ಬೀಟ್ ರೂಟ್, ಮಾವಿನ ಹಣ್ಣು ಸಾರು

ಬೀಟ್ ರೂಟ್, ಮಾವಿನ ಹಣ್ಣು ಸಾರು

ಬೇಕಿರುವ ಸಾಮಗ್ರಿ

ಬೀಟ್ ರೂಟ್ ದೊಡ್ಡದು , ೫ ಎಸಳು ಬೆಳ್ಳುಳ್ಳಿ, ೨ ಕಾಡು ಮಾವಿನ ಹಣ್ಣುಗಳು, ರುಚಿಗೆ ಉಪ್ಪು, ಒಳ್ಳೆಮೆಣಸು ೧೦ ಕಾಳುಗಳು, ಬೆಲ್ಲ ಚೂರು. ಒಗ್ಗರಣೆಗೆ ಎಣ್ಣೆ, ಸಾಸಿವೆ, ಒಣಮೆಣಸು.

ತಯಾರಿಸುವ ವಿಧಾನ

ಬೀಟ್ ರೂಟ್ ತುರಿದು ಸ್ವಲ್ಪ ನೀರು ಹಾಕಿ ಬೇಯಿಸ ಬೇಕು. ಅದಕ್ಕೆ ಮಾವಿನ ಹಣ್ಣು, ಬೆಳ್ಳುಳ್ಳಿ, ಉಪ್ಪು, ಬೆಲ್ಲ, ಒಳ್ಳೆಮೆಣಸು ಹುಡಿ, ಹಾಕಿ ಚೆನ್ನಾಗಿ ಕುದಿಸಬೇಕು. ತೆಳ್ಳಗಿರಬೇಕಾದರೆ ಸ್ವಲ್ಪ ನೀರು ಸೇರಿಸಿ ಕುದಿಸಿ ಒಗ್ಗರಣೆ ಹಾಕಿದರೆ ಸಾರು ಸಿದ್ದ.

-ಅಶ್ವಿನಿ ಮೂರ್ತಿ ಅಯ್ಯನಕಟ್ಟೆ, ಸುಳ್ಯ