ಬಿಟ್ಟರೆ(B) ಮತ್ತೆ(M) ತಿರುಗಿ(T) ಸಿಕ್ಕಲ್ಲ(C) !!

ಬಿಟ್ಟರೆ(B) ಮತ್ತೆ(M) ತಿರುಗಿ(T) ಸಿಕ್ಕಲ್ಲ(C) !!

ಬರಹ

ಸ್ನೆಹಿತರೆ, ನನ್ನ ಬತ್ತಳಿಕೆಯಿ0ದ ಒ0ದು ಕವನ

 

ಇದು ಬೆಂಗಳೂರು ನಗರ ಸಂಚಾರ

ಇಲ್ಲಿ ಹರಿವುದು BMTC ಮಹಾಸಾಗರ,

Timesense ಅನ್ನೊದು ಇದಕ್ಕಿಲ್ಲ

ಹಾಗಂತ ಬಿಟ್ಟರೆ ಮತ್ತೆ ತಿರುಗಿ ಸಿಕ್ಕಲ್ಲ !.

 

ಬಡವರ ಬಂಧು ,ಧೀನ ದಯಾಳು.

ಸಾರ್ವಜನಿಕರ ನಿಯ್ಯತ್ತಿನ ಆಳು

ಇದನ್ನೆರಲು ಎರಡು ಹೆಬ್ಬಾಗಿಲು

ಇದಕ್ಕೆ ಕಂಡಕ್ಟರೇ ಕಾವಲು !

 

ದುಡ್ಡಿನ ಮಿತವ್ಯಯ

ಅಂದರೆ, "ಕಾಸಿಗೆ ತಕ್ಕ ಕಜ್ಜಾಯ".

ಸೀಟಿಗಾಗಿ ಕಿತ್ತಾಟ ಸಿಗದಿದ್ದರೆ, ಪುಟ್ ಬೊರ್ಡ ನೆತಾಟ. !

 

ಹಳ್ಳ-ಕೊಳ್ಳಗಳ ಹಾರಿ

ಸಂದಿ-ಗೊಂದಿಗಳ ತೂರಿ

ನಡೆಸುವುದು ಸವಾರಿ

ಮೆಚ್ಚಲೆ ಬೇಕು ಇದರ ಕಾಯಕದ ಪರಿ !

ಅವಶ್ಯಕತೆ ಬಿದ್ದಾಗ ಇದಕ್ಕೆ ಸ್ವಲ್ಪ ಬರ

ಆದರೆ, Main Road ಲ್ಲಿ ಇದರದ್ದೇ ಅಬ್ಬರ.

 

 

ದಿನನಿತ್ಯ ಹೊರುವುದು ಇಡೀ ಬೆಂಗಳೂರ

ನಿಜವಾಗಿಯು ನಿನ್ನ ಮಹಿಮೆ ಅಪಾರ !

 ಬಂದಿರುವುದು ಬೆಂಗಳೂರ ಹರಸಿ ನೋಡಿ, ಬಿಸಿ & Busy BMTC.