ಬುಡದೆನ್ನುಡಿ ಅಥವಾ ಮೂಲದ್ರಾವಿಡ ಒಂದು ಪರಿಕಲ್ಪನೆಯಷ್ಟೆ.

ಬುಡದೆನ್ನುಡಿ ಅಥವಾ ಮೂಲದ್ರಾವಿಡ ಒಂದು ಪರಿಕಲ್ಪನೆಯಷ್ಟೆ.

Comments

ಬರಹ

ಬಡನುಡಿಗಳಿಗೆಲ್ಲ (ಉತ್ತರಭಾರತದ ಭಾಷೆಗಳು) ಮೂಲ ಸಕ್ಕದ (ಸಂಸ್ಕೃತ) ಅಥವಾ ಪಾಗದ (ಪ್ರಾಕೃತ) ಎಂದು ಹೇೞಬಹುದು. ಅದಕ್ಕೆ ಕಾರಣ ಈ ಭಾಷೆಗಳಲ್ಲಿರುವ ಶಬ್ದಗಳ ಮೂಲ ಸಕ್ಕದದ ಅಪಭ್ರಂಶರೂಪವಾಗಿಯೋ ಅಥವಾ ಪಾಗದದಲ್ಲಿ ಕಂಡುಬರುತ್ತದೆ. ಅಲ್ಲದೆ ಸಂಸ್ಕೃತ ಮತ್ತು ಪಾಗದಗಳು ಆಡುಭಾಷೆಗಳಾಗಿದ್ದುವು. ವೇದಗಳ ಕಾಲಕ್ಕಂತೂ ಸಕ್ಕದ ಆಡುಭಾಷೆಯಾಗಿತ್ತೆಂದು ನಂಬಲು ಪಾಣಿನಿಯ ಸೂತ್ರದಲ್ಲಿ ಬರುವ ’ಛಂದಸಿ ಬಹುಲಂ’ ಛಂದಸ್ಸು ಎಂದರೆ ಪದ್ಯರೂಪದಲ್ಲಿರುವ ವೇದಗಳಲ್ಲಿ ರೂಪಗಳು ಹಲವು ತೆಱನಾಗಬಹುದೆಂಬ ಅವನ ವಿಚಾರ ವೇದವನ್ನು ತನ್ನ ವ್ಯಾಕರಣಸೂತ್ರಗಳಲ್ಲಿ ಹಿಡಿದಿಡಲಾಱದುದನ್ನು ತೋಱಿಸುತ್ತದೆ. ಆದರೆ ತೆನ್ನುಡಿಗಳಲ್ಲಿ (ದಕ್ಷಿಣಭಾರತದ) ಶಬ್ದಗಳಲ್ಲಿ ಸಾಮ್ಯತೆ ಕಂಡುಬಂದರೂ ಎಲ್ಲರೂ ಏಕರೂಪವಾಗಿ ಬೞಸುತ್ತಿದ್ದ ತೆನ್ನುಡಿಯೊಂದು ಇರುವ ಕುಱುಹು ಕಾಣುವುದಿಲ್ಲ. ಅಲ್ಲದೇ ಈ ಭಾಷೆಗಳವರಲ್ಲಿ ಯಾವ ಭಾಷೆ ಹೞೆಯದೆಂಬ ಜಿಜ್ಞಾಸೆ ಕೂಡ ಇದೆ. ಇಲ್ಲಿಯೂ ಒಬ್ಬರ ವಿಚಾರವನ್ನು ಇನ್ನೊಬ್ಬರು ಒಪ್ಪದಿರುವುದು ಕಂಡುಬರುತ್ತದೆ. ಹಾಗಾಗಿ ಬುಡದೆನ್ನುಡಿ(ಮೂಲದ್ರಾವಿಡ) ಒಂದು ಪರಿಕಲ್ಪನೆಯಷ್ಟೆ.

‍ನಿಮಗೆ ಈ ಬರಹ ಇಷ್ಟವಾಯಿತೇ? ತಿಳಿಸಿ
No votes yet
Rating
No votes yet