ಬುದ್ಧಿ ಜೀವಿಯಾಗಿ ಜೀವಿಸಬೇಕು!

ಬುದ್ಧಿ ಜೀವಿಯಾಗಿ ಜೀವಿಸಬೇಕು!

ಕವನ

ಮಂದಿ ಚಿಂತಿ ನಮಗ್ಯಾಕೆ

ಸುಮ್ಮನೆ ಕ್ಯಾತೆ ತೆಗೆಯ್ಯಾಕ

ಸರಳವಾಗಿ ಇರ್ಬೇಕು

ಗತ್ತಿನ್ ಮೇಲೆ ನಡೀಬೇಕು.

 

ಶಕ್ತಿಯಿಂದ ಆಗದ್ದು

ಯುಕ್ತಿಯಿಂದ ಮಾಡ್ಬೇಕು

ಕೋಪದಿಂದ ಆಗದ್ದು

ಸಹನೆ ಮಾಡ್ಬೇಕು

 

ಯೋಚಿಸು ನೋಡ್ಬೇಕು

ವಿಚಾರಿಸಿ ತಿಳಿಕೊಳ್ಳಬೇಕು

ಸರಿಯಾಗಿ ಗುರಿ ಇಡಬೇಕು

ಒಂದು ಹೆಜ್ಜೆ ಹಿಂದೆ ಸರಿದು ಹೊಡಿಬೇಕು

 

ತಿಳಿಯದವರಂತೆ ಇರಬೇಕು

ತಿಳಿ ನೀರಿನಂತೆ ಇರಬೇಕು

ತಿಳಿದು ನಡೆಯಬೇಕು

ತಿಳಿಯುವಂತೆ ಬದುಕಬೇಕು.

 

ಮಂದಿಯೊಳಗ ಇರಬೇಕು

ಮಂದಿ ಮಾತು ಕೇಳಬಾರದು 

ಮಂದ ಬುದ್ಧಿ ಬಿಡಬೇಕು

ಬುದ್ಧಿ ಜೀವಿಯಾಗಿ ಜೀವಿಸಬೇಕು.

 

-ಹುಚ್ಚೀರಪ್ಪ ವೀರಪ್ಪ ಈಟಿ, ಸಾ ನರೇಗಲ್ಲ 

ಚಿತ್ರ ಕೃಪೆ: ಇಂಟರ್ನೆಟ್ ತಾಣ

ಚಿತ್ರ್