ಬೆಳಕಿನ ಕತ್ತಲೆ

ಬೆಳಕಿನ ಕತ್ತಲೆ

ಪುಸ್ತಕದ ಲೇಖಕ/ಕವಿಯ ಹೆಸರು
ಮೇವುಂಡಿ ಮಲ್ಲಾರಿ
ಪ್ರಕಾಶಕರು
ಕನ್ನಡ ಮತ್ತು ಸಂಸ್ಕೃತಿ ನಿರ್ದೇಶನಾಲಯ, ನೃಪತುಂಗ ರಸ್ತೆ, ಬೆಂಗಳೂರು
ಪುಸ್ತಕದ ಬೆಲೆ
ರೂ. ೬.೫೦, ಮುದ್ರಣ: ೧೯೯೦

ಕನ್ನಡದಲ್ಲಿ ಲೇಖಕ-ಪ್ರಕಾಶಕ-ಓದುಗರ ನಡುವೆ ಗಾಢ ಸಂಬಂಧವನ್ನು ಏರ್ಪಡಿಸುತ್ತಾ, ಶ್ರೀಸಾಮಾನ್ಯರಲ್ಲಿ ಉತ್ತಮ ವಾಚನಾಭಿರುಚಿಯನ್ನು ಹಾಗೂ ಪುಸ್ತಕ ಪ್ರೀತಿಯನ್ನು ಮೂಡಿಸುತ್ತಾ ರಾಜ್ಯಾದ್ಯಂತ ಓದುಗರಿಗೆ ಒಳ್ಳೆಯ ಪುಸ್ತಕಗಳು ಸುಲಭ ಬೆಲೆಯಲ್ಲಿ ದೊರೆಯುವಂಥ ಸ್ಥಾಯೀ ವ್ಯವಸ್ಥೆಯೊಂದನ್ನು ರೂಪಿಸಿ, ಕನ್ನಡ ಪುಸ್ತಕೋದ್ಯಮವನ್ನು ಜನಪರವಾಗಿ ಮತ್ತು ಧೃಢವಾಗಿ ಬೆಳೆಸುವ ಉದ್ದೇಶದಿಂದ ‘ಕನ್ನಡ ಪುಸ್ತಕ ಪ್ರಾಧಿಕಾರ' ಎಂಬ ದೀರ್ಘಕಾಲಿಕ ಯೋಜನೆಯೊಂದನ್ನು ಸರ್ಕಾರವು ರೂಪಿಸಲು ಯತ್ನಿಸುತ್ತಿದೆ. ಈ ನಿಟ್ಟಿನಲ್ಲಿ ೧೯೮೯-೯೦ರ ಸಾಲಿನಲ್ಲಿ ಕನ್ನಡ ಮತ್ತು ಸಂಸ್ಕೃತಿ ನಿರ್ದೇಶನಾಲಯವು ಕೈಗೊಂಡಿರುವ 'ಜನಪ್ರಿಯ ಪುಸ್ತಕ ಮಾಲೆ' ಒಂದು ಮೊದಲ ಹೆಜ್ಜೆ. ಇಂದಿನ ಈ ಪುಸ್ತಕ ಪ್ರಕಟಣೆ ಯೋಜನೆಯು ಮುಂದೆ ‘ಪುಸ್ತಕ ಪ್ರಾಧಿಕಾರ'ವಾಗಿ ಬೆಳೆದು, ಒಂದು ಸ್ವಾಯತ್ತ ಸಂಸ್ಥೆಯಾಗಿ ರೂಪುಗೊಳ್ಳಲೆಂದು ಸದ್ಯದ ಆಶಯ. 

ಈ ಆಶಯದಂತೆ ‘ಜನಪ್ರಿಯ ಪುಸ್ತಕ ಮಾಲೆ' ಸರಣಿಯಲ್ಲಿ ಪ್ರಕಟವಾದ ಪುಸ್ತಕ ಮೇವುಂಡಿ ಮಲ್ಲಾರಿ ಅವರ ‘ಬೆಳಕಿನ ಕತ್ತಲೆ'. ಇದು ಒಂದು ಕಥಾ ಸಂಕಲನ. ಪುಸ್ತಕದಲ್ಲಿ ಪರಿವಿಡಿ ಇಲ್ಲ. ಈ ಕಾರಣದಿಂದ ಯಾವ ಕಥೆ, ಎಷ್ಟನೇ ಪುಟದಲ್ಲಿದೆ ಎಂಬ ವಿಚಾರ ತಿಳಿದು ಬರುತ್ತಿಲ್ಲ. ಈ ಪುಸ್ತಕದಲ್ಲಿ ೧೦ ಸಣ್ಣ ಕಥೆಗಳಿವೆ. ಬೆಳಕಿನ ಕತ್ತಲೆ, ರತ್ನದ ನಡುಗಡ್ಡೆ, ಮಾತಾಡುವ ದೇವರು, ಲಕ್ಷ್ಮಿ ಹೋದಳೆಲ್ಲಿ?, ಒಡ್ಡರ ಹುಡುಗಿ, ವ..ವಿ, ದೇವರ ಸನ್ನಿಧಾನಕ್ಕೆ, ಸುರಸುಂದರಿ, ನಾಡಿನ ಹೊರಗೆ, ಲೈಮ್ ವಾಟರ್.  ಈ ಹಳೆಯ ಪುಸ್ತಕ ಮಾರುಕಟ್ಟೆಯಲ್ಲಿ ಅಲಭ್ಯವಾಗಿದ್ದರೂ ಆಸಕ್ತರಲ್ಲಿ ಅಥವಾ ಗ್ರಂಥಾಲಯದಲ್ಲಿ ಸಿಕ್ಕಿದರೆ ಅವಶ್ಯ ಓದಿ.