ಬೆಳಕು...
ಕವನ
ಒಳಗಿರುವ ಹುಳುಕುಗಳ ಹುಡುಕಿ ಗುಡಿಸದೇ ಬೆಳಕು/
ತಳಹಿಡಿದ ಖುಷಿಗಳನು ಮರಳಿ ಕೊಡಿಸದೇ ಬೆಳಕು/
ನೆರವಾದವರ ನೆರಳ ಮರೆತ ಮಂದಿಯ ನೆನಪು ಯಾಕೆ/
ಉತ್ತಮರ ಬಾಳಲಿ ಇಳಿದು ಮೆರವಣಿಗೆ ನಡೆಸದೇ ಬೆಳಕು/
ಗೆಲುವುಗಳ ಕೊಲುವವರ ಕೊರಳಿಗೇತಕೆ ಜಯದ ಮಾಲೆ/
ನೊಂದ ಎದೆಯಲಿ ಗೆಲುವಿನ ರಂಗೋಲಿ ಬಿಡಿಸದೇ ಬೆಳಕು/
ಮುಳ್ಳುಗಳ ದಾರಿಯನು ಮಾಡಿದವರ ಮೇಲೇಕೆ ಸೇಡು/
ಕಲ್ಮಷದ ಕೊಳದಿಂದ ಮೇಲೆತ್ತಿ ಮುಕ್ತಿ ಕೊಡಿಸದೇ ಬೆಳಕು/
ಕಾಲಹರಣವು ಸೋಲ ಸಾಲಾಗಿದೆ ಕೃಷ್ಣನಿಗಿದೆ ಅರಿವು/
ಜ್ಞಾನದ ಕಾವಲಲಿ ಮೌಢ್ಯಕೆ ಬೇಡಿ ತೊಡಿಸದೇ ಬೆಳಕು/
- ಕಾ.ವೀ.ಕೃಷ್ಣದಾಸ್, ಮಂಗಳೂರು
ಚಿತ್ರ ಕೃಪೆ: ಇಂಟರ್ನೆಟ್ ತಾಣ
ಚಿತ್ರ್