ಬೆಂಬಿಡದ ಭಾವಗಳ ವಿನಿಮಯಕೆ ಸಾಕ್ಷಿಯಾಗೊಮ್ಮೆ

Submitted by Chikku123 on Thu, 11/10/2011 - 11:25
ಬರಹ
ಮನದ ಬಾಗಿಲಿಗೆ ತೋರಣವಾದವಳೇ ತುಂತುರು ಮಳೆಗೆ ಕೊಡೆಯಾದವಳೇ ನಿಲ್ಲದ ನೆನಪುಗಳಿಗೆ ಚಿಲುಮೆಯಾದವಳೇ ಸುಂದರ ಪಯಣಕೆ ಸಾಕ್ಷಿಯಾದವಳೇ ಸುಮಧುರ ಸಂಜೆಗಳಿಗೆ ಸವಿನೆನಪಾದವಳೇ ಕಾಡುವ ಕವನಕೆ ಪದವಾದವಳೇ ಕನಸಿನ ಕಾಗದಕೆ ಲೇಖನಿಯಾದವಳೇ ಕಲ್ಪನೆಯ ರಥಕೆ ಸಾರಥಿಯಾದವಳೇ ಮೌನ ಸಂಭಾಷಣೆಗೆ ಕಣ್ಣಾದವಳೇ ಒಲವಿನ ಓಲೆಯ ಕೊಡಲು ಕಾತರಿಸುತ್ತಿರುವೆನು ಬೆಂಬಿಡದ ಭಾವಗಳ ವಿನಿಮಯಕೆ ಸಾಕ್ಷಿಯಾಗೊಮ್ಮೆ

Comments