ಬುದ್ಧಿಗೆ ಕಸರತ್ತು: "ಸಂ-ಪದಬಂಧ"-೧
ಬರಹ
ಆತ್ಮೀಯ ಸಂಪದಿಗರೇ,
ಪದಬಂಧವನ್ನು ಬಿಡಿಸುವುದು ಈಗೀಗ ಕೊಂಚ ಕಡಿಮೆಯಾಗುತ್ತಿರುವ ಹವ್ಯಾಸ. ನಾನು ಚಿಕ್ಕವನಿದ್ದಾಗ ಭಾನುವಾರದ ದಿನ ಬೆಳ್ಳಂಬೆಳಗ್ಗೆ ಪ್ರಜಾವಾಣಿಯನ್ನು ಅಂಗಳದ ತುಂಬ ಹರಡಿಕೊಂಡು, ಅಪ್ಪ, ಅಮ್ಮ, ಅತ್ತೆ, ಅಜ್ಜ, ಅಜ್ಜಿ ಹೀಗೆ ಮನೆಮಂದಿಗೆಲ್ಲ ತಲೆಕೆಡಿಸಿ ಪದಬಂಧಗಳನ್ನು ತುಂಬುತ್ತಿದ್ದೆ. ನಿಮ್ಮಲ್ಲೂ ಸಾಕಷ್ಟು ಜನರು ಸುಧಾ, ಪ್ರಜಾವಾಣಿಗಳ ಪದಬಂಧಗಳಲ್ಲಿ ಹುದುಗಿ ಭಾನುವಾರದ ಅರ್ಧ ದಿನವನ್ನೇ ಕಳೆದಿರಬಹುದು ಅಲ್ಲವೇ?
ಅದನ್ನೇ ನೆನೆಯುತ್ತಾ ಪದಬಂಧವೊಂದನ್ನು ರಚಿಸಲು ಪ್ರಯತ್ನಿಸಿದ್ದೀನಿ. ಬಿಡಿಸಿ, ಹೇಗಿತ್ತು ಅಂತ ಹೇಳುತ್ತೀರಾ? ಇದು ಕೇವಲ "ಪದಗಳ ಬಂಧ" ಆಗದಿರಲಿ ಎಂದು ಅಲ್ಲಲ್ಲಿ ನಮ್ಮ ಕನ್ನಡನಾಡು-ನುಡಿಯ ಬಗ್ಗೆ ಕೆಲವು ರಸಪ್ರಶ್ನೆಗಳನ್ನೂ ಸೇರಿಸಿದೆ. ಇಷ್ಟವಾಯಿತೋ ಇಲ್ಲವೋ ಹೇಳಿ.
ಈ ಪದಬಂಧಕ್ಕೆ ಉತ್ತರ ಶುಕ್ರವಾರ (ಮಾರ್ಚಿ ೨) ಪ್ರಕಟಗೊಳ್ಳುತ್ತದೆ.
1 | 2 | 3 | 4 | ||||||
5 | 6 | 7 | |||||||
8 | 9 | ||||||||
10 | 11 | ||||||||
12 | 13 | 14 | |||||||
15 | |||||||||
16 | 17 | 18 | 19 | ||||||
20 | |||||||||
21 | 22 | 23 |
ಮೇಲಿನಿಂದ ಕೆಳಕ್ಕೆ | |||||||||
1. ನಮ್ಮ ಹೃದಯ ಸುಮಾರು ಇಷ್ಟು ಗಾತ್ರದ್ದಾಗಿರುತ್ತದೆ ಎಂದು ತಜ್ಞರ ಅಭಿಪ್ರಾಯ (2) | |||||||||
2. ಒಂದು ಬಗೆಯ ಅಂಟು; ಜಿಗುಟಾದ ದ್ರವ (2) | |||||||||
3. ಇಂದಿನ ಕಾಲದಲ್ಲಿ ಜಿಮ್ ಇರುವಂತೆ, ಹಿಂದಿನ ಕಾಲದಲ್ಲಿ ಅಂಗ ಸಾಧನೆಗೆ ಇವುಗಳಿದ್ದವು (3) | |||||||||
4. ಕರ್ನಾಟಕದ ಅತಿ ಎತ್ತರದ ಬೆಟ್ಟ (6) | |||||||||
5. ಭೂಮಿಯಿಂದ ಹೊರತೆಗೆದ ಲೋಹವೊಂದರ ಕಚ್ಚಾ ರೂಪ (3) | |||||||||
7. ರಾಗವಾಗಿ ಪದ್ಯಗಳನ್ನು ಹಾಡುವ ಕಲೆ. ಈಗೀಗ ನಶಿಸಿ ಹೋಗುತ್ತಿದೆ (3) | |||||||||
12. ಕರ್ನಾಟಕದಲ್ಲಿ ಅತಿ ಹೆಚ್ಚು ಕೆರೆಗಳನ್ನು ಹೊಂದಿರುವ ಜಿಲ್ಲೆ (3) | |||||||||
13. ಹತ್ತಿಯನ್ನು ಹೀಗೂ ಕರೆಯುತ್ತಾರೆ ಗೊತ್ತಾ, ಮರುಳೆ? (3) | |||||||||
14. "ಹಾರ ಮತ್ತು ---"ಗಳನ್ನು ಹಾಕಿ ಸ್ವಾಗತ ಕೋರುವುದು (ಅಥವಾ ಸನ್ಮಾನಿಸುವುದು) ನಮ್ಮ ಸಂಪ್ರದಾಯ ಅಲ್ಲವೇ? (3) | |||||||||
15. ಕುದುರೆಯ ಕಾಲಿಗೆ ಹಾಕುವುದು; ಅದೃಷ್ಟದ ಸಂಕೇತವೂ ಹೌದು (2) | |||||||||
17. ಎಣಿಸುವುದು (3) | |||||||||
18. ಫರ್ಮಂಟೇಶನ್ ಎನ್ನುವುದಕ್ಕೆ ಕನ್ನಡದಲ್ಲಿ ಹೀಗೆ ಹೇಳಬಹುದು (3) | |||||||||
19. ಜಗತ್ತಿನ ಅತಿ ಎತ್ತರದ ಏಕಶಿಲಾ ವಿಗ್ರಹ; ಇದು ಕರ್ನಾಟಕದಲ್ಲಿದೆ ಅನ್ನುವುದು ನಮಗೆ ಹೆಮ್ಮೆ ಅಲ್ಲವೇ? (3) | |||||||||
20. ಅಂತರ್ಜಾಲದಲ್ಲಿ ನಮಗೆ ದಕ್ಕಿರುವ ಡೈರಿ! (2) |
ಎಡದಿಂದ ಬಲಕ್ಕೆ | ||
1. ಎತ್ತಲೋ ಮಾಯವಾದ ಮುತ್ತಿನ ಮೂಗುತಿ ತಂದ ಈತ ಯಾರು ಹೇಳಿ ನೋಡೋಣ? (5) | ||
3. ಎಲ್ಲದರಲ್ಲೂ ಈತನಿಗೇ ಮೊದಲ ಪೂಜೆಯಂತೆ (4) | ||
6. ನಾಡಪ್ರಭು ಕೆಂಪೇಗೌಡರ ಊರು (3) | ||
8. ಪತಿವ್ರತೆ ಎನ್ನುವುದಕ್ಕೆ ಕನ್ನಡದ ಪದ. ಇದರಿಂದ ಪ್ರಾರಂಭವಾಗುವ ಪ್ರಸಿದ್ಧ ಕಾವ್ಯವೂ ಇದೆ. (3) | ||
9. "ಕಾಗಿನೆಲೆ ಆದಿಕೇಶವ" ಈ ದಾಸರ ಕಾವ್ಯನಾಮ (3) | ||
10. ಮೂರಕ್ಷರದ ನರಕವನ್ನು ಬಲು ಬೇಗ ಸ್ವರ್ಗ ಮಾಡುವುದು ಹೀಗೆ! (2) | ||
11. ಹಸು ಕರು ಹಾಕಿದಾಗ, ಅದರ ಹಾಲನ್ನು ಬಳಸಿ ಮಾಡುವ ಒಂದು ರುಚಿಕರ ತಿನಿಸು (2) | ||
13. ಇವರಿಗಿಂತ ದೊಡ್ಡ ಬಂಧುವಿಲ್ಲ ಎಂದು ಗಾದೆಮಾತು ಹೇಳುತ್ತದೆ (2) | ||
14. ಕಸ್ತೂರಿ ಕಾಸಿಗೆ ಕೊಂಡದ್ದು ಏನನ್ನು ಎಂದು ನಿಮಗೇನಾದರೂ ಗೊತ್ತೇ? (3) | ||
16. ಇದು ಗೋಳಾಟ/ಪಿರಿಪಿರಿ ಅಲ್ಲ ಮಾರಾಯ್ರೇ, ಹಳೆಗನ್ನಡದ ಕವಿಯೊಬ್ಬನ ನೆಚ್ಚಿನ ಕಾವ್ಯ ಪ್ರಕಾರ (3) | ||
18. ನಮ್ಮ ಚೆಲುವ ಕನ್ನಡನಾಡು ಉದಯವಾಗಲಿ ಎಂದು ಹಾಡಿದ ಕವಿಯ ಊರು ಹೇಳಿ ನೋಡೋಣ? (5) | ||
21. ಪತಿ ಅಲ್ಲ ಸ್ವಾಮಿ. ಗಿಡಗಳಿಗೆ ನೀರು ಹಾಯಿಸಲು ಮಾಡಿದ "--" (2) | ||
22. ನಮ್ಮಷ್ಟಕ್ಕೆ ನಾವೇ ಹಾಡಿಕೊಳ್ಳುವುದಕ್ಕೆ ಹೀಗೆಂದು ಹೇಳಬಹುದು (3) | ||
23. ಕಿಟಕಿ ಅಲ್ಲ, ಚುಚ್ಚು ಮಾತಿದು (3) |