ಬೀಸಣಿಗೆ
ಬರಹ
ಕನ್ನಡ ಆಡಿಯೋ ವೇದಿಕೆ ಮತ್ತು ಓರ್ಕುಟ್ಟಿನಲ್ಲಿ ನನಗೆ ಕೆಲವರು ಫ್ಯಾನುಗಳು ಇದ್ದಾರೆ. ಅವರುಗಳ ವಿಶ್ವಾಸಕ್ಕೆ ನನ್ನದೊಂದು ಕಾಣಿಕೆ ತಯಾರು ಮಾಡಿದ್ದೆ. ಅದು ಹೀಗಿದೆ.
ನನ್ನೂರಿನಲಿ ಸೆಖೆ, ಬಲು ಸೆಖೆ
ಮೈ ಅಂಟು ಅಂಟಾಗಿಸುವ ಬೆವರಿನ ಸೆಖೆ
ಎಂದೂ ಎಲ್ಲೂ ಚಾಲ್ತಿಯಲ್ಲಿರಬೇಕು ಫ್ಯಾನು
ಲೋಕಲ್ಲಿನಲಿ ಬೆವರು ಒರೆಸಿಕೊಳ್ಳದಿರುವುದೇ ಫ್ಯಾಷನ್ನು
೯ ರಿಂದ ೫ ರವರೆಗೆ ಇರುವುದು ಏರ್ ಕಂಡೀಷನ್ನು
ಮನೆಯಲ್ಲೆಲ್ಲೂ ಸುತ್ತುತ್ತಿರುವುದು ಫ್ಯಾನು
ಫ್ಯಾನು ತಿರುಗದಿದ್ದರೆ ತಿರುಗುವುದೆಲ್ಲರ ತಲೆ
ಫ್ಯಾನಿಲ್ಲದಿದ್ದರೆ ಮನೆಯವರು ಮಾಡುವರು ನನ್ನ ಕೊಲೆ
ಓರ್ಕುಟ್ಟಿಗೆ ಹೋಗಲು ನನಗಿಹುದು ಆರು ರೆಕ್ಕೆಗಳ ಫ್ಯಾನು
ಈ ರೆಕ್ಕೆಗಳಿಲ್ಲದಿರೆ ನಾ ಹೇಗೆ ಹಾರಾಡುವೆನು
ರೆಕ್ಕೆಗಳಿಲ್ಲದೇ ನನಗೆ ಹೇಗೆ ದೊರಕೀತು ಶ್ವಾಸ
ಕಣ್ತುಂಬಿ ಬರುವುದು ನೋಡಲು ಇವರುಗಳ ವಿಶ್ವಾಸ
ಒಂದು ಚಣ ಈ ರೆಕ್ಕೆಗಳು ನನ್ನ ಮೇಲೆ ಸುತ್ತದಿದ್ದರೆ
ನನ್ನ ಕೆಲಸಗಳೆಲ್ಲ ನಿಂತು ಜೀವನವೇ ಒಂದು ಹೊರೆ
ನಾ ಎಂದು ಚಿರಋಣಿ ಆಗಿರಲೇಬೇಕು ತಾನೇ?
ಇವರ ನೆನೆಯದಿದ್ದರೆ ಶ್ರೀಹರಿಯು ಕ್ಷಮಿಸುವನೇ?