ಬೀchi ಜೋಕುಗಳು ೮: ಷಡ್ಗವ್ಯದವರ ಕಥೆ
ಕೆಲವರು ಅತಿ ಕ್ಲೀನ್ ಅಥವಾ ಅತೀ ಆಚಾರವಂತರು/ಮಡಿವಂತರು ಇರುತ್ತಾರೆ ಅಂಥಹವರ ಬಗ್ಗೆ ಹೇಳುತ್ತಾ ಬೀchiಯವರು ಅವರನ್ನು "ಷಡ್ಗವ್ಯದವರು" ಎನ್ನುತ್ತಾರೆ. ತಿಮ್ಮ ದಾರಿಯಲ್ಲಿ ಬರುವಾಗ ಅದ್ಯಾರನ್ನೋ ಮುಟ್ಟಿ ಮೈಲಿಗೆಯಾದ. ವಿಷಯ ತಿಳಿದ ಗುರುಗಳು, ಸ್ನಾನಮಾಡಿ ಪಂಚಗವ್ಯವನ್ನು ಸೇವನೆ ಮಾಡಿ ಶುದ್ಧನಾಗಿ ಬಾ ಎಂದು ತಿಮ್ಮನಿಗೆ ಆದೇಶಿಸಿದರು. ಸರಿ ಎಂದು ಹೇಳಿ ಹೋದ ತಿಮ್ಮ ಬಹಳ ಹೊತ್ತಿನ ನಂತರ ಬಂದಾಗ ತಡವೇಕೆಂದು ಗುರುಗಳು ಕಾರಣ ಕೇಳಿದರು. ಆಗ ತಿಮ್ಮನೆನ್ನುತ್ತಾನೆ, "ಗುರುಗಳೇ ನಾನು 'ಷಡ್ಗವ್ಯ' ಸೇವಿಸಿ ಬಂದದ್ದರಿಂದ ಇಷ್ಟು ತಡವಾಯಿತು".
"ಅಲ್ಲೋ ತಿಮ್ಮಾ ನಾನು ನಿನಗೆ ಪಂಚಗವ್ಯವನ್ನಲ್ಲವೇ ಕುಡಿಯಲು ಹೇಳಿದ್ದು, ಇದೇನಿದು 'ಷಡ್ಗವ್ಯ' ?"
"ನೀವೆ ಹೇಳಿದ್ದಿರಲ್ಲ ಗುರುಗಳೇ ಆಕಳ ಹಾಲು, ಮೊಸರು, ತುಪ್ಪ, ಗೋಮೂತ್ರ ಮತ್ತು ಸಗಣಿ ಇವುಗಳಿಂದ ತಯಾರಿಸೋ ಪಂಚಗವ್ಯ ಶ್ರೇಷ್ಠವೆಂದು. ಆಕಳಿನಿಂದ ಹೊರ ಬಂದ ಹಾಲು, ಮೊಸರು, ತುಪ್ಪ, ಮೂತ್ರ, ಸಗಣಿಗಳೇ ಇಷ್ಟು ಪವಿತ್ರವಾಗಿರಬೇಕಾದರೆ, ಆ ಆಕಳು ಇನ್ನೂ ಹೆಚ್ಚು ಪವಿತ್ರವಲ್ಲವೇ? ಅದಕ್ಕೇ ಪಂಚಗವ್ಯದ ಜೊತೆ ಆಕಳ ಕಿವಿಯನ್ನೂ ಕೊಯ್ದು ಸ್ವಲ್ಪ ಬೆರೆಸಿಕೊಂಡು "ಷಡ್ಗವ್ಯ" ಕುಡಿದು ಅತ್ಯಂತ ಪವಿತ್ರನಾಗಿ ಬಂದೆ." ತಿಮ್ಮನ ಆಲೋಚನಾ ಶಕ್ತಿಗೆ ಬೆರಗುಗೊಂಡು ಗುರುಗಳು ಅಲ್ಲೇ ಮೂರ್ಛೆಹೋದರು.
***
ಧಾರವಾಡದಲ್ಲಿ "ಗಂಡಸರ ದಾಡಿ ವ ಹೇರ ಕಟಿಂಗ ಸಲೂನ", ಎಂಬ ನಾಮಫಲಕಗಳು ಕಂಡರೆ, ಬಳ್ಳಾರಿಯಲ್ಲಿ "ಮಕ್ಕಳ ಶಿಶುವಿಹಾರ" ಮತ್ತು ಬೆಂಗಳೂರಿನಲ್ಲಿ "ಹೆಂಗಸರ ಹೆರಿಗೆ ಆಸ್ಪತ್ರೆ" ಎನ್ನುವ ಬೋರ್ಡುಗಳು ಕಾಣಸಿಗುತ್ತವೆ (ಬೀchiಯವರ ಕಾಲದಲ್ಲಿ - ಈಗ ಕನ್ನಡಕ್ಕಿಂತ ಇಂಗ್ಲೀಷ್ ಬೋರ್ಡುಗಳೇ ಹೆಚ್ಚಿಗೆ ಕಾಣಸಿಗುತ್ತವೆ!)ಹೀಗೆ ಅತೀ ಸ್ಪಷ್ಟತೆ ಕೊಡಲು ಹೋಗಿ ಆಗುವ ಅನರ್ಥಗಳ ಬಗ್ಗೆ ಒಮ್ಮೆ ಆಲೋಚಿಸುವಂತೆ ಮಾಡುತ್ತಾರೆ ಬೀchiಗಳು. ಗಂಡಸರಲ್ಲದೆ ಇನ್ನೇನು ಹೆಂಗಸರಾ ದಾಡಿ ಮಾಡಿಕೊಳ್ಳುವುದು? ಹಾಗೆಯೇ ಮಕ್ಕಳಿಗಲ್ಲದೆ ಶಿಶುವಿಹಾರ ಇನ್ನೇನು ದೊಡ್ಡವರಿಗಾ ಇರುತ್ತೇ? ಹೆರಿಗೆ ಆಸ್ಪತ್ರೆ ಹೆಂಗಸರಿಗಲ್ಲದೇ ಗಂಡಸರಿಗೆ ಬೇರೆ ಇರೋಕೆ ಸಾಧ್ಯವೇ? ಎನ್ನುವ ಪ್ರಶ್ನೆಗಳು ಓದುಗರಲ್ಲಿ ಸಹಜವಾಗಿ ಮೂಡುತ್ತವೆಯಲ್ಲವೇ?
Comments
ಉ: ಬೀchi ಜೋಕುಗಳು ೮: ಷಡ್ಗವ್ಯದವರ ಕಥೆ
In reply to ಉ: ಬೀchi ಜೋಕುಗಳು ೮: ಷಡ್ಗವ್ಯದವರ ಕಥೆ by pkumar
ಉ: ಬೀchi ಜೋಕುಗಳು ೮: ಷಡ್ಗವ್ಯದವರ ಕಥೆ
In reply to ಉ: ಬೀchi ಜೋಕುಗಳು ೮: ಷಡ್ಗವ್ಯದವರ ಕಥೆ by venkatb83
ಉ: ಬೀchi ಜೋಕುಗಳು ೮: ಷಡ್ಗವ್ಯದವರ ಕಥೆ
ಉ: ಬೀchi ಜೋಕುಗಳು ೮: ಷಡ್ಗವ್ಯದವರ ಕಥೆ
ಉ: ಬೀchi ಜೋಕುಗಳು ೮: ಷಡ್ಗವ್ಯದವರ ಕಥೆ