ಬೆಂಗಳೂರು ಅಂತರಾಷ್ಹ್ಟ್ರೀಯ ವಿಮಾನ ನಿಲ್ದಾಣದಲ್ಲಿ ಕನ್ನಡಿಗರಿಗೆ ಉದ್ಯೋಗ ನೀಡಬೇಕೆಂದು ಹೋರಾಟ.
ಬೆಂಗಳೂರು ಅಂತರಾಷ್ಹ್ಟ್ರೀಯ ವಿಮಾನ ನಿಲ್ದಾಣ ಇನ್ನು ಕೆಲವೇದಿನದಲ್ಲಿ ಕಾರ್ಯಾರಂಭಗೊಳ್ಳಲಿದೆ , ಅಲ್ಲಿ ಕನ್ನಡಕ್ಕೆ ಆದ್ಯತೆ ಮತ್ತು ಕನ್ನಡಿಗರಿಗೆ ಉದ್ಯೋಗದಲ್ಲಿ ಸಿಂಹಪಾಲು ದೊರೆಯಬೇಕು. ಇದಕ್ಕಾಗಿ ನಾವು ಸರ್ಕಾರ ಮತ್ತು ಬೆಂಗಳೂರು ಅಂತರಾಷ್ಹ್ಟ್ರೀಯ ವಿಮಾನ ನಿಲ್ದಾಣ ಪ್ರಾಧಿಕಾರಕ್ಕೆ ಕೆಲವು ಬೇಡಿಕೆಗಳನ್ನು ಮುಂದಿಟ್ಟಿದ್ದೇವೆ.
ನಮ್ಮ ಬೇಡಿಕೆಗಳು-
೧. ವಿಮಾನ ನಿಲ್ದಾಣದಲ್ಲಿರುವ ಉದ್ಯೋಗಗಳು ಕನ್ನಡಿಗರಿಗೆ ದೊರಕಬೇಕು. ವಿಮಾನ ನಿಲ್ದಾಣಕ್ಕೆ ೪೦೦೦ ಎಕರೆ ಭೂಮಿ ನೀಡಿದ ೩೦೦೦ ರೈತ ಕುಟುಂಬದವರಿಗೆ ಆದ್ಯತೆ ನೀಡಬೇಕು.
೨. ವಿಮಾನ ನಿಲ್ದಾಣ ದಲ್ಲಿರುವ ನಾಮಫಲಕಗಳು ಮತ್ತು ಗ್ರಾಹಕ ಸೇವೆ ಕನ್ನಡದಲ್ಲಿರಬೇಕು.
೩. ವಿಮಾನ ನಿಲ್ದಾಣಕ್ಕೆ ನಾಡಪ್ರಭು ಕೆಂಪೇಗೌಡರ ಹೆಸರನ್ನು ಇಡಬೇಕು.
ಈ ನಿಟ್ಟಿನಲ್ಲಿ ಮೇ ೨೧ ನೇ ತಾರೀಖು ಯಲಹಂಕದ ಕೆಂಪೇಗೌಡ ಪ್ರತಿಮೆಯಿಂದ ರಾಜಭವನದವರೆಗೆ ಪ್ರತಿಭಟನಾ ಜಾಥವನ್ನು ಹಮ್ಮಿಕೊಳ್ಳಲಾಗಿದೆ, ಈ ಜಾಥದಲ್ಲಿ ಸಮಸ್ಥ ಕನ್ನಡಿಗರೂ ಪಾಲ್ಗೊಂಡು ತಮ್ಮ ಬೆಂಬಲವನ್ನು ಸೂಚಿಸಬೇಕೆಂದು ವಿನಂತಿಸಿಕೊಳ್ಳುತ್ತೇವೆ.
illu nODi...
http://karave.blogspot.com/search/label/%E0%B2%89%E0%B2%A6%E0%B3%8D%E0%B2%AF%E0%B3%8B%E0%B2%97
Comments
ಉ: ಬೆಂಗಳೂರು ಅಂತರಾಷ್ಹ್ಟ್ರೀಯ ವಿಮಾನ ನಿಲ್ದಾಣದಲ್ಲಿ ಕನ್ನಡಿಗರಿಗೆ ಉದ್ಯೋಗ ನೀಡಬೇಕೆಂದು ಹೋರಾಟ.