ಬಿಸಿಲಿರುವಾಗ ನೆಟ್ಟ ಸಸಿಯ ರಕ್ಷಣೆ
ಅಧಿಕ ಬಿಸಿಲಿನ ಸಮಯದಲ್ಲಿ ಸಸಿಗಳನ್ನು ನೆಟ್ಟರೆ ಅದರ ಎಲೆಗಳು ತಕ್ಷಣ ಒಣಗುತ್ತದೆ. ಎಲೆ ಒಣಗಿದರೆ ಮೃದುವಾದ ಕಾಂಡವೂ ಒಣಗುತ್ತದೆ. ಗಿಡದ ಸಾಯುವಿಕೆ ಹೆಚ್ಚು. ಅದಕ್ಕಾಗಿ ಕೆಲವರು ನೆರಳು ಮಾಡುತ್ತಾರೆ. ಆದರೂ ಅಲ್ಪ ಸ್ವಲ್ಪವಾದರೂ ಒಣಗುವುದು ಸಾಮಾನ್ಯ.
ಇದಕ್ಕೆ ಪರಿಹಾರ ಸಸಿ ನೆಡುವಾಗ ಅದಕ್ಕೆ ಒಂದು ಪಾಲಿಥೀನ್ ಲಕೋಟೆಯನ್ನು ಮುಚ್ಚುವುದು. ನೆಟ್ಟ ಸಸಿಯ ಬುಡದಲ್ಲಿ ಸಸಿಯ ಎತ್ತರಕ್ಕಿಂತ ಸ್ವಲ್ಪ ಹೆಚ್ಚು ಎತ್ತರದ ಕೋಲನ್ನು ಊರಿ. ಸಸಿ ಸೇರಿದಂತೆ ಆ ಕೋಲಿನ ತುದಿಯಲ್ಲಿ ಲಕೋಟೆ ನಿಲ್ಲುವಂತೆ ಮುಚ್ಚಿ. ಸಸಿಯ ಎಲೆಗಳಿಗೆ ಲಕೋಟೆ ತಾಗದಿದ್ದರೆ ಒಳ್ಳೆಯದು. ನೆಲ ತನಕವೂ ತಂದು ಗಾಳಿಗೆ ಹಾರದಂತೆ ಭಾರದ ವಸ್ತು ಇಡಿ. ಮೂರು ನಾಲ್ಕು ದಿನದ ನಂತರ ತೆಗೆಯಿರಿ. ಸಸಿಯ ಎಲೆ ಬಾಡಲಾರದು. ಎಲೆಗಳು ಇರುವ ಕಾರಣ ಬೇರು ಸಹ ತಕ್ಷಣ ಮುಡುತ್ತದೆ. ಎಷ್ಟೇ ಬಿಸಿಲಿದ್ದರೂ ಸಸಿ ಬಾಡಲಾರದು. ಎಲೆ ಮೂಲಕ ಆವೀಕರಣವಾಗಿ ನಷ್ಟವಾಗುವ ನೀರು ಅಲ್ಲಿಯೇ ಸಸ್ಯಕ್ಕೆ ದೊರೆತು ಸಸ್ಯ ಬೆಳವಣಿಗೆಗೆ ಅನುಕೂಲವಾಗುತ್ತದೆ. ಇದು ಸರಳ ಮತ್ತು ಅಗ್ಗದ ವಿಧಾನ.