ಬೆಳಕಿನ ಕಿರಣ ನಮ್ಮ ಅಣ್ಣ .

ಬೆಳಕಿನ ಕಿರಣ ನಮ್ಮ ಅಣ್ಣ .

ಸಹೋದರ ಸಹೋದರಿಯರೇ, ನಾನು ಹೇಳ ಹೊರಟಿರುವುದು ಯಾರ ಕುರಿತು ಎಂದು ನಿಮಗೆಲ್ಲಾ ಗೊತ್ತಾಗಿರಲಿಕ್ಕೆ ಸಾಕು. ನಿಮಗೆಲ್ಲಾ ತಿಳಿದಿರುವಂತೆ ಇತ್ತೀಚಿನ ವಿದ್ಯಮಾನ 'ಜನ ಲೋಕಪಾಲ್  ಮಸೂದೆಯ'  ಸಾರಥಿ. ಅದೇ, ನಮ್ಮ ಇಡೀ ವ್ಯವಸ್ಠೆಯನ್ನೇ ತನ್ನ ಕೈಗೊಂಬೆ ಮಾಡಿಕೊಂಡು, ಪೆಡಂಬೂತವಾಗಿ ಬೆಳೆದು, ಇಂದಿನ ದಿನ ನೀವು ನಾವುಗಳು ನ್ಯಾಯ ಹಾಗು ನೀಯತ್ತಿನಿಂದ ಬಾಳಬೇಕೆಂದು ಶಪಥ ಮಾಡಿ ತಿಪ್ಪರಲಾಗ ಹಾಕಿದರೂ ಕೂಡ ಸಾದ್ಯವಾಗದೆ, ಉಸಿರುಕಟ್ಟಿ ವಾಕರಿಸಿ ವಾಂತಿಮಾಡಿಕೊಂಡು ಸಾಕಪ್ಪಾ ಈ ವ್ಯವಸ್ಥೆಯ  ಸಹವಾಸ ಎಂದೆನಿಸಿ ಹೇಸಿಗೆ ಪಡುವಷ್ಟರ ಮಟ್ಟಿಗೆ ಎಲ್ಲಾ ಕಡೆಯಿಂದಲೂ ತನ್ನ ಕೆಟ್ಟ ವಾಸನೆಯನ್ನು ಬೀರಿ,  ಬಹುಶಃ ಗಾಳಿ ಬೆಳಕು ಕತ್ತಲೆ ಇರುವೆಡೆಯಲೆಲ್ಲಾ  ತನ್ನ ಇರುವಿಕೆಯನ್ನು ಸಾದರಪಡಿಸುತ್ತಿರುವ ಬ್ರಷ್ಟಾಚಾರವೆಂಬ ಸೈತಾನನನ್ನು ಹೊರಗಟ್ಟಲು ಬಲಿಷ್ಟ ಹೊಸ ಮಸೂದೆಯೊಂದನ್ನು ಜಾರಿಗೊಳಿಸಿ ಎಂದು ನಮ್ಮ ಸರ್ಕಾರವನ್ನು ಕೇಳಿಕೊೞುತ್ತಿರುವ ಕಿಷನ್ ಬಾಬುರಾವ್ ಹಜಾರೆ ಅವರನ್ನು ನಿಜ ಅರ್ಥದಲ್ಲಿ ನಾನು ಅಣ್ಣ ಎನ್ನಲು   ಬಯಸುತ್ತೇನೆ.

ನಿಜಜೀವನದಲ್ಲಿ ಎಲ್ಲರಿಗೂ ತಮ್ಮ ಕುಟುಂಬದಲ್ಲಿ ಅಣ್ಣ, ಅಣ್ಣಂದಿರು, ತಮ್ಮ ,ತಮ್ಮಂದಿರು ಇರಬಹುದು , ಇಲ್ಲಾ, ಇಲ್ಲದಿರಬಹುದು ದೊಡ್ಡವರಾದ ಮೇಲೆ ಬೇರೆಯಾಗಿರಬಹುದು, ಆದರೆ ಸಾಮಜಿಕ ವ್ಯವಸ್ಠೆ ಯಡಿಯಲ್ಲಿ ಬದುಕುತ್ತಿರುವ ನಮಗೆಲ್ಲಾ  ಇವರೊಬ್ಬ ಸಾಮಾಜಿಕ ಅಣ್ಣನಾಗಲಿ. ಸ್ವಲ್ಪ ಯೊಚಿಸಿ, ಸಮಾಜವನ್ನು ಗಬ್ಬೆದ್ದು ಹೊಗುವಂತೆ ಮಾಡಿರುವ ಕುಲಗೆಟ್ಟ ರಾಜಕಾರಣಿಗಳ ಚೇಲಾಗಳು ಎಂತೆಂತಹ ನೀಚರನ್ನು ಅಣ್ಣಾ,  ಅಣ್ಣವ್ರೆ ಎಂದು ಸಂಭೋದಿಸುವುದನ್ನು ನೀವು ಒಮ್ಮೆಯಾದಯೂ ಕೇಳಿರಲಿಕ್ಕೆ ಸಾಕು. ಈಗಿರುವಾಗ ಒಬ್ಬ ನಿಸ್ವಾರ್ಥ ಸಮಾಜ ಸೇವಕರೊಬ್ಬರನ್ನು ನಮ್ಮಿಂದ ಎಂದೂ ಪಾಲುಪಡೆಯಲು ಬರದ  ಹಜಾರೆ ಅಣ್ಣನನ್ನು  ಅಣ್ಣ ಎಂದು ಸ್ವೀಕರಿಸುವುದು ಒಂದು ಘನತೆಯೆ ಹೊರತು ಅನ್ಯತಾ ಅಲ್ಲ.

ವ್ಯವಷ್ಥೆಯನ್ನು ವ್ಯವಷ್ಥೆಯಿಂದ ಹಾಗು ಒಗ್ಗಟ್ಟಿನಿಂದಲೇ ಸರಿಪಡಿಸಲು ಸಾಧ್ಯವೆ ಹೊರತು ಒಂಟಿಯಾಗಿ ಸಾದ್ಯವಿಲ್ಲ. 

ಇನ್ನೂ ಯೋಚಿಸಿ ನೋಡಿ, ನಮ್ಮ ಸಾಮಾಜಿಕ ವ್ಯವಷ್ಥೆಯಲ್ಲಿರುವ ಕೊಳಕು ಕುಟುಂಬದಲ್ಲಿಯೂ ತೂರಿದರೆ ಹಜಾರೆ ಅಣ್ಣನಲ್ಲ ನಿಮ್ಮ ಸ್ವಂತ ಅಣ್ಣನೂ ನಿಮ್ಮ ಸಹಾಯಕ್ಕೆ ನಿಲ್ಲಲಾರ.

ಅದಕ್ಕ, ಕತ್ತಲೆಯ ತೊಡೆಯಲು ಬೆಳಕು ಬೇಕೇ ಬೇಕು.