ಬೆಣ್ಣೆ ಹಣ್ಣಿನ ಐಸ್ಕ್ರೀಂ
ಬೇಕಿರುವ ಸಾಮಗ್ರಿ
ಹಾಲು ೧ ಲೀ., ಸಕ್ಕರೆ ೧ ಕಪ್, ಬೆಣ್ಣೆ ಹಣ್ಣು (ಬಟರ್ ಫ್ರುಟ್ ಅಥವಾ ಅವಕಾಡೋ) ೧, ಏಲಕ್ಕಿ ಪುಡಿ ೧/೪ ಚಮಚ.
ತಯಾರಿಸುವ ವಿಧಾನ
ಹಾಲನ್ನು ಚೆನ್ನಾಗಿ ಕುದಿಸಿ ಆರಿಸಿ. ಬೆಣ್ಣೆ ಹಣ್ಣಿನ ತಿರುಳನ್ನು ತೆಗೆದು ಮಿಕ್ಸಿಯಲ್ಲಿ ತಿರುವಿ ಕುದಿಸಿಟ್ಟ ಹಾಲಿಗೆ ಸೇರಿಸಿ ಸಕ್ಕರೆ, ಏಲಕ್ಕಿ ಪುಡಿ ಎಲ್ಲ ಹಾಕಿ ಚೆನ್ನಾಗಿ ಕದಡಿ. ಫ್ರಿಜ್ನ ಫ್ರೀಜರ್ನಲ್ಲಿರಿಸಿ ಗಟ್ಟಿ ಆಗುವಾಗ ತಿನ್ನಿ. ಬಹಳ ರುಚಿಯಾಗಿರುವ ಈ ಐಸ್ಕ್ರೀಮನ್ನು ಮಕ್ಕಳಿಂದ ಹಿಡಿದು ದೊಡ್ಡವರವರೆಗೆ ಚಪ್ಪರಿಸಿಕೊಂಡು ತಿನ್ನುತ್ತಾರೆ.
- ಸಹನಾ ಕಾಂತಬೈಲು, ಮಡಿಕೇರಿ