ಬುದ್ಧಂ ಶರಣಂ ಗಚ್ಛಾಮಿ

ಬುದ್ಧನೆಂಬೋ ದೇವನಿದ್ದ
ಜನಸಾಗರದಿಂದಲೆದ್ದ;
ಲುಂಬಿನಿಯಿಂದ ಬಂದ
ಜನಮಲಗಿರಲು ಎದ್ದ!
ಸಂಸಾರದಿಂದ ಮೇಲೆದ್ದ
ನೋವುಗಳನೇ ಉಂಡ
ಸಿದ್ಧಾರ್ಥ ಗೌತಮನೆಂದ
ಪಾಪ ಕರ್ಮಗಳಿಂದೆದ್ದ!
ಬೋಧಿವೃಕ್ಷದಡಿ ಕುಳಿತಿದ್ದ
ಜ್ಞಾನೋದಯದಿಂದೆದ್ದ;
ಸಂಘಕೆ ನಾನು ಶರಣೆಂದ
ನಾ ದೇವರೇ ಅಲ್ಲವೆಂದ!
ಆಸೆಯಿಂದ ದುಃಖವೆಂದ
ಅಹಿಂಸೆಯನು ಸಾರಿದ;
ಶ್ರೇಷ್ಠ ದಾರ್ಶನಿಕನವನಾದ
ಜ್ಞಾನದಲಿ ಪುಟಿದೆದ್ದ!
ಸಾಕ್ಷಾತ್ಕಾರವೇ ನಿಜವೆಂದ
ಶರಣಂ ಗಚ್ಛಾಮಿ ಎಂದ;
ಮಾನವ ಧರ್ಮವ ಸಾರಿದ
ಮುಕ್ತಿಮಾರ್ಗಕೆ ಶರಣೆಂದ!
-ಕೆ ನಟರಾಜ್ ಬೆಂಗಳೂರು
ಚಿತ್ರ ಕೃಪೆ: ಇಂಟರ್ನೆಟ್ ತಾಣ