ಬಾವುಟಗಳ ನೆಟ್ಟು...

ಬಾವುಟಗಳ ನೆಟ್ಟು...

ಕವನ

....ಹಾರಾಡುವ ದೊಡ್ಡ ದೊಡ್ಡ ಬಾವುಟಗಳ ಕೆಳಗೆ

ಅರೆಬೆತ್ತಲೆ ಹೆಣ್ಣೊಬ್ಬಳು ನೀರಾದಳು,

ಬಾವುಟಗಳು ಕೇಕೆ ಹಾಕಿ ಆಕಾಶ ನೋಡಿದವು

ಮಿಂಡನನ್ನು ನೆನೆದು.

ಸಾವಿರ ಕಣ್ಣುಗಳಾಗಿ ಅರಳಿದ ಪಾಂಚಾಲಿಯ ಸೀರೆಗೆ

ಕುದುರೆಗಳು ಕೆನೆಯುವ ಸದ್ದು ಕೇಳಿ

ಮಂಪರು ಅಡರಿತು;

ಬಾವುಟಗಳ ನೆಟ್ಟಿದ್ದ ನೆಲ ಬಂಜೆಯಾಗಿ ಆಕಾಶ

                                 ಷಂಡತ್ವ ಮೆರೆಯಿತು.