ಬೀಜಗಣಿತದ ಆಟ (5): ಸಮುದ್ರದಲ್ಲಿ ನೌಕಾ ಬೇಹುಗಾರಿಕೆ
ನೌಕಾದಳವೊಂದರ ಬೇಹುಗಾರಿಕೆ ನೌಕೆಗೆ ಸಮುದ್ರದ ಭಾಗವೊಂದರ ಜವಾಬ್ದಾರಿ ನೀಡಲಾಯಿತು. ನೌಕಾದಳವು ಸಾಗುತ್ತಿದ್ದ ದಿಕ್ಕಿನಲ್ಲೇ 70 ಮೈಲುಗಳ ದೂರದ ವರೆಗೆ ಬೇಹುಗಾರಿಕೆ ಮಾಡಲು ಆದೇಶ ಕೊಡಲಾಯಿತು. ನೌಕಾದಳವು ಗಂಟೆಗೆ 35 ಮೈಲುಗಳು ಚಲಿಸುತ್ತಿದ್ದರೆ, ಅದರ ನೌಕೆಯು ಗಂಟೆಗೆ 70 ಮೈಲು ಚಲಿಸುತ್ತಿತ್ತು. ಬೇಕು ನೌಕೆಯು ಕೆಲಸ ಮುಗಿಸಿ ನೌಕಾದಳಕ್ಕೆ ಹಿಂತಿರುಗಲು ಎಷ್ಟು ಸಮಯ ತಗಲುವುದೆಂದು ಲೆಕ್ಕ ಹಾಕಿ.
ಆ ಸಮಯ X ಗಂಟೆಗಳು ಎಂದಿರಲಿ.
ಈ ಅವಧಿಯಲ್ಲಿ ನೌಕಾದಳ ಕ್ರಮಿಸಿದ ದೂರ 35X ಮೈಲು ಮತ್ತು ಬೇಹು ನೌಕೆ ಕ್ರಮಿಸಿದ ದೂರ 70X. ಬೇಹು ನೌಕೆಯು 70 ಮೈಲು ಕ್ರಮಿಸಿದ್ದಲ್ಲದೆ, ಬೇಹು ಮುಗಿಸಿ ವಾಪಾಸು ಬರುವಾಗಲೂ ಸ್ವಲ್ಪ ದೂರ ಕ್ರಮಿಸಿದೆ. ನೌಕಾದಳವು ಅದರ ಪಥದ ಉಳಿದ ಭಾಗವನ್ನಷ್ಟೇ ಕ್ರಮಿಸಿತು.
ಅವೆರಡೂ ಒಟ್ಟಾಗಿ 70X + 35X ದೂರ ಕ್ರಮಿಸಿದವು; ಇದು 2 X 70 = 140 ಮೈಲುಗಳಿಗೆ ಸಮ.
ಈಗ ಸಿಗುವ ಸಮೀಕರಣ:
70X + 35X = 140 ಅಂದರೆ, 105X = 140
ಇದನ್ನು ಬಿಡಿಸಿದಾಗ ಸಿಗುವ ಉತ್ತರ:
X = 140/ 105 = 1 1/3 ಗಂಟೆಗಳು
ಅಂದರೆ, ಬೇಹು ನೌಕೆಯು 1 ಗಂಟೆ 20 ನಿಮಿಷಗಳಲ್ಲಿ ನೌಕಾದಳವನ್ನು ಮರಳಿ ಸೇರುತ್ತದೆ.
ಫೋಟೋ: ಸಮುದ್ರದಲ್ಲಿ ಚಲಿಸುತ್ತಿರುವ ನೌಕೆಗಳು