ಬೆಳಕು...
ಕವನ
ಗೆಳತಿ, ಆ ನಿನ್ನ ಮೊಗದಲ್ಲಿ
ನಕ್ಷತ್ರದ ಹೊಳಪಿತ್ತು
ಮಿಂಚಿ ಮರೆಯಾದ ನಗೆಯಲ್ಲಿ
ಚಂದಿರನ ಮನಸಿತ್ತು
ನಾ ಕದ್ದು ಎದೆಯ ಗೂಡಲ್ಲಿ
ಬಚ್ಚಿಡುವೆನೆಂಬ ಕನಸಿತ್ತು
ರಾತ್ರಿ ಕಳೆದು ರಾತ್ರಿ...
ಮತ್ತೆ ಮತ್ತೆ ಕಚಗುಳಿಯಿಟ್ಟಾಗ
ನಿನ್ನೊಲವೆ ಧರೆಗಿಳಿದಿತ್ತು
ಹಂಬಲಿಕೆ ಕ್ಷಣವಲ್ಲ
ಶತಮಾನಕು ಕಟ್ಟಿಡುವ ಬಯಕೆ
ನಾ ನಿನ್ನ ಸೇರುತಲಿ
ಸ್ವರ್ಗ ಧರೆಗಿಳಿದೆ ಬಿಡುವುದೆಂಬ
ಕನವರಿಕೆ...
ನಡುವೆ ಸೂರ್ಯ ಬಂದಾಗ ಗ್ರಹಣವಂತೆ
ನಮಗೆಲ್ಲಿತ್ತು ಇಹದ ಗ್ರಹಣ
ಕಂಕಣದ ಭಾಗ್ಯ ನಿನಗಾದದ್ದು
ನನಗೆ ತಿಳಿಯದೆ ಹೋದ ದೌರ್ಭಾಗ್ಯ!
ಗೆಳತಿ, ಎಲ್ಲೆ ಇದ್ದರು
ಕತ್ತಲಲ್ಲಿ ಹೊಳೆವ ನಿನ್ನ ಹೂ ಬೆಳಕು
ಮತ್ತೆ ಮತ್ತೆ ಹೊಳಪು ಬೀರುತ್ತಿದೆ
ಮಬ್ಬುಗತ್ತಲೆ ಮಾತ್ರ
ಬಿಡದೆ ಕಾಡುತ್ತಲೇ ಇದೆ...
-ಜನಾರ್ದನ ದುರ್ಗ
ಚಿತ್ರ್
