ಬೆಂಡೆ ಬೇಸಾಯ ಕ್ರಮಗಳು (ಭಾಗ ೨)

ಬೆಂಡೆ ಬೇಸಾಯ ಕ್ರಮಗಳು (ಭಾಗ ೨)

ಎಲೆಗಳ ಪೋಷಕಾಂಶ: ನಾಟಿ ಮಾಡಿದ ೪೫ ದಿನಗಳ ನಂತರ ಕ್ಯಾಲ್ಸಿಯಂ, ಮ್ಯಾಗ್ನೇಷಿಯಂ, ಕಬ್ಬಿನಾಂಶ,ಮ್ಯಾಂಗನೀಸ್, ಬೊರಾನ್, ತಾಮ್ರ ಹಾಗೂ ಸತುವಿನ ಅಂಶವಿರುವಂತಹ ಗೊಬ್ಬರವನ್ನು(ತರಕಾರಿ ಸ್ಪೆಷಲ್)  ೫ ಗ್ರಾಂ ಪ್ರತಿ ಲೀ. ನೀರಿನಲ್ಲಿ ಬೆರೆಸಿ ೧೫ ದಿನಗಳ ಅಂತರದಲ್ಲಿ ಎಲೆಗಳಿಗೆ ಸಿಂಪಡಿಸಬೇಕು.

ನೀರಾವರಿ: ಮಣ್ಣು ಹಾಗೂ ಕಾಲಮಾನಕ್ಕೆ ತಕ್ಕಂತೆ ನೀರು ಹಾಯಿಸಬೇಕು. ಬಿಸಿಲಿನ ತಾಪಮಾನ ಹೆಚ್ಚಾದಲ್ಲಿ (೪೦ ಸೆಂ,) ಆಗಿಂದಾಗಲೆ ಹೆಚ್ಚಿನ ನೀರು ಹಾಯಿಸಬೇಕು. ಹೀಗೆ ಮಾಡುವುದರಿಂದ ಮಣ್ಣನ್ನು ತೇವಾಂಶದಿಂದ ಇಡಬಹುದು.

ಹನಿ ನೀರಾವರಿ ಅಳವಡಿಕೆ: ಮಡಿಗಳ ಮದ್ಯಭಾಗದಲ್ಲಿ ೩೦-೩೩ ಮೀ. ಉದ್ದ ಸಾಲಿನಲ್ಲಿ ಎರಡು ಗಿಡಗಳ ಮಧ್ಯ ಹನಿ ನೀರಾವರಿ ಕೊಳವೆ ಅಳವಡಿಸಬೇಕು. ದಿನಕ್ಕೆ ೨೦-೪೦ ನಿಮಿಷಗಳ ಕಾಲ ನೀರನ್ನು ಬಿಡಬೇಕು. ಬೆಳೆಯ ವಯಸ್ಸು, ಕಾಲ ಹಾಗೂ ಎಮಿಟರ್ ಅನುಸಾರವಾಗಿ ನೀಡಬೇಕು.

ಪ್ಲಾಸ್ಟಿಕ್ ಹಾಳೆಯ ಹೊದಿಕೆ: ೧.೨ ಮೀ.ಅಗಲದ ಹಾಗೂ ೩೦ ಮೈಕ್ರಾನ್ ದಪ್ಪದ ಪಾಲಿಥೀನ್ ಹೊದಿಕೆಯನ್ನು ಬಳಸಬಹುದು.

ಕೊಯ್ಲು ಮತ್ತು ಇಳುವರಿ: ಬಿತ್ತನೆ ಮಾಡಿದ ೪೫-೫೦ ದಿನಗಳಿಗೆ ಬೆಂಡೆಕಾಯಿ ಕೊಯ್ಲನ್ನು ಮಾಡಬಹುದು. ಎಳೆ ಕಾಯಿಗಳಿಗಾಗಿ ೨-೩ ದಿನದ ಅಂತರದಲ್ಲಿ ಕಾಲಾನುಸಾರವಾಗಿ ಕೊಯ್ಲು ಮಾಡಬೇಕು. ಬಟ್ಟೆ ಬ್ಯಾಗ್ ಅಥವಾ ಕೈ ಚೀಲವನ್ನು ಕೊಯ್ಲು ಮಾಡುವಾಗ ಉಪಯೋಗಿಸುವುದು ಉತ್ತಮ.  ದೂರದ ಮಾರುಕಟ್ಟೆಗೆ ಸಾಗಿಸಲು ಬೆಳಗಿನ ಜಾವ ಅಥವಾ ಸಂಜೆಯ ವೇಳೆ ಕೊಯ್ಲು ಮಾಡಬೇಕು. ಪ್ರತಿ ಹೆಕ್ಟೇರಿಗೆ ೧೮-೨೪ ಟನ್ನು ಬೆಂಡೆ ಇಳುವರಿ ಸಿಗುತ್ತದೆ.

ರೋಗ ಮತ್ತು ಕೀಟ ನಿರ್ವಹಣೆ:

೧) ಶೀಘ್ರ ಸೊರಗು (ಫ್ಯುಸೇರಿಯಂ ವಿಲ್ಟ್): ರೋಗ ಲಕ್ಷಣ: (ಚಿತ್ರ ೩)

 -ಸೋಂಕಿತ ಗಿಡಗಳು, ಎಲೆಗಳು ಮುದುಡಿಗೊಂಡಿರುತ್ತವೆ ಮತ್ತು ಎಲೆಗಳು ಬಾಡಿದ ಆಗಿರುತ್ತವೆ.

- ನೀರು ಬಸಿದು ಹೋಗುವ ವ್ಯವಸ್ಥೆಯು ಸರಿಯಾಗಿ ಇಲ್ಲದ್ದಿದ್ದರೆ ಈ ರೋಗ ಹೆಚ್ಚಾಗಿ ಕಂಡುಬರುತ್ತದೆ.

ನಿರ್ವಹಣೆ: 

- ಸೋಂಕಿತ ಗಿಡಗಳಿಗೆ ತಯೋಫಿನೇಟ್ ಮೀಥೈಲ್ ೭೦% ಡಬ್ಲೂ ಪಿ.(೨ ಗ್ರಾಂ/ ಪ್ರತಿ ಲೀ.) + ಕ್ಯಾಪ್ಟಾಫ್ (೨ ಗ್ರಾಂ/ ಪ್ರತಿ ಲೀ.) ನೀರಿನಲ್ಲಿ ಬೆರೆಸಿ  ಬೇರುಗಳಿಗೆ ನೀಡಬೇಕು.

-ಬೆಳೆ ಪರಿವರ್ತನೆ ಮಾಡುವುದು. 

(೨) ಕಾಯಿಕೊರಕ:(ಚಿತ್ರ ೧)

ರೋಗ ಲಕ್ಷಣ:

- ಬೇಸಿಗೆ ಕಾಲದಲ್ಲಿ ಹೆಚ್ಚಾಗಿ ಕೀಟಬಾದೆಯನ್ನು   ಕಾಣಬಹುದು

- ಕಾಯಿಗಳನ್ನು ಕೊರೆದು ರಂದ್ರವನ್ನು ಕಾಣಬಹುದು.

ನಿರ್ವಹಣೆ:

-ಸೋಂಕಿತ ಕಾಯಿಗಳನ್ನು ಒಟ್ಟುಗೂಡಿಸಿ ನಾಶಮಾಡಬೇಕು.

- ಟ್ರೈಕೋಗ್ರಾಮ ಚಿಲೋನಿಸ್ ನ ಮೊಟ್ಟೆಗಳನ್ನು ೧ ಲಕ್ಷ ಪ್ರತಿ ಹೆಕ್ಟೇರಿನಂತೆ ಬೆಳಗ್ಗೆ ಸಿಂಪಡಿಸಬೇಕು.

- ಮೋಹಕ ಬಲೆಯನ್ನು  ಪ್ರತಿ ಹೆಕ್ಟೇರಿಗೆ ೧೨ ರಂತೆ ಇಡಬೇಕು.

-ಎಮಾಮೆಕ್ಟಿನ್ ಬೆಂಜೊಯೇಟ್ ೫ ಎಸ್.ಜಿ. (೦.೩ ಮಿ.ಲೀ./ ಪ್ರತಿ ಲೀಟರ್ ನೀರಿನಲ್ಲಿ ಬೆರೆಸಿ) ಸಿಂಪಡಿಸಬೇಕು. 

-ಇಂಡೋಗ್ಸಾಕಾರ್ಬ ೧೪.೫ ಎಸ್. ಸಿ. (೦.೪ ಮಿ.ಲೀ/ಲೀ) ಸಿಂಪಡಿಸಬೇಕು.

(೩) ಹಳದಿ ಎಲೆ ನಂಜು ರೋಗ: (ಚಿತ್ರ ೨)

ರೋಗ ಲಕ್ಷಣ:

-ಎಲೆಗಳ ನಾಳಗಳು ದಪ್ಪವಾಗುತ್ತವೆ ಮತ್ತು ಹಳದಿಯುತವಾಗಿರುತ್ತವೆ.

-ಬಿಳಿ ನೊಣಗಳಿಂದ ಈ ರೋಗ ಹರಡುತ್ತದೆ.

-ಹೆಚ್ಚು ತಾಪಮಾನ ಮತ್ತು ಹೆಚ್ಚಿನ ಬಿಳಿನೊಣಗಳ ಸಂಖ್ಯೆಯನ್ನು ಹೆಚ್ಚಿಸುತ್ತದೆ.

ನಿರ್ವಹಣೆ: 

- ಪ್ರಾರಂಭಿಕ ಹಂತದಲ್ಲಿ ರೋಗ ಕಂಡುಬAದಲ್ಲಿ  ಸೋಂಕಿತ ಗಿಡಗಳನ್ನು ಕಿತ್ತು ನಾಶಮಾಡುವುದು.

- ಬಿಳಿ ನೊಣಗಳ ನಿಯಂತ್ರಣಕ್ಕೆ ೪% ಬೇವಿನ ಕಷಾಯ + ಮೆಟಾಸಿಸ್ಟಾಕ್ (೨gm/ಲೀ. ನ ಹಾಗೆ) ಜೊತೆಗೆ ಬೆರೆಸಿ ೧೦ ದಿನಗಳ ಅಂತರದಲ್ಲಿ ಸಿಂಪಡಿಸಬೇಕು.

(ಮುಗಿಯಿತು)

ವಿಷಯ ಸಂಗ್ರಹಣೆ ಮತ್ತು ಮಾಹಿತಿ : ಡಾ.ಪಿಚ್ಚಯ್ ಮುತ್ತು, ಬೆಂಗಳೂರು