ಬೆಲೆ ಕಟ್ಟಲಾಗದ ವಸ್ತು (ಕಥೆ)
ಮಿಂಚಂಚೆಯಲ್ಲಿ ಬಂದದ್ದು. ಕನ್ನಡಕ್ಕೆ ಅನುವಾದಿಸಿದ್ದೇನೆ.
ಆ ಅಪ್ಪ ಹಾಗೂ ಮಗನಿಗೆ ಪುರಾತನ ಕಲಾಕೃತಿಗಳನ್ನು ಸಂಗ್ರಹಿಸುವ ಹವ್ಯಾಸವಿರುತ್ತದೆ. ಅವರ ಬಳಿ ಬಹಳ ಅತ್ಯಮೂಲ್ಯ ವಸ್ತುಗಳು, ಕಲಾಕೃತಿಗಳು, ಚಿತ್ರಗಳು ಇದ್ದವು. ಬಿಡುವಿನ ಸಮಯದಲ್ಲಿ ಇಬ್ಬರೂ ಕುಳಿತು ಆ ಚಿತ್ರಗಳ ಅಂದವನ್ನು ಆಸ್ವಾದಿಸುತ್ತಿದ್ದರು. ಅಪ್ಪ ನಿವೃತ್ತರಾಗಿದ್ದರೆ, ಮಗ ಸೇನೆಯಲ್ಲಿ ಕೆಲಸ ನಿರ್ವಹಿಸುತ್ತಿದ್ದ.
ಒಮ್ಮೆ ಯುದ್ಧನಿಮಿತ್ತ ಮಗನಿಗೆ ಕರೆಬಂದ ಕಾರಣ ಮಗ ಗಡಿಗೆ ಹೊರಟ. ಆತ ಒಬ್ಬ ಉತ್ತಮ ಹೋರಾಟಗಾರ, ಯುದ್ಧದಲ್ಲಿ ಹೋರಾಡುವಾಗ ಇನ್ನೊಬ್ಬ ಯೋಧನನ್ನು ರಕ್ಷಿಸಲು ಹೋಗಿ ತನ್ನ ಪ್ರಾಣವನ್ನು ಕಳೆದುಕೊಂಡುಬಿಟ್ಟ. ಮಗನ ಸಾವಿನ ಸುದ್ದಿ ಅಪ್ಪನಿಗೆ ತಿಳಿದು ಬಹಳ ಬೇಸರಗೊಂಡನು. ಒಂದು ತಿಂಗಳ ನಂತರ ಒಂದು ದಿನ ಮನೆಯ ಬಾಗಿಲನ್ನು ಯಾರೋ ತಟ್ಟಿದ ಸದ್ದಾಗಿ ಎದ್ದು ಹೋಗಿ ತೆಗೆದಾಗ ಎದುರುಗಡೆ ಒಬ್ಬ ಯುವಕ ಕೈಯಲ್ಲಿ ಒಂದು ದೊಡ್ಡದಾದ ಪಾರ್ಸಲ್ ಹಿಡಿದು ನಿಂತಿದ್ದ.
ಅವನು ಸ್ವಾಮಿ ನಿಮಗೆ ನನ್ನ ಬಗ್ಗೆ ಗೊತ್ತಿಲ್ಲ. ನಾನು ನಿಮ್ಮ ಮಗನ ಕೈಯಲ್ಲಿ ಪ್ರಾಣ ಉಳಿಸಿಕೊಂಡ ಯೋಧ, ನಿಮ್ಮ ಮಗ ಒಬ್ಬ ಅತ್ಯುತ್ತಮ ಹೋರಾಟಗಾರ, ಯುದ್ಧದಲ್ಲಿ ಎಷ್ಟೋ ಜನರ ಪ್ರಾಣ ರಕ್ಷಣೆ ಮಾಡಿದ್ದ, ಹಾಗೆ ನನ್ನನ್ನು ಉಳಿಸಲು ಪ್ರಯತ್ನಿಸುವಾಗ ಆತನ ಎದೆಗೆ ಗುಂಡು ಬಡಿದು ಆತ ಮೃತಪಟ್ಟ. ಅವನು ಯಾವಾಗಲೂ ನಿಮ್ಮ ಬಗ್ಗೆ ನಿಮ್ಮ ಹವ್ಯಾಸದ ಬಗ್ಗೆ ಮಾತಾಡುತ್ತಿದ್ದ. ಆತ ತನ್ನ ಕೈಯಲ್ಲಿದ್ದ ಪಾರ್ಸಲ್ ಅನ್ನು ಅವರ ಕೈಲಿ ಕೊಟ್ಟು ನಿಮ್ಮ ಮಗನ ಸಹಾಯಕ್ಕೆ ಇದೊಂದು ಅಲ್ಪಕಾಣಿಕೆ, ನಾನೇನು ದೊಡ್ಡ ಚಿತ್ರಕಾರನಲ್ಲ. ಆದರೂ ನಿಮ್ಮ ಮಗನ ಭಾವಚಿತ್ರವನ್ನು ತಕ್ಕಮಟ್ಟಿಗೆ ಬಿಡಿಸಿದ್ದೇನೆ, ದಯವಿಟ್ಟು ಅರ್ಪಿಸಿಕೊಳ್ಳಬೇಕು ಎಂದ.
ಪಾರ್ಸಲ್ ತೆಗೆದು ಅದರಲ್ಲಿದ್ದ ತಮ್ಮ ಮಗನ ಚಿತ್ರ ನೋಡಿ ಅವರಿಗೆ ಮನಸು ತುಂಬಿ ಬಂದು ಕಣ್ಣುಗಳು ತೇವಗೊಂಡವು. ಬಂದಿದ್ದ ಯೋಧನಿಗೆ ಧನ್ಯವಾದಗಳನ್ನು ಸಲ್ಲಿಸಿ ಆ ಚಿತ್ರವನ್ನು ಎಲ್ಲರಿಗೂ ಕಾಣುವಂತೆ ನಡುಮನೆಯಲ್ಲಿ ತೂಗು ಹಾಕಿದರು. ಪ್ರತಿಬಾರಿ ಅವನ ಸಂಗ್ರಹಗಳನ್ನು ನೋಡಲು ಬರುತ್ತಿದ್ದ ಜನರಿಗೆ ಮೊದಲು ತಮ್ಮ ಮಗನ ಚಿತ್ರವನ್ನು ತೋರಿಸಿ ನಂತರ ಉಳಿದ ಸಂಗ್ರಹಗಳನ್ನು ತೋರಿಸುತ್ತಿದ್ದರು. ಕೆಲವು ತಿಂಗಳುಗಳ ನಂತರ ಆತನು ಮೃತಪಟ್ಟನು. ನಂತರ ಉಯಿಲಿನ ಪ್ರಕಾರ ಆತನ ಸಂಗ್ರಹಗಳನ್ನು ಹರಾಜು ಕೂಗಬೇಕೆಂದು ಬರೆದಿತ್ತು. ಅದೇ ರೀತಿ ಹರಾಜು ಪ್ರಕ್ರಿಯೆ ಶುರುವಾಯಿತು.
ಹರಾಜು ಕೂಗುವ ವ್ಯಕ್ತಿ ಮೊದಲಿಗೆ, ಆತನ ಮಗನ ಭಾವಚಿತ್ರವನ್ನು ಹರಾಜು ಕೂಗಲು ಶುರುಮಾಡಿದ. ಯಾರೊಬ್ಬರು ಕೂಗಲಿಲ್ಲ. ನಮಗೆ ಬೇಕಿರುವುದು ಈ ಚಿತ್ರಪಟವಲ್ಲ, ನಮಗೆ ಬೇಕಿರುವುದು ಅತ್ಯಮೂಲ್ಯ ಸಂಗ್ರಹಗಳು, ಈ ಚಿತ್ರವನ್ನು ತೆಗೆದುಕೊಂಡು ನಾವೇನು ಮಾಡುವುದು ಎಂದು ಕುಹಕವಾಡಿದರು. ಹರಾಜು ಕೂಗುವ ವ್ಯಕ್ತಿ ಮತ್ತೊಮ್ಮೆ ಅದೇ ಚಿತ್ರವನ್ನು ತೋರಿಸಿ ಯಾರಾದರೂ ೧೦೦೦ ರೂ, ೨೦೦೦ ರೂ ಗಳಿಗೆ ಹರಾಜು ಕೂಗುವುದಿಲ್ಲವೇ ಎಂದಾಗ ಮತ್ತೊಮ್ಮೆ ಜನರು ನಾವು ಬಂದಿರುವುದು ದೊಡ್ಡ ದೊಡ್ಡ ಚಿತ್ರಕಾರರು ಬಿಡಿಸಿರುವ ಚಿತ್ರಗಳನ್ನು, ಇದನ್ನು ಬಿಟ್ಟು ಅವುಗಳನ್ನು ತೋರಿಸಿ ಎಂದರು.
ಆದರೆ ಆ ವ್ಯಕ್ತಿ ಮತ್ತೊಮ್ಮೆ ಕೂಗಲು ಶುರುಮಾಡಿದಾಗ ಹಿಂದಿನಿಂದ ಒಬ್ಬ ವ್ಯಕ್ತಿ ನೂರು ರೂ ಎಂದು ಕೂಗಿದ. ಆತ ಹಿಂದೊಮ್ಮೆ ಅವರ ಮನೆಯಲ್ಲಿ ಕೆಲಸದಾಳಾಗಿದ್ದ. ನಾನು ಬಡವ ಸ್ವಾಮಿ ನನ್ನ ಕೈಯಲ್ಲಿ ಇಷ್ಟೇ ಆಗುವುದು, ಅವರ ಮನೆ ಅನ್ನ ತಿಂದಿದ್ದೇನೆ ಅದಕ್ಕಾಗಿ ಆ ಚಿತ್ರವನ್ನು ಕೂಗಿದೆ ಎಂದ. ಹರಾಜು ಕೂಗುವ ವ್ಯಕ್ತಿ ಮತ್ತೊಮ್ಮೆ ನೋಡಿ ನೂರು ರೂಗೆ ಈತ ಕೂಗಿದ್ದಾನೆ ಯಾರಾದರೂ ಮುಂದೆ ಕೂಗುತ್ತೀರ ಎಂದಾಗ ಎಲ್ಲ ಒಕ್ಕೊರಲಿನಿಂದ ಇಲ್ಲ ಅದನ್ನು ಅವನಿಗೆ ಕೊಟ್ಟುಬಿಡಿ ನಮಗೆ ಬೇಕಾಗಿರುವುದನ್ನು ಕೂಗುವಿರೋ ಇಲ್ಲವೋ ಎಂದು ಆಕ್ರೋಶದಿಂದ ಹೇಳಿದರು.
ಆಗ ಹರಾಜು ಮಾಡುವ ವ್ಯಕ್ತಿ ನೂರು ರೂಗೆ ಆ ಚಿತ್ರವನ್ನು ಅವನಿಗೆ ಕೊಟ್ಟು ಇಲ್ಲಿಗೆ ಹರಾಜು ಪ್ರಕ್ರಿಯೆ ಮುಗಿಯಿತು ಎಂದಾಗ ಅಲ್ಲಿ ನೆರೆದಿದ್ದ ಜನ ಆಶ್ಚರ್ಯಚಕಿತರಾಗಿ ಇನ್ನೂ ಅಮೂಲ್ಯ ವಸ್ತುಗಳ ಹರಾಜು ಶುರುವೇ ಆಗಿಲ್ಲ ಆಗಲೇ ಮುಗಿಯಿತು ಅನ್ನುತ್ತಿದ್ದೀರ ಏನು ಎಂದು ಪ್ರಶ್ನಿಸಿದಾಗ ಆತ ಶಾಂತಚಿತ್ತನಾಗಿ ನೋಡಿ ಈ ವಸ್ತುಗಳ ಮಾಲೀಕರ ಉಯಿಲಿನ ಪ್ರಕಾರ ಯಾರು ಅವರ ಮಗನ ಚಿತ್ರವನ್ನು ಕೊಳ್ಳುವರೋ ಅವರಿಗೆ ಉಳಿದೆಲ್ಲಾ ವಸ್ತುಗಳನ್ನು ಉಚಿತವಾಗಿ ಕೊಡಬೇಕು ಎಂದು ಬರೆದಿದ್ದಾರೆ ಎಂದಾಗ ಅಲ್ಲಿ ನೆರೆದಿದ್ದ ಜನ ನಿರುತ್ತರರಾದರು.
Comments
ಉ: ಬೆಲೆ ಕಟ್ಟಲಾಗದ ವಸ್ತು (ಕಥೆ)
In reply to ಉ: ಬೆಲೆ ಕಟ್ಟಲಾಗದ ವಸ್ತು (ಕಥೆ) by partha1059
ಉ: ಬೆಲೆ ಕಟ್ಟಲಾಗದ ವಸ್ತು (ಕಥೆ)
ಉ: ಬೆಲೆ ಕಟ್ಟಲಾಗದ ವಸ್ತು (ಕಥೆ)
In reply to ಉ: ಬೆಲೆ ಕಟ್ಟಲಾಗದ ವಸ್ತು (ಕಥೆ) by gopaljsr
ಉ: ಬೆಲೆ ಕಟ್ಟಲಾಗದ ವಸ್ತು (ಕಥೆ)
ಉ: ಬೆಲೆ ಕಟ್ಟಲಾಗದ ವಸ್ತು (ಕಥೆ)
In reply to ಉ: ಬೆಲೆ ಕಟ್ಟಲಾಗದ ವಸ್ತು (ಕಥೆ) by malathi shimoga
ಉ: ಬೆಲೆ ಕಟ್ಟಲಾಗದ ವಸ್ತು (ಕಥೆ)
In reply to ಉ: ಬೆಲೆ ಕಟ್ಟಲಾಗದ ವಸ್ತು (ಕಥೆ) by Jayanth Ramachar
ಉ: ಬೆಲೆ ಕಟ್ಟಲಾಗದ ವಸ್ತು (ಕಥೆ)
In reply to ಉ: ಬೆಲೆ ಕಟ್ಟಲಾಗದ ವಸ್ತು (ಕಥೆ) by sharadamma
ಉ: ಬೆಲೆ ಕಟ್ಟಲಾಗದ ವಸ್ತು (ಕಥೆ)