ಬಿಸಿ ಬಿಸಿ ಟೊಮ್ಯಾಟೋ ಸೂಪ್

ಬಿಸಿ ಬಿಸಿ ಟೊಮ್ಯಾಟೋ ಸೂಪ್

ಬೇಕಿರುವ ಸಾಮಗ್ರಿ

ಟೊಮ್ಯಾಟೋ (ಕೆಂಪಗೆ ದುಂಡಗೆ ಇರುವ) ಒಂದು ಕಿಲೋ, ಆಲೂಗಡ್ಡೆ ಒಂದು, ಚಕ್ಕೆ, ಲವಂಗ, ಮೆಣಸು, ಉಪ್ಪು ಖಾರದಪುಡಿ ಸ್ವಲ್ಪ, ಸಕ್ಕರೆ ಸ್ವಲ್ಪ, ಬ್ರೆಡ್ ತುಂಡುಗಳು

 

ತಯಾರಿಸುವ ವಿಧಾನ

ಮೊದಲು ಒಂದು ಪಾತ್ರೆಗೆ ನೀರು ಹಾಕಿ ಟೊಮ್ಯಾಟೋ, ಆಲೂಗಡ್ಡೆ ಮತ್ತು ಎರಡು ತುಂಡು ಚಕ್ಕೆ, ನಾಲ್ಕು ಲವಂಗ, ಆರು ಮೆಣಸು ಹಾಕಿ ಬೇಯಿಸಿಕೊಳ್ಳಿ ಮಸಾಲೆ ಪದಾರ್ಥಗಳನ್ನು ಹಾಗೆ ಹಾಕಬೇಕು. ಚೆನ್ನಾಗಿ ಬೆಂದ ನಂತರ ಬರಿ ಟೊಮ್ಯಾಟೋ ಆಲೂಗಡ್ಡೆ ಮಿಕ್ಸರ್ ನಲ್ಲಿ ರುಬ್ಬಿಕೊಳ್ಳಿ. ನಂತರ ಒಂದು ದೊಡ್ಡ ಜಾಲರಿಯಲ್ಲಿ ಸೋಸಿಕೊಳ್ಳಿ. ನಂತರ ಅದಕ್ಕೆ ಸ್ವಲ್ಪ ನೀರು ಸೇರಿಸಿ ಸಣ್ಣ ಚಮಚ ಖಾರದ ಪುಡಿ, ಎರಡು ಚಮಚ ಉಪ್ಪು, ಒಂದು ಚಮಚ ಸಕ್ಕರೆ ಹಾಕಿ ಹತ್ತು ನಿಮಿಷ ಕುದಿಸಿ ಇಳಿಸಿ. ಇದಕ್ಕೂ ಮೊದಲು ಬ್ರೆಡ್ ನ್ನು ಹುರಿದು ಕೊಂಡಿರಿ ಅಥವಾ ರಸ್ಕ್ ತುಂಡುಗಳು ಆಗಬಹುದು ಸೂಪ್ ಬಿಸಿ ಇರುವಾಗಲೇ ಸ್ವಲ್ಪ ಬೆಣ್ಣೆ, ಬ್ರೆಡ್ ಹಾಕಿಕೊಂಡು ಕುಡಿಯಬಹುದು. ಬಿಸಿ ಬಿಸಿಯಾಗಿ ಕುಡಿದರೆ ತುಂಬಾ ಚೆನ್ನಾಗಿರುತ್ತದೆ 

-ಎಸ್.ನಾಗರತ್ನ, ಚಿತ್ರದುರ್ಗ