ಬೆಂಗಳೂರಿನ, ಡಾ. ಶ್ರೀನಾಥ್ ಮತ್ತು ಉಮಾಶ್ರೀನಾಥ್ ರವರ ಆತಿಥ್ಯ !

ಬೆಂಗಳೂರಿನ, ಡಾ. ಶ್ರೀನಾಥ್ ಮತ್ತು ಉಮಾಶ್ರೀನಾಥ್ ರವರ ಆತಿಥ್ಯ !

ಬರಹ

ಡಾ. ಚಂದ್ರಾರವರ ಪರಿವಾರದ ಗೆಳೆಯ, ಶ್ರಿನಾಥ್ ಮತ್ತು ಹಾಗೂ ಅವರ ಪತ್ನಿ, ಉಮಾಶ್ರೀನಾಥ್ ರವರು, ನಮ್ಮನ್ನು ’ಡಿನ್ನರ್,’ ಗೆ ಆಹ್ವಾನಿಸಿದ್ದರು. ಈ ಕನ್ನಡದ ದಂಪತಿಗಳಿಗೆ, ಆದಿತ್ಯ, ಮತ್ತು ಮೇಘ್ನಾ, ಎಂಬ ಇಬ್ಬರು ಮಕ್ಕಳು. ಚಿಕಾಗೋನಗರದ ಸುಪ್ರಸಿದ್ಧ ಕಾಲೇಜೊಂದರಲ್ಲಿ ವ್ಯಾಸಂಗಮಾಡುತ್ತಿದ್ದಾರೆ.

ಒಟ್ಟಾರೆ, ಮಿಸ್ಸೂರಿ ರಾಜ್ಯದ ಕೊಲಂಬಿಯ ವಿದ್ಯಾಸಂಸ್ಥೆಗಳ, ಶಿಕ್ಷಣ-ವ್ಯವಸ್ಥೆಯಲ್ಲಿ ಸುಮಾರು, ೭೦,೦೦೦ ವಿದ್ಯಾರ್ಥಿಗಳು ಅಭ್ಯಾಸಮಾಡುತ್ತಿದ್ದಾರೆ ಅಂಬೋಣ !

ಕೊಲಂಬಿಯ ನಗರದ UMC, ವಿಶ್ವವಿದ್ಯಾಲಯದ, David & Judy O'nill, Department of Marketing College of Business, ನಲ್ಲಿ, M. B. A; Professor & Professor of Marketing, College of Business ಆಗಿ, ಕೆಲಸಮಾಡುತ್ತಿರುವ ಡಾ. ಶ್ರೀನಾಥ್, ಕನ್ನಡಿಗರು. ಬೆಂಗಳೂರಿನವರು.

* ಇವರು IIT ಯಲ್ಲಿ, B. Tech ಪದವಿಯನ್ನು ೧೯೭೭ ರಲ್ಲಿ ಗಳಿಸಿದರು.

* MBA, ಡಿಗ್ರಿಯನ್ನು I. I. M, ನಲ್ಲಿ 1980, ಪಡೆದರು.

* Ph D; ಯನ್ನು ’Pardue University, Indiana,” ದಲ್ಲಿ, ೧೯೮೮ ದಲ್ಲಿ, ಗಳಿಸಿದರು.

ಪತ್ನಿ, ಉಮಾ ಶ್ರೀನಾಥ್, ’ಬೂನ್ ಕೌಂಟಿ ಆಸ್ಪತ್ರೆ,’ ಯಲ್ಲಿ ’ ಸೀನಿಯರ್ ಡಯಟೀಶಿಯನ್ ’, ಆಗಿ, ದುಡಿಯುತ್ತಿದ್ದಾರೆ.

ವಿದ್ಯಾನಗರವಾದ ಕೊಲಂಬಿಯದಲ್ಲಿ ಸುಮಾರು ೩೦,೦೦೦ ವಿದ್ಯಾರ್ಥಿಗಳು ವ್ಯಾಸಂಗಮಾಡುತ್ತಿದ್ದಾರೆ. ಯೂರೋಪ್ ನಿಂದ ಬರುವ ಹುಡುಗ-ಹುಡುಗಿಯರಿಗಿಂತಾ, ಏಷ್ಯಾಖಂಡದ ಭಾಗಗಳಿಂಡ ಬರುವವರ ಸಂಖ್ಯೆ ಹೆಚ್ಚಾಗಿದೆ. (ಚೈನಾ, ಜಪಾನ್, ಟೈವಾನ್, ಕೊರಿಯಾ, ಭಾರತ)ಪ್ರಾರಂಭಿಕ ವ್ಯಾಸಂಗವನ್ನು ಭಾರತದಲ್ಲಿ ಮುಗಿಸಿ, ಅಮೆರಿಕದಲ್ಲಿ ಹೆಚ್ಚಿನ ವಿದ್ಯಾಭ್ಯಾಸಮಾಡುತ್ತಿರುವ ಭಾರತೀಯರ ಸಂಖ್ಯೆಗೇನು ಕಡಿಮೆಯಿಲ್ಲ.

http://travel2west.blogspot.com/2008/08/blog-post_6362.html

-ಚಿತ್ರ ನನ್ನ ಸಂಗ್ರಹದಿಂದ.