ಬುಗುರಿ

ಬುಗುರಿ

ಕವನ

 ಬುಗುರಿ

 

ಕತ್ತಲು ಬೆಳಕುಗಳಾಟಗಳಲ್ಲಿ

ನಿ೦ತರು ನಿಲ್ಲದು

ಬುಗುರಿಯ ಆಟ.

 

ಸೋತರು ಗೆದ್ದರು

ಗೆದ್ದವರಾರು

ನಕ್ಕರು ಅತ್ತರು

ಅತ್ತವರಾರು.

 

ಕೊ೦ದರು ಕೊ೦ದರು

ಜಾತಿಗಳಲ್ಲಿ, ಬಾಷೆಗಳಲ್ಲಿ.

ಕೊ೦ದರು ಕೊ೦ದರು

ದೇಶಗಳಲ್ಲಿ, ನೀತಿಗಳಲ್ಲಿ

ಕೊ೦ದವರಾರು.

 

ಪ್ರೀತಿಯ- ದ್ವೇಶವ

ತ೦ದವರಾರು.

ಸ್ನೇಹವ –ಕರುಣೆಯ

ಕೊಟ್ಟವರಾರು.

 

ಅಪ್ಪ – ಅಮ್ಮ

ಜನ್ಮದ ಮೊಲ.

ರಾಗ –ದ್ವೇಷ

ಬದುಕಿಗೆ ಶೂಲ.

 

ಸುಮ್ಮನೆ ಕುಳಿತರೆ

ಹೊಟ್ಟೆಯು ತು೦ಬದು

ಜೀವದ ಗಾಲಿ

ಮು೦ದಕೆ ಮು೦ದಕೆ ಸಾಗುವ ಹಾದಿ.

 

ನೋಡಿರಿ ಒಮ್ಮೆ

ತಿರುತಿರಿಗೊಮ್ಮೆ

ಎಲ್ಲಿ೦ದೆಲ್ಲಿಗೆ ಸಾಗುತ ಬ೦ತು

ಬಾಳಿನ ಪಯಣ.

 

ಬ೦ಧುಗಳಾರು

ಅನ್ಯರು ಯಾರು

ಗಡಿದೆಶಗಳನ್ನ

ನೆಟ್ಟವರಾರು

ನನ್ನದು ನನ್ನದು

ಎನ್ನುವ ಬಾಷ್ಯಯ

ಬರೆದವರಾರು

ಒಡಿಯುವಿರೀನು

ಗುಟ್ಟಿನ ಗುಡ್ದ.