ಬಿಳಿ ಬಣ್ಣದ ಬೆಳಕು ಏಳು ಬಣ್ಣದ ಕಾಮನಬಿಲ್ಲು ಆಗುವುದು ಹೇಗೆ?
ಬೆಳಕು ಎನ್ನುತ್ತಲೇ ಎಲ್ಲೋ ಒಂದು ಕಡೆ ನಮ್ಮ ಮನಸ್ಸಲ್ಲೂ ಜ್ಯೋತಿ ಬೆಳಗಿದ ಅನುಭವ. ಬೆಳಕಿದ್ದರೆ ವಿಶ್ವದಲ್ಲಿ ಇಲ್ಲರೂ ಚಟುವಟಿಕೆಯಲ್ಲಿರುತ್ತಾರೆ. ಗಿಡಗಳು ತಮ್ಮ ಆಹಾರ ಉತ್ಪಾದಿಸಿ ನಮ್ಮ ಆಹಾರವನ್ನು ನೀಡುತ್ತವೆ. ಬೆಳಕೆಂದರೆ ಜ್ಞಾನ, ಕತ್ತಲೆಂದರೆ ಅಜ್ಞಾನ ಅಂಧಕಾರ ಹೀಗೆ ಹತ್ತು ಹಲವು ವಿಶ್ಲೇಷಣೆಗಳಿವೆ. ನಮ್ಮ ಪೂರ್ವಜರು ಕಂಡು ಹಿಡಿದ ಒಂದು ಮಹತ್ತರವಾದ ಬೆಳಕೆಂದರೆ ಬೆಂಕಿ. ಅಲ್ಲಿಯವರೆಗೆ ಕೇವಲ ಸೂರ್ಯನ ಬೆಳಕನ್ನೇ ನಂಬಿದ್ದ ಆದಿ ಮಾನವರು, ಕಾಲಕ್ರಮೇಣ ಬೆಂಕಿಯನ್ನು ಕಂಡು ಹಿಡಿದನು. ಅದರಿಂದ ಅವನಿಗೆ ರಾತ್ರಿಯಲ್ಲೂ ಚಟುವಟಿಕೆಯಿಂದ ಇರುವುದು ಸಾಧ್ಯವಾಯಿತು. ಅವನ ಆಹಾರವನ್ನು ಬೇಯಿಸಿ ಅಥವಾ ಸುಟ್ಟು ತಿನ್ನುವುದು ಸಾಧ್ಯವಾಯಿತು. ಆದರೆ ನಮಗೆ ಕಣ್ಣಿಗೆ ಕಾಣುವ ಒಂದೇ ಬಣ್ಣದ ಭಾಗಶಃ ಬಿಳಿ ವರ್ಣದ ಬೆಳಕು ಏಳು ಬಣ್ಣಗಳ ಸಂಯೋಜನೆಯಿಂದ ಆಗಿದೆ ಎನ್ನುವುದು ತಿಳಿದಿರಲೂ ಬಹುದು. ಮಳೆಗಾಲದಲ್ಲಿ ಬಿಸಿಲು ಮೂಡಿದಾಗ ಕಂಡು ಬರುವ ಕಾಮನಬಿಲ್ಲು ಈ ಏಳು ಬಣ್ಣಗಳ ಬೆಳಕಿನಿಂದಲೇ ನಿರ್ಮಿತ ಎಂದು ತಿಳಿದೇ ಇರುತ್ತದೆ. ಆದರೆ ಕಾಮನಬಿಲ್ಲು ಬಿಲ್ಲಿನಂತೆ ಬಾಗಿ, ವಿವಿಧ ಬಣ್ಣಗಳು ಬೇರೆ ಬೇರೆಯಾಗಿ ಉದಾಹರಣೆಗೆ ಕೆಂಪು ಬಣ್ಣ ಮೇಲ್ಗಡೆ, ನೇರಳೆ ಕೆಳಗಡೆಗೆ ಬಾಗಿರುವುದು ಹೇಗೆ ಎನ್ನುವ ಪ್ರಶ್ನೆ ನಿಮ್ಮನ್ನು ಕಾಡುತ್ತಿರಬಹುದು. ಬನ್ನಿ ಉತ್ತರವನ್ನೊಮ್ಮೆ ನೋಡುವ.
ಪ್ರತಿಯೊಂದು ಬಣ್ಣಕ್ಕೂ ಒಂದೊಂದು ತರಂಗಾಂತರ (wavelength) ಗಳು ಇರುತ್ತವೆ. ಸೂರ್ಯನ ಬೆಳಕಿನ ಕಿರಣಗಳಿಗೆ ಮಳೆಯ ಹನಿಗಳು ಪ್ರತಿಫಲಿಸಿದಾಗ ಬೆಳಕು ವಕ್ರೀಭವನಗೊಂಡು ಬೆಳಕಿನಲ್ಲಿ ಅಡಗಿರುವ ಏಳು ಬಣ್ಣಗಳು ಆಕಾಶದಲ್ಲಿ ಕಾಮನಬಿಲ್ಲಿನ ರೂಪದಲ್ಲಿ ಮೂಡುತ್ತವೆ. ಕೆಂಪು ಬಣ್ಣಕ್ಕೆ ಅತ್ಯಂತ ಅಧಿಕ ತರಂಗಾಂತರದ ಗುಣ ಇರುವುದರಿಂದ ಅದು ಕಾಮನಬಿಲ್ಲಿನ ಮೇಲ್ಗಡೆ ಕಂಡು ಬರುತ್ತದೆ. ಹಾಗೆಯೇ ನೇರಳೆ ಬಣ್ಣಕ್ಕೆ ಕಮ್ಮಿ ತರಂಗಾಂತರ ಇರುವುದರಿಂದ ಕೊನೆಯಲ್ಲಿ ಕಾಣಿಸುತ್ತದೆ. ಹೀಗೆ ೭ ಬಣ್ಣಗಳಾದ ಕೆಂಪು, ಕಿತ್ತಳೆ, ಹಳದಿ, ಹಸಿರು, ನೀಲಿ, ಬೂದು, ನೇರಳೆ ಬೇರೆ ಬೇರೆ ಕೋನಗಳಲ್ಲಿ ವಕ್ರೀಭವನಗೊಂಡು ಬಿಲ್ಲಿನಂತೆ ಬಾಗಿ ಸುಂದರವಾಗಿ ಕಾಣುವುದರಿಂದ ಕಾಮನಬಿಲ್ಲು ಅಥವಾ ಮಳೆ ಬಿಲ್ಲು (rainbow) ಎಂದು ಹೆಸರಿಸಿದ್ದಾರೆ. ಇವೆಲ್ಲಾ ಬಣ್ಣಗಳು ಒಂದಾದರೆ ನಮಗೆ ಬಿಳಿಯ ಬಣ್ಣವೇ ಕಾಣ ಸಿಗುತ್ತದೆ.
ಚಿತ್ರ: ಇಂಟರ್ನೆಟ್ ಕೃಪೆ