ಬೆರಗಿನ ಜೋಡಿಗೆ...
ಕವನ
ನೀಲಿಯ ಸಾಗರದಲೆಗಳ ಭೇದಿಸಿ
ಸೋಲದೆ ಸಾಗಿದೆ ನೌಕೆ
ಬಾಲೆಯ ಜೊತೆಯಲಿ ಕುಳಿತಿಹ ಪಯಣಿಗ
ಸಾಲದು ಎನಿಸಿದ ಬಯಕೆ
ತರುಣಿಗೆ ತಂದಿದೆ ತುಂಬಿದ ಸಂತಸ
ಕಿರುನಗೆ ಮೊಗದಲಿ ಹೊಮ್ಮಿ
ಕರದಲಿ ಬಂಧಿಸಿ ಕುಳಿತಿಹ ಪ್ರಿಯತಮ
ಸರಸದ ಬಯಕೆಯು ಚಿಮ್ಮಿ
ಸಾಗರದಾಚೆಯ ದಡವನು ಸೇರಲು
ವೇಗದಿ ಸಾಗುವುದಾಸೆ
ಹೇಗದ ಪೇಳಲಿ ನಾವಿಕನರಿಯನು
ಬೇಗುದಿಯರುಹುವ ಭಾಷೆ
ಬಿರಿದಿಹ ಹೂವಿನ ಕರೆಯನು ಆಲಿಸಿ
ಬರುವುದು ಸನಿಹಕೆ ಭೃಂಗ
ಬೆರೆತಿಹ ಮನಗಳ ಬೆರಗಿನ ಜೋಡಿಗೆ
ದೊರೆಯಿತೆ ಸರಸಕೆ ರಂಗ||
-ಪೆರ್ಮುಖ ಸುಬ್ರಹ್ಮಣ್ಯ ಭಟ್
ಚಿತ್ರ್