ಬೆಂಗಳೂರು ಸುತ್ಲಿಕ್ಕೆ ಜಿ.ಪಿ.ಎಸ್ ಮತ್ತು ವಿಡ್ ಟೆಕ್

ಬೆಂಗಳೂರು ಸುತ್ಲಿಕ್ಕೆ ಜಿ.ಪಿ.ಎಸ್ ಮತ್ತು ವಿಡ್ ಟೆಕ್

ಬರಹ

ಬೆಂಗಳೂರಿನಲ್ಲಿ ಇದ್ರೂ ರೋಡ್ಗಳು ದಿನ ಬೆಳಗಾದ್ರೆ ಬದಲಾಗೋ ಪರಿಸ್ಥಿತಿ. ಹೊಸ ರೋಡಿಗೆ ಒಗ್ಗೋದ್ರಲ್ಲಿ, ಹಳೆರೋಡುಗಳು ಮರೆತು, ಫ್ಲೈ ಓವರ್ ಗಳು ಬಂದು ಹೊಸದೊಂದು ರೂಟನ್ನೇ ರೆಡಿ ಮಾಡ್ಬಿಟಿರ್ತಾವೆ. ಇನ್ಮುಂದೆ ಪ್ರತಿದಿನ ಜಿ.ಪಿ.ಎಸ್ (ಗ್ಲೋಬಲ್ ಪೊಸಿಷನಿಂಗ್ ಸಿಸ್ಟಂ) ಉಪಯೋಗಿಸದೆ ವಿಧಿಯೇ ಇಲ್ಲ ಅನ್ನೋ ಕಾಲ ಬಂದ್ರೂ ಬರಬಹುದು. ಇಂತದ್ದೇ ಒಂದು ಟೆಕ್ನಾಲಜಿ ಬಳಸ್ಕೊಂಡು, ಬೆಂಗಳೂರಿನ ಕಂಪೆನಿ ವಿಡ್ ಟೆಕ್ ಬೆಂಗಳೂರಿಗರಿಗೆ, ಮತ್ತು ಬೆಂಗಳೂರಿಗೆ ಬರ್ತಿರೋ ಅನೇಕ ಹೊಸಬರಿಗೆ ತಮ್ಮದೊಂದು ವಿನೂತನ ಸೇವೆಯನ್ನ ಕೊಡಲಿಕ್ಕೆ ಮುಂದಾಗಿದೆ.

ಬೆಂಗಳೂರಿನ ವಿಡಿಯೋ ಮ್ಯಾಪ್ಗಳು, ಡಿಜಿಟಲ್ ಮ್ಯಾಪ್ಗಳು,  ಇಮೇಜ್ ಗಳು,  ಮತ್ತು ಮಾರ್ಗದರ್ಶಿಗಳನ್ನ ವಿಡ್ ಟೆಕ್ ತನ್ನ ವೆಬ್ ಸೈಟ್ ನಲ್ಲಿ ಹೊಂದಿದೆ. ಅದರ ನುರಿತ ತಂತ್ರಜ್ಞರು, ತಮ್ಮ ಕ್ಯಾಮೆರ ಅಳವಡಿಸಿರುವ ಕಾರ್ ಉಪಯೋಗಿಸಿ ತೆಗೆದಿರೋ ವಿಡಿಯೋವನ್ನ ಪ್ರೋಸೆಸಿಂಗ್ ಮಾಡಿ ಅದನ್ನ ಜಿ.ಪಿ.ಎಸ್ ಜೊತೆಗೆ ಟ್ರಾಕ್ ಮಾಡಿ ನಿಮ್ಮ ಮುಂದೆ ಎಲ್ಲ ಅಡ್ರೆಸ್ಸುಗಳು, ಬಿಸಿನೆಸ್ ಮಾಹಿತಿ ಇತ್ಯಾದಿಗಳನ್ನ ಇಡ್ತಿದ್ದಾರೆ. ವೆಬ್ ಸೈಟ್ ಅಜಾಕ್ಸ್(ajax) ನಿಂದಾಗಿ ನಿಮಗೆ ಆಟೋ ಹಿಂಟಿಗ್ ಕೂಡ ಕೊಡತ್ತೆ. ಅಂದ್ರೆ, ಮಡಿವಾಳ ಟೈಪ್ ಮಾಡ್ಬೇಕಿದ್ರೆ Ma ಒತ್ತಿದಾಕ್ಷಣ ಕೆಳಗೆ ನಿಮಗೆ ಆಯ್ಕೆಗಳೂ ಸಿಗ್ತವೆ. ಇದೆಲ್ಲದರ ಜೊತೆಗೆ ಇಲ್ಲಿ ಸಿಗುವ ವಿಡಿಯೋವನ್ನು ನೀವು ಡೌನ್ಲೋಡ್ ಕೂಡ ಮಾಡ್ಕೋ ಬಹುದು. ಸಧ್ಯಕ್ಕೆ ಈ ಸೇವೆ ಉಚಿತವಾಗಿ ಲಭ್ಯವಿದೆ.

ಪೋಲೀಸರಿಗಂತೂ ಇದು ವರದಾನವಾಗಲಿದೆ. ಎಲ್ಲೆಲ್ಲಿ ಬೇಕಾಬಿಟ್ಟಿ ವಾಹನಗಳನ್ನ ನೆಡೆಸೋ ಸ್ಥಳಗಳಿವೆ, ಅವರು ಎಲ್ಲಿ ಸಿಗ್ನಲ್ ಲೈಟ್ ಗಳನ್ನ ಹಾಕ್ಬೇಕು, ಯಾವಯಾವ ಫ್ಲೈ ಓವರ್ಗಳು ಮಾರಣಾಂತಿಕವಾಗಿ ಅನ್ನೋದನ್ನ ಇಲ್ಲಿ ಒಂದು ಕಡೆ ಕುಳಿತು ನೋಡ್ಬಹುದು. ವಿಡ್ ಟೆಕ್ ಎಲ್ಲೆಡೆಯ ವಿಡಿಯೋ ಲಭ್ಯವಾಗೋ ಹಾಗೆ ಮಾಡಿದ್ರೆ ನಮ್ಮ ಟ್ರಾಫಿಕ್ ಯಾಕಿಷ್ಟು ಕೆಟ್ಟದಾಗಿದೆ ಅನ್ನೋದು ಸುಲಭವಾಗಿ ಗೊತ್ತಾಗತ್ತೆ. ಮೊನ್ನೆ ಕೆರೆಗಳನ್ನ ಉಳಿಸ್ಲಿಕ್ಕೆ, ಬೆಂಗಳೂರಿನ ಸುತ್ತ ಸೈಕಲ್ ಸವಾರರಿಗೆ ಅನುಕೂಲ ಮಾಡ್ಲಿಕ್ಕೆ  ಏನೆಲ್ಲ ಮಾಡ್ಬಹುದು ಅಂತ ತುಂಬಾ ಓಡಾಡ್ತಿರೋ ಮುರಳಿ ಆಫೀಸಿಗೆ ಬಂದಾಗ ಇದನ್ನ ತೋರಿಸ್ತಿದ್ದೆ. ಅವನಂತೂ ಖುಷಿ ಆಗಿ ಹೋದ. ಯಾಕಂದ್ರೆ ಇತರೆ ಜಿ.ಪಿ.ಎಸ್ ವೆಬ್ ಸೈಟ್ ಗಳಲ್ಲಿ ಇಲ್ಲಿ ದೊರೆಯೋತರ ವಿಡಿಯೋ ಜನರಿಗೆ ಲಭ್ಯವಿಲ್ಲ. ಇದನ್ನ ಅನೇಕ ಸದುದ್ದೇಶಗಳಿಗೆ ಬಳಸೋ ಇರಾದೆ ಮುರಳಿಯದ್ದು. ನಿಮಗೂ ಇದನ್ನ ಇನ್ನೆಲ್ಲಿಯಾದರೂ ಬಳಸೋ ತಂತ್ರ ತಲೆಗೆ ಬರ್ತಿದಿಯಾ? 

vidteq1

ವಿಡ್ ಟೆಕ್ ವೆಬ್ ಸೈಟ್

vidteq2

ಮ್ಯಾಪುಗಳು ಮತ್ತು ಮಾರ್ಗದರ್ಶಿ

vidteq3

ವಿಡಿಯೋ ಇದೆ ನೋಡಿ, ಡೌನ್ಲೋಡ್ ಕೂಡ ಮಾಡಬಹುದು