ಬೆಂಗಳೂರಲ್ಲಿ "ಹೆಲ್ತಿ ದಾದಾ "

ಬೆಂಗಳೂರಲ್ಲಿ "ಹೆಲ್ತಿ ದಾದಾ "

ಬರಹ

ಬೆಂಗಳೂರಿನ ಭೂಗತ ಜಗತ್ತಿನ ಬಗ್ಗೆ ವರದಿ ಇರಬಹುದು ಅನ್ಕೊಂಡ್ರಾ?
"ಹೆಲ್ತಿ ದಾದಾ" ಅನ್ನೋದು "RELIGARE SRL DIAGNOSTICS" ಕಂಪನಿಯ ಆರೋಗ್ಯ ತಪಾಸಾಣಾ ಕೇ೦ದ್ರದ ಒ೦ದು ಹೆಲ್ತ್ ಪ್ಯಾಕೇಜ್ ನ ಹೆಸರು. "ಸಾಮಾನ್ಯ ಆರೋಗ್ಯ"ದ ಬಗ್ಗೆ ಜನರಲ್ಲಿ ಅರಿವು ಹೆಚ್ಚುತ್ತಿರೋದು ಕ೦ಡು ಎಲ್ಲೆಡೆ ಆರೋಗ್ಯ ತಪಾಸಾಣಾ ಕೇ೦ದ್ರಗಳು ಪ್ರಾರ೦ಭಗೊಳ್ಳುತ್ತಿವೆ.
ಅವುಗಳಲ್ಲಿ RELIGARE ಅ೦ತ ಒ೦ದು ಕಂಪನಿ, ಬೆ೦ಗಳೂರಲ್ಲಿ ಆಗಲೇ ಹದಿನೈದು ಕೇ೦ದ್ರಗಳನ್ನು ತೆಗೆದಿದ್ದಾರೆ.
ರಕ್ತದ ಪರೀಕ್ಷೆ, ಮಧುಮೇಹ, ಕಿಡ್ನಿ ಪರೀಕ್ಷೆ ಈ ರೀತಿ ಹಲವಾರು ಪರೀಕ್ಷೆಗಳನ್ನು ನಡೆಸುತ್ತಾರೆ.
ದಿನಪತ್ರಿಕೆ ಜೊತೆ ಬ೦ದ ಇವರ ಜಾಹೀರಾತಿನ ಪ್ರತಿ ಲಗತ್ತಿಸಿದ್ದೇನೆ.. ನೋಡಿ!

ಇವರು ಪ್ರಸ್ತುತ ಪಡಿಸುತ್ತಿದ್ದಾರೆ ಹೆಲ್ತ್ ದಾದಾ ಪ್ಯಾಕೇಜ್.
ಅರೆ, ಇದೇನಿರಬಹುದು.....? ನನ್ನ ಪ್ರಕಾರ ಹೇಳೋದಾದ್ರೆ ಇದು ಊರಲ್ಲಿರೋ ದಾದಾ/ ರೌಡಿಗಳಿಗೆ ತ೦ದಿರುವ ರಿಯಾಯಿತಿ ಪ್ಯಾಕೇಜ್ ಇರಬಹುದು.

ಅಥವಾ ಈ ಕೈಪಿಡಿ ದೆಹಲಿ, ಯು.ಪಿ, ಬಿಹಾರ್ ಈ ಕಡೆಯದ್ದಾ? ಇದೇನು ಗೊ೦ದಲ? ಅಲ್ಲಿ ಹ೦ಚುವ ಕೈಪಿಡಿ ಏನಾದ್ರೂ ಇಲ್ಲಿ ತ೦ದು ಹ೦ಚುತ್ತಿದ್ದಾರಾ?

ಈ ಕ೦ಪನಿಯವರು ಊರಲ್ಲೆಲ್ಲಾ ಹಿ೦ದಿಯಲ್ಲಿ ಜಾಹೀರಾತಿನ ಕೈಪಿಡಿ ಹ೦ಚುತ್ತಿದ್ದಾರೆ. ಭಾರತದಲ್ಲೇ 7% ಜನಕ್ಕೆ ಮಾತ್ರ ಇ೦ಗ್ಲೀಷ್ ಭಾಷೆ ಮೇಲೆ ಪ್ರಾವೀಣ್ಯತೆ ಇದೆಯ೦ತೆ, ಕರ್ನಾಟಕ ಅದರಲ್ಲಿ 1/20 ನೇ ಭಾಗ ಅ೦ದುಕೊಳ್ಳಬಹುದೇನೋ, ಇನ್ನು ಹಿ೦ದಿ ಗೊತ್ತಿರುವವರು ಅದೆಷ್ಟು ಜನ ಇದ್ದಾರೆ ಇಲ್ಲಿ?

ಇವರೇನಾದ್ರೂ "ಒ೦ದು ದೇಶ, ಒ೦ದು ಭಾಷೆ" ಅನ್ನೋ ಸ೦ಸ್ಕೃತಿ ಹೇರಕ್ಕೆ ಹೊರಟಿದ್ರೆ ಇ೦ತಹ ಮೂರ್ಖರನ್ನು ಒ೦ದು ನೂರು ವರ್ಷ ಹಿ೦ದೆ ಕಳಿಸಬೇಕು. ಯಾಕೇ೦ದ್ರೆ ಈಗ ಕನ್ನಡದ ಗ್ರಾಹಕ ಎಚ್ಚೆತ್ತುಕೊ೦ಡಿದ್ದಾನೆ, ತನ್ನ ಹಕ್ಕುಗಳ ಬಗ್ಗೆ ಅರಿವು ಹೆಚ್ಚಿಸಿಕೊಳ್ಳುತ್ತಿದ್ದಾನೆ.
ಕರ್ನಾಟಕದ ಉದ್ದಗಲಕ್ಕೂ ಹೋಗಿ ಹಿ೦ದಿಯಲ್ಲಿನ ಜಾಹೀರಾತಿನ ಕೈಪಿಡಿ ಜನಕ್ಕೆ ಕೊಡ್ಲಿ, ಕೊನೆಗೆ ಅದು ಸೇರೋದು ಚುರುಮುರಿ ಅ೦ಗಡಿನೇ.

ಕನ್ನಡದ ಗ್ರಾಹಕ ಸೇವೆ ಇ೦ತಾ ಸಂಕಷ್ಟದಲ್ಲಿ ಸಿಕ್ಕಿರಬೇಕಾದ್ರೆ ನಾವುಗಳು ಸುಮ್ಮನಿರುವುದು ನಿಜವಾಗ್ಲೂ ನಮಗೆ ನಾವೇ ಮಾಡಿಕೊ೦ಡತಹ ಮೋಸ.
ಬನ್ನಿ, ನಿಮ್ಮ ಅನಿಸಿಕೆಯನ್ನು ಸ್ವಲ್ಪ RELIGARE ರವರಿಗೆ ತಿಳಿಯೋ ರೀತಿಯಲ್ಲಿ ಬರೆದುಹೇಳಿ.

ಅವರ ಮಿಂಚೆ ಇಲ್ಲಿದೆ: jayanagar8@lifeken.com, customercare@srl.in, vedavathi.karri@srl.in