ಬೃಂದಾವನ

ಬೃಂದಾವನ

ಬರಹ

ನಾ ನೆಟ್ಟ ತೋಟದಲ್ಲಿ
ಹಸಿರು ಲಂಗವನುಟ್ಟು
ಅತ್ತಿತ್ತ ಓಡಾಡುವ ನನ್ನ ಹುಡುಗಿ||

ಬೆಳದಿಂಗಳ ರಾತ್ರಿಯಲ್ಲಿ
ಮಲ್ಲಿಗೆ ನಗೆ ಚೆಲ್ಲಿ
ತನ್ನೆಲ್ಲ ಆಸೆ ಹುದುಗಿ||

ಬಾ; ಓಡೋಡಿ ಬಾ
ಜಲಧಾರೆಯಾಗಿ ಬಾ
ಗಿಡಗಳು ಒಣಗಿವೆ
ಒಡಲಿಗೆ ನೀರುಣಿಸಲೆಂದು||

ನನ್ನೆದೆ ತೋಟದಲ್ಲಿ
ಅಲ್ಲೆಲ್ಲ ಓಡಾಡು
ಕಲಕದಿರಲಿ
ಹಸಿರೇ ಉಸಿರು ಎಂದೆಂದು||

ನೀ ಬಂದಾಗಲೆಲ್ಲ
ಲತೆಯ ಮೊಗ್ಗಲ್ಲೆ
ಬೀರಿದು ಕಾಯುತ್ತಿಹುದು
ಸ್ವಾಗತ ಕೋರಲೆಂದು||

ಇಲ್ಲಿ ಬಾಡಲಾರದು ಹೂವು
ಮರೆಯಲಾಗದ ಒಲವು
ನಿತ್ಯ ನೂತನ
ಬೃಂದಾವನ||