ಬೀಟ್ರೂಟ್ ಸಾಸಿವೆ

ಬೀಟ್ರೂಟ್ ಸಾಸಿವೆ

ಬೇಕಿರುವ ಸಾಮಗ್ರಿ

ಬೀಟ್ರೂಟ್ ದೊಡ್ಡದು ೧, ತೆಂಗಿನ ತುರಿ ಒಂದುವರೆ ಕಪ್, ಸಾಸಿವೆ ೧ ಚಮಚ, ಮೆಣಸಿನ ಹುಡಿ ೧ ಚಮಚ, ಮೊಸರು ೧ ಕಪ್, ಉಪ್ಪು ರುಚಿಗೆ.

ತಯಾರಿಸುವ ವಿಧಾನ

ಬೀಟ್ರೂಟ್ ತೊಳೆದು ಸಿಪ್ಪೆ ತೆಗೆದು ಸಣ್ಣಗೆ ಹೆಚ್ಚಿ ಉಪ್ಪು, ಮೆಣಸಿನ ಹುಡಿ ಹಾಕಿ ಬೇಯಿಸಿ. ತೆಂಗಿನ ತುರಿಗೆ ಸಾಸಿವೆ, ಉಪ್ಪು ಸೇರಿಸಿ ನುಣ್ಣಗೆ ರುಬ್ಬಿ ಬೇಯಿಸಿದ ಬೀಟ್ರೂಟ್ ಹೋಳುಗಳಿಗೆ ಸೇರಿಸಿ. ಈ ಮಿಶ್ರಣಕ್ಕೆ ಮೊಸರು ಮಿಶ್ರ ಮಾಡಿ ಸಾಸಿವೆ ಒಗ್ಗರಣೆಯನ್ನು ತುಪ್ಪದಲ್ಲಿ ಕರಿಬೇವಿನ ಜೊತೆ ಕೊಡಿ. ಈಗ ತಯಾರಾದ ಬೀಟ್ರೂಟ್ ಸಾಸಿವೆಯನ್ನು ಅನ್ನದ ಜೊತೆ ಸವಿಯಿರಿ. 

- ಸಹನಾ ಕಾಂತಬೈಲು, ಮಡಿಕೇರಿ