ಬೆಂಗಳೂರಿನಲ್ಲಿ ಗ್ನು/ಲಿನಕ್ಸ್ ಹಬ್ಬ!
Signups closed for the event. You can track the event at:
http://habba.in
ಹೌದು, ಎಲ್ಲರಿಗೂ ಲಿನಕ್ಸ್ ನ ಔತಣ ಬಡಿಸೋ ಆಸೆ. ಲಿನಕ್ಸ್ ಕನ್ನಡಿಗರಿಗೆ ಹತ್ತಿರ ಆಗಬೇಕು. ಅದನ್ನ ಉಪಯೋಗಿಸೋದು ಸುಲಭ ಆಗಬೇಕು, ನಮ್ಮಲ್ಲಿರೋ ಸಂದೇಹಗಳನ್ನ ನಿವಾರಿಸುವುದಾಗಬೇಕು, ಗ್ನೂ/ಲಿನಕ್ಸ್ ನ ಸ್ವಾತಂತ್ರ್ಯವನ್ನ ಎಲ್ಲರೂ ಮೆಲ್ಲಬೇಕು ಅನ್ನೋದು ನಮ್ಮ ಆಶಯ.
ನಾವು:
೧. ನಿಮ್ಮ ಲ್ಯಾಪ್ಟಾಪ್/ಡೆಸ್ಕ್ಟಾಪ್ ನಲ್ಲಿ ಲಿನಕ್ಸ್ ಹಾಕಿಕೊಳ್ಳುವುದು ಹೇಗೆ ಅಂತ ತೋರಿಸುತ್ತೇವೆ.
೨. ಲಿನಕ್ಸಿನಲ್ಲಿ ಕನ್ನಡ ಬರೆಯುವುದು ಹೇಗೆ ಮತ್ತು ಕನ್ನಡ ಓದುವುದು ಹೇಗೆ? ತೋರಿಸುತ್ತೇವೆ
೩. ನೀವು ತಂದಿರುವ ಲ್ಯಾಪ್ಟಾಪ್/ ಡೆಸ್ಕ್ಟಾಪ್ ನಲ್ಲಿ ನಿಮ್ಮ ಮುಂದೆಯೇ ಲಿನಕ್ಸ್ ಹಾಕಿಕೊಡುತ್ತೇವೆ.
೪. ನೀವು ಒಂದು ಖಾಲಿ ಸಿ.ಡಿ ತಂದರೆ ನಮ್ಮ ಬಳಿ ಇರುವ ಲಿನಕ್ಸಿನ ಒಂದು ಕಾಪಿ ನಿಮಗೂ ಕೊಡುತ್ತೇವೆ. (ಇದು ಪೈರಸಿ ಆಗೋಲ್ಲ!! ನೀವೂ ಆ ಸಿಡಿಯನ್ನ ಬೇರೆಯವರಿಗೆ ಹಂಚಬಹುದು!)
೫. ನಿಮ್ಮ ಯಾವುದೇ ಲಿನಕ್ಸ್ ಮತ್ತು ಕನ್ನಡ ಫಾಂಟ್ ಪ್ರಶ್ನೆಗೆ ಉತ್ತರ ಹೇಳಲು ನಾವು ತಯಾರಿರುತ್ತೇವೆ.
ನೀವು ಭಾಗವಹಿಸಬೇಕಾದರೆ,
೧. ಲಾಗಿನ್ ಆಗಿ ಇದೇ ಪುಟದಲ್ಲಿ ನಿಮ್ಮ ಹೆಸರು, ಫೋನ್ ನಂಬರ್ ನೀಡಿ ನೋಂದಾಯಿಸಿಕೊಳ್ಳಿ (ಪುಟದ ಕೊನೆ ನೋಡಿ).
೨. ಟೆಕ್ಕಿಗಳಾದರೆ - ಭಾಗವಹಿಸುವ ಗೆಳೆಯರ ಸಿಸ್ಟಂಗಳಲ್ಲಿ ಉಬಂಟು ಹಾಕಿಕೊಡುವ ಕೆಲಸದಲ್ಲಿ ನಮ್ಮೊಂದಿಗೆ ಕೈ ಜೋಡಿಸಿ[:article/8005|ವಿವರಗಳಿಗೆ ಓಂಶಿವು ಅವರ ಲೇಖನ ನೋಡಿ].
೩. ನಮಗೆ ಟೆಕ್ನಿಕಲ್ ಅಲ್ಲದ ವಿಷಯಗಳಲ್ಲಿ ಕೈ ಜೋಡಿಸುವ ಗೆಳೆಯರ ಅಗತ್ಯವೂ ಇದೆ. ನಿಮಗೆ ಪಾಲ್ಗೊಳ್ಳುವ ಆಸಕ್ತಿ ಇದ್ದರೆ ಖಂಡಿತ ತಿಳಿಸಿ.
೪. ನಿಮಗೂ ನಿಮ್ಮ ಲ್ಯಾಪ್ಟಾಪ್ / ಡೆಸ್ಕ್ಟಾಪ್ ಗಳಲ್ಲಿ ಲಿನಕ್ಸ್ ಮತ್ತು ಕನ್ನಡ ಬೇಕೆಂದಿದ್ದರೆ, ನಿಮ್ಮ ಲ್ಯಾಪ್ಟಾಪ್ / ಡೆಸ್ಕ್ಟಾಪ್ ತೆಗೆದುಕೊಂಡು ಬನ್ನಿ. ನಿಮಗೆ ಸಹಾಯ ಮಾಡಲು ನಾವಿದ್ದೇವೆ.
೫. ನಿಮಗೆ ಲಿನಕ್ಸ್ ಮತ್ತು/ಅಥವಾ ಕನ್ನಡ ಫಾಂಟ್ನಲ್ಲಿ ಏನಾದರೂ ಪ್ರಶ್ನೆಗಳಿದ್ದರೆ, ಭಾಗವಹಿಸಿ, ನಮ್ಮ ಕೈಲಾದಷ್ಟು ಉತ್ತರ ಕೊಡುತ್ತೇವೆ.
ಯಾವತ್ತು?
ಏಪ್ರಿಲ್ ೨೬, ೨೦೦೮ ರಂದು
ಎಲ್ಲಿ?
ಇಂಡಿಯನ್ ಇನ್ಸ್ಟಿಟ್ಯೂಟ್ ಆಫ್ ಸೈನ್ಸ್ - SERC ವಿಭಾಗ, ಬೆಂಗಳೂರು.
ಹೆಚ್ಚಿನ ಓದು:
[:article/8005|ಬೆಂಗಳೂರಲ್ಲಿ ಲಿನಕ್ಸ್ ಹಬ್ಬ: ನೀವೂ ಬನ್ನಿ!]
[:Bengaluru-Linux-habba/2|ಬೆಂಗಳೂರಿನಲ್ಲಿ ಲಿನಕ್ಸ್ ಹಬ್ಬ - ಏನೇನಿದೆ?]