ಬಾಳ ಹಾಡು
ಕವನ
ನಲಿವ ಹಾಡ
ಹಾಡು ನೀನು
ಬದುಕು ಸಾಗ್ವ ರೀತಿಗೆ
ನವಿಲ ನೃತ್ಯ
ನೋಡಿ ಖುಷಿಯು
ನಾಟ್ಯದೊಲುಮೆ ನಡಿಗೆಗೆ
ನಿನ್ನ ಜೊತೆಗೆ
ಹೆಜ್ಜೆ ಹಾಕಿ
ಬರುವೆ ನಾನು ಮೆಲ್ಲಗೆ
ಮುಡಿಯ ತುಂಬ
ಹೂವ ಮುಡಿಯೆ
ಸನಿಹ ನಿಲುವೆ ಮಲ್ಲಿಗೆ
ಸವಿಯ ಸುಖವ
ಪಡೆದೆನಿಂದು
ಕೈಯ ಹಿಡಿದ ರೀತಿಗೆ
ಹೀಗೆಯಿರಲಿ
ಕೊನೆಯ ತನಕ
ಕಂದ ಬರುವ ಬಾಳಿಗೆ
ಹಾ ಮ ಸತೀಶ ಬೆಂಗಳೂರು
ಚಿತ್ರ ಕೃಪೆ: ಇಂಟರ್ನೆಟ್ ತಾಣ
ಚಿತ್ರ್