ್ಥವಾಗಿ ಕಳೆದ ದಿನಗಳನು ನೆನೆದು.
 
by v.m.bhat