ಬಿಡುಗಡೆ ದೊರಕಿದ ಮೇಲು ಕೂಡ‌

Submitted by jp.nevara on Sun, 10/11/2015 - 13:40
ಬರಹ

ಬಿಡುಗಡೆ ದೊರಕಿದ ಮೇಲು ಕೂಡ‌

ಬಂಧನದೊಳಗಿರಬೇಕೆ?

ಓ ಭಾರತ ದೇಶದ ಜನಗಳಿರಾ

ಈ ಪುಣ್ಯ ಭೂಮಿಯ ಮಕ್ಕಳಿರಾ ||

 

ಧರ್ಮದ ಬಂಧನ‌, ವೇಷದ‌  ಬಂಧನ‌

ಭಾಷೆಯ‌  ಬಂಧನ‌ ಬೇಕೆ?

ಓ ಭಾರತ ದೇಶದ ಜನಗಳಿರಾ

ಈ ಪುಣ್ಯ ಭೂಮಿಯ ಮಕ್ಕಳಿರಾ ||

 

ನಾನು ನನ್ನದು ಎಂಬುದನ‌

ಕೊಂಚ ಮನಸಿನಿಂದ ಆಚೆಗೆ ತಳ್ಳಿರಿ

ದೇಶ ಪ್ರೇಮವೆಂಬುದನ‌ 

ನಿಮ್ಮ ಮನಸಿನ ಒಳಗೆ ತುಂಬಿರಿ ||

 

ಎಷ್ಟೋ ಜನರ ನೆತ್ತರ ಕಾಣಿಕೆ

ನಮ್ಮ ನಾಡಿನ ಬಿಡುಗಡೆಯು

ಕಣ್ಣೀರಿನ ಹೊಳೆಯಲಿ ತೇಲಿ ಬಂದ‌

ಮುತ್ತದು ನಾಡಿನ ಬಿಡುಗಡೆಯು ||