ಬಾವಲಿಗಳು ಏಕೆ ತಲೆಕೆಳಗಾಗಿ ನೇತಾಡುತ್ತವೆ?

ಬಾವಲಿಗಳು ಏಕೆ ತಲೆಕೆಳಗಾಗಿ ನೇತಾಡುತ್ತವೆ?

ನಮಗೆ ಹೆಚ್ಚು ಹೊತ್ತು ಶೀರ್ಷಾಸನ ಮಾಡಲು ಸಾಧ್ಯವಾಗುವುದಿಲ್ಲ. ಕಾರಣ, ರಕ್ತವು ನಮ್ಮ ತಲೆಗೆ ರಭಸದಿಂದ ಹರಿಯುತ್ತದೆ ಮತ್ತು ನಮ್ಮ ಮೆದುಳಿಗೆ ಅದು ಹಾನಿಕಾರಕವಾಗಬಹುದು ಎಂದು ತಜ್ಞರು ಅಭಿಪ್ರಾಯಪಡುತ್ತಾರೆ. ಆದರೆ, ಬಾವಲಿಗಳಿಗೆ ತಲೆಕೆಳಗಾಗಿ ನೇತಾಡಲು ಹೇಗೆ ಸಾಧ್ಯವಾಗುತ್ತದೆ? ಬಾವಲಿಗಳಿಗೆ ಸಾಮಾನ್ಯವಾಗಿ ತಲೆಕೆಳಗಾಗಿ ನೇತಾಡುವುದು ಆರಾಮದಾಯಕ ಭಂಗಿಯಾಗಿದೆ. ಇತರ ಸ್ತನಿಗಳಿಗಿಂತ ಬಾವಲಿಗಳ ಗಾತ್ರವು ಚಿಕ್ಕದಾಗಿರುವ ಕಾರಣ ಅದು ತಲೆಕೆಳಗಾಗಿ ನೇತಾಡುತ್ತಿರುವಾಗ ಅದರ ಹೃದಯವು ರಕ್ತವನ್ನು ಪಂಪ್ ಮಾಡಿ ಇತರ ಅಂಗಗಳಲ್ಲಿ ಹರಡಿಸಲು ಸಹಾಯಕವಾಗುತ್ತದೆ.

ಈಗ ನಾವು ಮಾನವನ ಅಂಗವನ್ನು ಉದಾಹರಣೆಯಾಗಿ ಪರಿಗಣಿಸೋಣ. ನಾವು ನೆಲದ ಮೇಲೆ ನಿಂತಿರುವಾಗ ನಮ್ಮ ಪಾದಗಳಲ್ಲಿ ರಕ್ತವು ಶೇಖರಣೆಗೊಳ್ಳುವುದಿಲ್ಲ. ಕಾರಣ: ನಮ್ಮ ರಕ್ತನಾಳಗಳ ಮೇಲೆ ಸೀರೆಯ ಕವಾಟಗಳನ್ನು ಹೊಂದಿದ್ದೇವೆ. ಅದು ರಕ್ತವನ್ನು ಹಿಂದಕ್ಕೆ ಹರಿಯುವುದನ್ನು ತಡೆಯುತ್ತದೆ. ಅಂದ ಹಾಗೆ ನಮ್ಮ ನರಮಂಡಲಗಳು ಸಮಾನವಾಗಿ ಕವಾಟಗಳನ್ನು ಹೊಂದಿಲ್ಲ. ಹಾಗಾಗಿ, ನಮಗೆ ಹೆಚ್ಚು ಹೊತ್ತು ತಲೆಕೆಳಗೆ ಮಾಡಲು ಸಾಧ್ಯವಾಗುವುದಿಲ್ಲ. ಆದರೆ, ಬಾವಲಿಗಳಿಗೆ ಹಾಗಿಲ್ಲ. ಅವುಗಳಿಗೆ ಹೆಚ್ಚಾಗಿ ನರಗಳು [Arterial Valves] ಕೊರಳಿನಲ್ಲಿದೆ. ಈ ನರಮಂಡಲಗಳು ಅವುಗಳಿಗೆ ದೀರ್ಘಕಾಲದವರೆಗೆ ತಲೆಕೆಳಗಾಗಿ ನೇತಾಡಲು ನೆರವಾಗುತ್ತದೆ.

ಹಾಗೆಯೇ, ನಮಗೆ ಭಾರವನ್ನು ಎತ್ತಲು ಮಾಂಸಖಂಡಗಳ ಅಗತ್ಯವಿರುವಂತೆ ಬಾವಲಿಗಳಲ್ಲಿ ಈ ಅಂಶ ವಿಭಿನ್ನವಾಗಿದೆ. ಬಾವಲಿಗಳಿಗೆ ಹಿಡಿಯಲು ಮಾಂಸಖಂಡಗಳ ಅಗತ್ಯವಿಲ್ಲ; ಅದು ತಮ್ಮ ಉಗುರುಗಳಿಂದಲೇ ಹಿಡಿದಿಟ್ಟುಕೊಳ್ಳುತ್ತದೆ. ಮನುಷ್ಯರಂತೆ ಬಾವಲಿಗಳ ಸ್ನಾಯುಗಳು ಮಾಂಸಖಂಡಗಳನ್ನು ಹಿಡಿದಿಟ್ಟುಕೊಳ್ಳುವುದಿಲ್ಲ; ಬದಲಿಗೆ, ಬಾವಲಿಗಳ ಸ್ನಾಯುಗಳು ನೇರವಾಗಿ ಬಾವಲಿಯ ದೇಹದ ಮೇಲಿನ ಭಾಗವನ್ನು ಹಿಡಿದಿಟ್ಟುಕೊಂಡಿರುತ್ತದೆ. ಹಾಗಾಗಿ, ಬಾವಲಿಗಳು ಉಗುರುಗಳಿಂದ ಗಟ್ಟಿಯಾಗಿ ಕೊಂಬೆಗಳನ್ನು ಹಿಡಿದು ತಲೆಕೆಳಗಾಗಿ ನೇತಾಡಿದರೆ ಅದಕ್ಕೆ ಆರಾಮವಾಗುತ್ತದೆ.

ಹಾಗೆಯೇ, ಬಾವಲಿಗಳ ದೇಹದ ತೂಕವು ಅದರ ಉಗುರುಗಳನ್ನು ಬಿಗಿಯಾಗಿ ಹಿಡಿದುಕೊಳ್ಳಲು ನೆರವಾಗುತ್ತದೆ. ಅದರೊಂದಿಗೆ, ಬಾವಲಿಗಳಿಗೆ ತಲೆಕೆಳಗಾಗಿ ನೇತಾಡುವುದು ಅದಕ್ಕೆ ಅದರ ಭಕ್ಷಕರಿಂದ ತಪ್ಪಿಸಿಕೊಳ್ಳುವುದರಲ್ಲಿ ಸಹಾಯಕವಾಗಿರುತ್ತದೆ. ಅಲ್ಲದೆ, ಬಾವಲಿಗಳ ರೆಕ್ಕೆಗಳು ಮತ್ತು ಕಾಲುಗಳು ಇತರ ಪಕ್ಷಿಗಳಂತೆ ಶಕ್ತಿಶಾಲಿ ಅಲ್ಲ; ಅವು ಬಹಳ ದುರ್ಬಲವಾಗಿದೆ. ಹಾಗಾಗಿ, ಅದಕ್ಕೆ ಅಪಾಯ ಎದುರುಗೊಂಡಾಗ ವೇಗವಾಗಿ ಹಾರಿಹೋಗಲು ಸಾಧ್ಯವಾಗುವುದಿಲ್ಲ. ಅಂತಹ ಸಂದರ್ಭದಲ್ಲಿ ಅದು ತಲೆಕೆಳಗಾಗಿ ನೇತಾಡುತ್ತಿರುವಾಗ ಭೂಮಿಯ ಗುರುತ್ವಾಕರ್ಷಣ ಬಲದ ಸಹಾಯದಿಂದ ಅದು ವೇಗವಾಗಿ ಕೆಳಗೆ ಹಾರುತ್ತದೆ. ಇದು ಅವುಗಳಿಗೆ ನಿದ್ರಿಸುತ್ತಿರುವಾಗ ಎದುರುಗೊಳ್ಳುವ ಅಪಾಯಗಳಿಂದ ಪಾರಾಗಲು ಬಹಳ ನೆರವಾಗುತ್ತದೆ. ಈ ಕಾರಣಗಳಿಂದ ಬಾವಲಿಗಳು ತಲೆಕೆಳಗಾಗಿ ನೇತಾಡುತ್ತವೆ!

-ಶಿಕ್ರಾನ್ ಶರ್ಫುದ್ದೀನ್ ಎಂ., ಮಂಗಳೂರು