ಬೀಜಗಣಿತದ ಆಟ (3): ನರ್ತನದ ಜೊತೆಗಾರರು
ಸ್ನೇಹಕೂಟವೊಂದರಲ್ಲಿ 20 ಜನರು ನರ್ತಿಸಿದರು. ಶರ್ಮಿಳಾ ಏಳು ಜೊತೆಗಾರರೊಂದಿಗೆ, ಕಲ್ಪನಾ ಎಂಟು ಜೊತೆಗಾರರೊಂದಿಗೆ, ಆಶಾ ಒಂಭತ್ತು ಜೊತೆಗಾರರೊಂದಿಗೆ – ಇದೇ ರೀತಿಯಲ್ಲಿ ಉಳಿದ ಯುವತಿಯರು ಹೆಚ್ಚೆಚ್ಚು ಜೊತೆಗಾರರೊಂದಿಗೆ ನರ್ತಿಸಿದರು. ಕೊನೆಯವಳಾದ ಭಾನುಮತಿ ಎಲ್ಲ ಜೊತೆಗಾರರೊಂದಿಗೆ ನರ್ತಿಸಿದಳು. ಹಾಗಾದರೆ ಆ ಸ್ನೇಹಕೂಟದಲ್ಲಿ ಎಷ್ಟು ಯುವಕ ಜೊತೆಗಾರರಿದ್ದರು?
ಉತ್ತರ: ಸೂಕ್ತ ಸಮೀಕರಣ ರಚಿಸಿದರೆ ಸುಲಭವಾಗಿ ಇದರ ಉತ್ತರ ಪಡೆಯಬಹುದು. ಯುವಕರ ಬದಲಾಗಿ, ಯುವತಿಯರ ಸಂಖ್ಯೆ ಎಷ್ಟೆಂದು ಲೆಕ್ಕ ಹಾಕೋಣ. ಯುವತಿಯರ ಸಂಖ್ಯೆ x ಎಂದಿರಲಿ.
ಮೊದಲು, ಶರ್ಮಿಳಾ 6 + 1 ಜೊತೆಗಾರರೊಂದಿಗೆ,
ಎರಡನೆಯದಾಗಿ, ಕಲ್ಪನಾ 6 + 2 ಜೊತೆಗಾರರೊಂದಿಗೆ,
ಮೂರನೆಯದಾಗಿ, ಆಶಾ 6 + 3 ಜೊತೆಗಾರರೊಂದಿಗೆ,
(ಹೀಗೆಯೇ ಸಮೀಕರಣ ಮುಂದುವರಿಸಿದರೆ),
ಕೊನೆಯವಳಾದ ಭಾನುಮತಿ 6 + x ಜೊತೆಗಾರರೊಂದಿಗೆ ನರ್ತಿಸಿದಳು.
ಈಗ ಸಿಗುವ ಸಮೀಕರಣ: X + (6 + x) = 20
ಇದನ್ನು ಬಿಡಿಸೋಣ. 2x + 6 = 20
2x = 20 - 6 = 14 … ಹಾಗಾಗಿ, x = 7.
ಆದ್ದರಿಂದ ಸ್ನೇಹಕೂಟದಲ್ಲಿ 20 – 7 = 13 ಯುವಕರಿದ್ದರು.