ಬಾ.... ರಾಮ...ಬಾರ...ಬಾರ....
ಓ..ಲಲ್ಲೂ ರಾಮ ಬರುವನಂತೆ ಬಾರೊ ಸಖಾ
ನಾವೆಲ್ಲಾ ಹೋಗೋಣ ಅಯೋಧ್ಯಾ ನಗರಕ!
ನೆನಪಿಸುತ್ತಿದೆ ಅಂದಿನ ಶ್ರೀ ರಾಮನ ವೈಭವ
ಬನ್ನಿರೆಲ್ಲ ನೋಡಿ ಆನಂದಿಸೋಣ ಸಂಭ್ರಮ!
ಎಲ್ಲ ಶತಮಾನಗಳಲೂ ನಿನ್ನದು ದುರ್ದೈವವೇ
ಪಿತನ ಹಿತಕೆ-ಕೈಕೆ ದುರಾಸೆಗೆ ಬಲಿಯಾದೆಯಾ?
ಜಾನಕಿಯ ಜೊತೆ ಹದಿನಾಲ್ಕು ವರ್ಷ ವನವಾಸ
ಭರತಗೆ ಸಿಂಹಾಸನವ ಕೊಟ್ಟು ಪಟ್ಟೆ ಸಂತೋಷ!
ಅಲ್ಪನ ಮಾತಿಗಂಜಿ ಸೀತಾ ಮಾತೆಯ ತ್ಯಾಗ
ಆಯಿತೇ ಲವ-ಕುಶರ ಪುತ್ರ ಶೋಕ ವಿಯೋಗ!
ಓ ಮರ್ಯಾದಾ ಪುರುಷೋತ್ತಮಾ ಶ್ರೀರಾಮ
ನಿನ್ನ ಆದರ್ಶಗಳಿಂದಲೇ ನೀನು ಸರ್ವೋತ್ತಮ!
ತ್ರೇತಾಯುಗದಿ ಅನುಭವಿಸಿದ್ದ ಕೇಳಿದ್ದೆವಂದು
ಕಲಿಯುಗದಲಿ ಅದನು ಕಣ್ಣಾರೆ ಕಂಡೆವಿಂದು!
ಅದೇನು ದುರ್ದೈವವೋ ಶ್ರೀ ರಾಮ ನಿನ್ನದು
ಕಲಿಯುಗದಲೂ ತಪ್ಪಲಿಲ್ಲ ವನವಾಸವಿಂದು!
ಅಂದು ವನವಾಸ ಕೇವಲ ಹದಿನಾಲ್ಕು ವರ್ಷ
ಇಂದು ಕಾಯಬೇಕಾಯೀತೇ ಐನೂರು ವರ್ಷ!
ಯಾರದೋ ಆಹಂಗೆ ನೀನು ಬಲಿಯಾದೆಯಾ
ಧರ್ಮ ಮತ್ಸರ ನಿನಗಂಟಿತೇ ದೇವ ಮಾನವ!
ಮತ್ತೆ ನೀ ಲಲ್ಲೂ ರಾಮನಾಗಿ ವೈಭವದ ಜನನ
ಆಗುವುದೀಗ ಮಾನವ ಧರ್ಮದ ಪುನರುತ್ಥಾನ!
ನಿನಗಿದೋ ಭವ್ಯ ಸ್ವಾಗತವು ಓ ದೇವ ಶ್ರೇಷ್ಠ
ನಿನ್ನಾದರ್ಶಗಳು ಹರಡಿ ಆಗಲಿ ದೇಶ ಸುಭೀಕ್ಷ!
-ಕೆ. ನಟರಾಜ್, ಬೆಂಗಳೂರು
ಚಿತ್ರ ಕೃಪೆ: ಇಂಟರ್ನೆಟ್ ತಾಣ
