ಬುರುಡೆಗೇರಿದ ಸರಳು; ಚುರುಕುಗೊಳಿಸೀತೆ ಮಿದುಳು?

ಬುರುಡೆಗೇರಿದ ಸರಳು; ಚುರುಕುಗೊಳಿಸೀತೆ ಮಿದುಳು?

ಬರಹ

ಇದು ಸಿ.ಇ.ಟಿ. ಸಮಯ. ರ್‍ಯಾಂಕ್ ಪಟ್ಟಿಯಲ್ಲಿ ಮೊದಲ ಒಂದೆರಡು ಸಹಸ್ರ ಅಂಕೆಗಳನ್ನು ದಾಟಿದವರಿಗೆ ಇಚ್ಛೆಯ ಕೋರ್ಸ್‍ಗಳು ಸಿಕ್ಕಿರಲಾರದು. ಸೀಟು ಗಿಟ್ಟಿಸದ ಆ ಮಕ್ಕಳಿಗಿಂತಲೂ ಅವರಪ್ಪ ಅಮ್ಮಂದಿರಿಗೆ ಬಹಳಷ್ಟು ನಿರಾಸೆಯಾಗಿರುತ್ತದೆ, ಅದು ಸಹಜ. ಇದಕ್ಕೆ ಸಮಯ ವ್ಯರ್ಥ ಮಾಡುವ ಬದಲು ಅದನ್ನು ಮಾಡಿದ್ದಿದ್ದರೆ? ಎಸ್ಸೆಸ್ಸೆಲ್ಸಿಯಲ್ಲಿ ಇನ್ನೊಂದು ಹತ್ತು ಮಾರ್ಕ್ ತೆಗೆದು ಈ ಕಾಲೇಜಿನ ಬದಲು ಆ ಕಾಲೇಜಿನಲ್ಲಿ ಸೀಟು ಗಿಟ್ಟಿಸಿಕೊಂಡು ಕಲಿತಿದ್ದರೆ? ಮನೆಪಾಠವನ್ನು ಇವರ ಬದಲು ಮತ್ತೊಬ್ಬರಿಂದ ಹೇಳಿಸಿದ್ದರೆ? ಪಕ್ಕದ್ಮನೆ ಕಮಲಮ್ಮನ ಗಂಡನ ಥರಾ ಇವರೂ ಮಗಳ ಪರೀಕ್ಷೆಯ ಸಮಯದಲ್ಲಿ ಒಂದು ತಿಂಗಳು ರಜೆ ಹಾಕಿ ಸರಿಯಾಗಿ ಓದಿಸಿದ್ದಿದ್ರೆ? ಮುದ್ದು ಕಮ್ಮಿ ಮಾಡಿ ಓದಿನ ಬಗ್ಗೆ ಮೊದಲಿನಿಂದ್ಲೂ ಒಂದಷ್ಟು ಶಿಸ್ತು ಬೆಳೆಸಿಕೊಳ್ಳುವಂತೆ ತಾಕೀತು ಮಾಡಿದ್ದಿದ್ರೆ? ಅಂಚೆ ಮೂಲಕ ತರಬೇತಿ ನೀಡುವ ಕೋರ್ಸಿಗೂ ನೋಂದಾಯಿಸಿಬಿಟ್ಟಿದ್ರೆ? ಮೊಬೈಲ್ ಫೋನ್ ಕೊಡಿಸದೇ ಇದ್ದಿದ್ರೆ? ಕೇಬಲ್ ಟೀವಿ ಕತ್ತರಿಸಿ ಹಾಕಿದ್ದಿದ್ರೆ? ಇಂಟರ್‌ನೆಟ್ ಸಂಪರ್ಕ ತಪ್ಪಿಸಿ ಹಾಕಿದ್ದಿದ್ರೆ? ಡೀವೀಡಿ ಪ್ಲೇಯರ್ ಮನೆಗೆ ತರದೆ ಇದ್ದಿದ್ರೆ? ಸ್ಕೂಟಿ ಕೊಡಿಸದೆಯೆ ಇದ್ದಿದ್ರೆ? ಪತ್ರಿಕೆ/ಮ್ಯಾಗಝಿನ್‍ಗಳನ್ನು ಒಂದಷ್ಟು ಕಾಲ ನಿಲ್ಲಿಸಿದ್ದಿದ್ರೆ? ............. ಮಗನಿಗೊ, ಮಗಳಿಗೊ ಇನ್ನೊಂದಷ್ಟು ಮಾರ್ಕ್ಸ್ ಬಂದಿರ್ತಿತ್ತು. ಕರ್ನಾಟಕದ ನಂಬರ್ ಒನ್ ಕಾಲೇಜಿನ ಎಲೆಕ್ಟ್ರಾನಿಕ್ಸ್ ಎಂಜಿನೀರಿಂಗ್ ಸೀಟು ಅವನದೊ/ಅವಳದೊ ಆಗಿರ್ತಿತ್ತು. ಬಹುಶಃ ಇನ್ನೊಂದು ತಿಂಗಳ ಕಾಲ ಹೀಗೆ ಕನವರಿಸುವವರನ್ನು ಕಚೇರಿ/ಬಸ್ ನಿಲ್ದಾಣ/ದೇವಸ್ಥಾನ/ಕಾಲೇಜು/ಉದ್ಯಾನವನಗಳಲ್ಲಿ ಕಾಣುತ್ತಿರುತ್ತೀರಿ. ಮತ್ತೆ ಮುಂದಿನ ವರ್ಷ ಇಂಥದೇ ಮಂದಿಯನ್ನು ಅದೇ ಸ್ಥಳಗಳಲ್ಲಿ ಮತ್ತಷ್ಟು ಹೆಚ್ಚಿನ ಸಂಖ್ಯೆಯಲ್ಲಿ ಕಾಣುವಿರಿ. ಇದೆಲ್ಲದರ ಬದಲು ಮಕ್ಕಳ ಚುರುಕುತನವನ್ನು ಹೆಚ್ಚಿಸುವ ಮಾತ್ರೆಯೊ, ಟಾನಿಕ್ಕೊ, ಆಹಾರವೊ ಇದ್ದಿದ್ದರೆ ಚೆನ್ನಾಗಿರುತ್ತಿತ್ತಲ್ಲವೆ? ..ಓದಿ ನೆಟ್‍ನೋಟ ಅಂಕಣ ಬರಹ...ವಿಜಯ ಕರ್ನಾಟಕ..ಸುಧೀಂದ್ರ ಹಾಲ್ದೊಡ್ಡೇರಿ

‍ನಿಮಗೆ ಈ ಬರಹ ಇಷ್ಟವಾಯಿತೇ? ತಿಳಿಸಿ
No votes yet
Rating
No votes yet