ಬೆಳಗಲಿಲ್ಲ ದೀಪ
ಬೆಳಗಲಿಲ್ಲ ದೀಪ
ಬೆಳಿಗ್ಗೆ ಎದ್ದು ನನ್ ಅರ್ಧಾ೦ಗಿ ಕೊಟ್ಟ ಕೋತಾ ಕಾಪಿ (ಪುಡಿ ಸ್ವಲ್ಫ ಕೋತ ಆಗಿದ್ದರಿಂದ) ಕುಡಿಯುತ್ತಾ
FM RAINBOW ನಲ್ಲಿ "ಹಾಯಾಗಿ ಕುಳಿತಿರು ನೀನು ರಾಣಿಯ ಹಾಗೆ" ನಮ್ಮ ರಾಜಣ್ಣನ ಹಾಡು ಜೋರಾಗಿ ಹಾಕಿ ಕೇಳುತ್ತಿದ್ದೆ,
ಅಡುಗೆ ಮನೆಯಲ್ಲಿ ಏನೋ ಶಬ್ಡವೂ ಜೋರಾಯಿತು. ನಾನು ಒಳಗೆ ಇಣುಕಿದೆ. ಬಿದದ್ಡು ನನ್ನ ನೆಚ್ಚಿನ ಮಡದಿಯೋ ಎ೦ದು!?
"ಈ ಗಂಡಸರಿಗೆ ಹಾಡು ಮಾತ್ರ ಹಾಡೋದು ಗೊತ್ತು"
ಎಂದು ಗೊಣಗುತ್ತಾ ತರಕಾರಿ ಇಲ್ಲದ ಉಪ್ಪಿಟ್ಟಿಗೆ ಒಗ್ಗರಣೆ ಹಾಕುತ್ತಿದ್ದಳು. ಓಡಿ ಬಂದು ರೇಡಿಯೋ ಶಬ್ದ ಕಡಿಮೆ ಮಾಡಿ, ಕಾಫಿ ಜೋರಾಗಿ ಹೀರಲು ಶುರುಮಾಡಿದೆ.
ಇನ್ನೇನು ದೀಪಾವಳಿ ಹತ್ತಿರದಲ್ಲೇ ಇದೆ, ನನ್ನ ಹೆಂಡತಿಯದು ಏನಾದರೂ DEMAND ಇರಬಹುದೇನೋ! ಎಂದು. ಯೋಚಿಸುತ್ತಿದ್ದೆ..
ಈ ದೀಪಾಳಿಯೇ ಹಾಗೆ. ಎಲ್ಲರಲ್ಲೂ ಸಂತಸ, ಸಂಭ್ರಮ, ಏನೋ ಸಡಗರ, ಹೆಚ್ಚಾಗಿ ಹೆಣ್ಣು ಮಕ್ಕಳಿಗೇ!
ನಾವೆಲ್ಲಾ ಶಾಲೆಗೆ ಹೋಗುವಾಗ, ನಮಗೆ ಶನಿವಾರ ಅರ್ಧ ದಿನವಾದ್ದರಿಂದ, ಮನೆಯಲ್ಲಿ ಎಂಟಾಣಿ ಕೊಡುತಿದ್ದರು. ಅದರಲ್ಲಿ ಮೂವತ್ತು ಪೈಸೆಗೆ ಬೇಕರಿಯಲ್ಲಿ
ದಿಲ್ ಖುಶ್ ತಿಂದು ಅದರಲ್ಲಿ ಉಳಿದ ಇಪ್ಪತ್ತು ಪೈಸೆಯನ್ನು ಹಾಗೆಯೆ ಜೋಪಾನವಾಗಿ ದೀಪಾವಳಿಗೆ ಪಟಾಕಿ ತೆಗೆದುಕೂಳ್ಳಲು ಎತ್ತಿಡುತ್ತಿದ್ದೆವು.
ಇದು ಸುಮಾರು ಮೊರು ದಶಕಗಳ ಹಿಂದಿನ ಮಾತು. ಆಗೆಲ್ಲಾ ೧೫೦-೧೬೦ ರೂಪಾಯಿಗೆಲ್ಲ ತುಂಬಾ ಪಟಾಕಿ ಬರುತಿತ್ತು. ಅದನ್ನು ಅಮ್ಮನ ಅಣತಿಯಂತೆ ಮೊರು ದಿನವೂ ಹಚ್ಚಿ ತುಳಸಿ ಹಬ್ಬಕ್ಕೊ ಇಡುತ್ತಿದ್ದೆವು.
ಈಗ ಬಿಡಿ ಸಾವಿರಾರು ರೂಪಾಯಿ ಸುಡುತ್ತಾರೆ. ಅದರಂತೆ ಪಟಾಕಿ ತಯಾರಿಕೆಯಲ್ಲೊ ಹೊಸ ರೀತಿ ಬಂದಿವೆ.
ಏನೋ ಲೆಕ್ಕವಿಲ್ಲದ ಖರ್ಚು, ನಿಯಮವಿಲ್ಲದ ಸಂಭ್ರಮ.
ನಾನಿನ್ನೂ ಚಿಕ್ಕವನಿದ್ದಾಗ ಯಾವುದೇ ರೀತಿಯ ಪಟಾಕಿಯನ್ನು ಒಬ್ಬನೆ ಹೊರ ಹೋಗಿ ಹಚ್ಚುವಂತಿರಲಿಲ್ಲ. ಅದರಲ್ಲೊ ಹೊಕುಂಡವನ್ನಂತೂ ಯಾರಾದರು ದೂಡ್ಡವರನ್ನು ಕರೆದೇ ಹಚ್ಚಬೇಕು. ಅದಕ್ಕೊಂದು ಕಹಿ ಘಟನೆ ನಡೆದದ್ದೇ ಕಾರಣ .
ನಂಜುಂಡ ಶೆಟ್ಟರದ್ದು ದೂಡ್ಡ ಕುಟುಂಬ. ಜವಳಿ ವ್ಯಾಪರದಲ್ಲಿ ಪೇಟೆಯಲ್ಲಿ ಹೆಸರುವಾಸಿಯಾದ ಮಳಿಗೆ. ಹೋಲ್ ಸೇಲ್, ರೀಟೇಲ್ ಎಲ್ಲದಕ್ಕೊ.
ಎಲ್ಲಾ ಮಿಲ್ ಬಟ್ಟೆಗಳೊ ದೂರೆಯುತ್ತಿದ್ದವು.
ನಂಜುಂಡ ಶೆಟ್ಟರು ಹಾಗೂ ಲೀಲಮ್ಮ ದಂಪತಿಗಳಿಗೆ ನಾಲ್ಕು ಜನ ಮಕ್ಕಳು.
ದೂಡ್ಡ ಮಗ ಸುಬ್ಬಯ್ಯ ಶೆಟ್ಟಿ (ಅವರ ತಾತನ ನೆನಪಲ್ಲಿ), ಎರಡನೆಯವನು ಹರೀಶ, ಮೊರನೆಯವನು ಬಾಲಮುರಳಿ ಹಾಗು ಮಗಳು ಶ್ವೇತ.
ಮುಂಚಿನಿಂದಲೂ ಶ್ರೀನಿವಾಸರಾಯರು ಮನೆಗೇ ಬಂದು ಎಲ್ಲಾ ಮಕ್ಕಳಿಗೂ ಪಾಠ ಮಾಡುತ್ತಿದ್ದರು.
ದೊಡ್ದ ಮಗ ಸುಬ್ಬು, ಇಂಜಿನಿಯರಿಂಗ್ ಮುಗಿಸಿ ಉತ್ತಮ ವ್ಯಾಸಂಗಕ್ಕೆಂದು ಅಮೇರಿಕಾಗೆ ಹೋಗಿ ಅಲ್ಲಿ ಒಳ್ಳೆಯ ಉದ್ಯೋಗ ಗಿಟ್ಟಿಸಿ ಸೆಟ್ಲ್ ಅಗಿದ್ದರು. ಎರಡನೆಯವರು ಬಿ.ಕಾಂ ಮುಗಿಸಿ ತಂದೆಗೆ ವ್ಯಾಪರದಲ್ಲಿ ಸಾಹಾಯ ಮಾಡುತ್ತಾ ಕನ್ನಡ ಚಲನ ಚಿತ್ರ ವಿತರಣೆಯ ವ್ಯವಹಾರವನ್ನೂ ಮಾಡುತ್ತಿದ್ದರು.
ಮೊರನೆಯವ ಬಾಲು ಬಿ.ಎಸ್ಸಿ ಮುಗಿಸಿದ್ದ. ಶ್ವೇತ ಎಸ್ ಎಸ್ ಎಲ್ ಸಿ ಮುಗಿಸಿ ಮದುವೆಯಾಗಿ ಗಂಡನ ಮನೆಗೆ ಹೋಗಿದ್ದಳು.
ಹೀಗೆ ನಂಜುಡ ಶೆಟ್ಟರ ಸಂಸಾರ ಆನಂದ ಸಾಗರದಲ್ಲಿ ನಲಿದಾಡುತಿತ್ತು.
ಸುಬ್ಬು ವೊಕೇಶನ್ ಮೇಲೆ ಒಂದೊವರೆ ತಿಂಗಳ ಮಟ್ಟಿಗೆ ಬೆಂಗಳೊರಿಗೆ ಪತ್ನಿ ಸುನೀತ ಹಾಗು ೫ ವರ್ಷದ ಮಗಳು ದೀಪಾಳ ಜೂತೆ ಬಂದಿದ್ದರು.
ಮೊಮ್ಮಗಳು ಒಂದೊವರೆ ವರ್ಷದವಳಿದ್ದಾಗ ಅಮೇರಿಕಾಗೆ ಹೋಗಿದ್ದವಳು ಈಗ ಬಂದಿದ್ದಾಳೆ. ಶೆಟ್ಟರ ಮನೆಯಲ್ಲಿ ಎಲ್ಲಿಲ್ಲದ ಸಂಭ್ರಮ, ಸಡಗರ.
ದಿನವೊ ವಿಶೇಷ, ವಿನೂತನ.
ಈಗ ದಸರಾ ಹಬ್ಬ. ಬೂಂಬೆಗಳ ವಿನ್ಯಾಸ, ಜೋಡಣೆ ಎಲ್ಲವೂ ವಿನೂತನ.
ಅರಮನೆ ಸೆಟ್, ಒಡ್ಡೊಲಗದ ಸೆಟ್, ಆಂಬಾರಿ, ಪಟ್ಟದ ಗೊಂಬೆಗಳು, ಪಾರ್ಕ್, ಕಾರು, ಕುದುರೆ, ಡೊಳ್ಳು ಹೊಟ್ಟೆಯ ಬೊಂಬೆ, ಶ್ರೀನಿವಸ ಕಲ್ಯಾಣ, ಹೀಗೆ ನೂರಾರು ತರಹದ ಬೊಂಬೆಗಳನ್ನು ಸುಮಾರು ಹತ್ತು ಅಂತಸ್ತುಗಲ್ಲಿ ಜೋಡಿಸುತ್ತಿದ್ದರು. ಈ ಏಲ್ಲಾ ಬೊಂಬೆ ಹಬ್ಬದ ಸಡಗರದಲ್ಲೊ ಪುಟ್ಟ ಬಾಲೆ ದೀಪಾಗೆ ತುಂಬಾ ಉತ್ಸಾಹ.
ಎಲ್ಲಾದಕ್ಕೊ ಪ್ರಶ್ನೆ, ಸಮಂಜಸವಾದ ಉತ್ತರ ದೂರಕದಿದ್ದರೆ ಮುಂದೆ ಬೊಂಬೆ ಜೋಡಿಸುವ ಹಾಗೇ ಇಲ್ಲಾ!
ಅಜ್ಜಿ "tell me why this man is sitting on elephant? why so many horses and elephants are kept?"
ಲೀಲಮ್ಮನವರಿಗೆ ಮೊಮ್ಮಗಳು ಏನೆಂದಳೆಂದು ತಿಳಿಯದೆ,
"ಸುಬ್ಬು ಇಕ್ಕಡ ರಾರ, ದೀಪು ಏಮೋ ಅಡಕತ್ತುಂದಿ? ಎಂದು ಕಿರುಚಿದರು ಗಾಬರಿಯಿಂದ. ಪಾಪ ಅವರಿಗೆ ಇಂಗ್ಲೀಷ್ ಬರುತ್ತಿರಲಿಲ್ಲ.
ಸುಬ್ಬು ಬಂದು ಹೇಳಿದರು. ಈ ರೀತಿ ಬೊಂಬೆಗಳೆಲ್ಲಾ ಏನು ಅಂತ, ಆಬಾರಿ ಸೆಟ್ ಜೋಡಿಸುತ್ತಿರುವುದು ನೋಡಿ ಕೇಳ್ತಿದ್ದಾಳೆ.
ಅಯ್ಯೋ ನಾನು ಏನೋ ಅಂತ ಹೆದಿರಿದ್ದೆ. ಇದೆಲ್ಲಾ ದಸರಾ ಬೊಂಬಿಗಳು, ನವರಾತ್ರಿ ಹಬ್ಬ ಮಾಡ್ತೀವಿ ಅಂತ ಗೊತ್ತಿಲ್ಲ ಪಾಪ,
ಕೂತ್ಕೊ ದೀಪು ಪುಟ್ಟಾ, ಅಂತ ದಸರಾ ಬಗ್ಗೆ ವಿವರಣೆ ನೀಡುತ್ತಿದ್ದರು.
ದಸರಾ ಮುಗಿಯಿತು, ದೀಪಾವಳಿ ಹತ್ತಿರ ಬರುತ್ತಿದೆ.
ಅಂಗಡಿಯಲ್ಲಿ ಒಳ್ಳೆಯ ವ್ಯಾಪಾರ. ದಿನವೊ ಶೆಟ್ಟರು ಹಾಗೂ ಹರೀಶ ಬರುವುದು ತಡವಾಗುತಿತ್ತು. ಬಂದೂಡನೆ ಗುಂಡಪ್ಫ ಹೋಟೆಲ್ ನಿಂದ ತಂದಿದ್ದ ಬದಾಮಿ ಹಲ್ವ ಮೊಮ್ಮಗಳಿಗೆ ಕೊಡುತ್ತಿದ್ದರು. ಅವಳ ಜೊತೆ ಆಟ, ಸ್ವಲ್ಪ ಹರಟೆ ಹೊಡೆದು ಎಲ್ಲರ ಜೊತೆ ಕೊತು ಊಟ ಮುಗಿಸುತ್ತಿದ್ದರು.
ದೀಪಾವಳಿ ಬಂತು. ಮೊರು ದಿನವೊ ವಿಜ್ರುಂಭಣೆಯ ಆಚರಣೆ. ಮೊದಲನೆ ದಿನ ನರಕ ಚತುರ್ದಶಿ. ಎಲ್ಲರೊ ಅಭ್ಯಂಗ ಮಾಡಿ , ಹೊಸ ಬಟ್ಟೆ ತೂಟ್ಟು,
ದೇವರ ಪೊಜೆ ಮಾಡಿ, ಶುಭಾಶಯಗಳನ್ನು ಹೇಳುತ್ತಾ , ಭರ್ಜರಿ ಊಟ ಮುಗಿಸಿದರು. ರಾತ್ರಿ ಪಟಾಕಿ ಹೊಡೆದು ಸಂಭ್ರಮಿಸಿದರು.
ಮಾರನೆ ದಿನ ಶೆಟ್ಟರ ಮನೆಯಲ್ಲಿ ವಿಶೇಷ. ಅಮಾವಾಸ್ಯೆ ಲಕ್ಷ್ಮಿ ಪೊಜೆ. ಗೋಧೊಳಿ ಮುಹೊರ್ತದಲ್ಲಿ ವಿಶೇಷವಾಗಿ ಪೂಜೆ ಏರ್ಪಾಡಾಗಿರುತ್ತಿತ್ತು.
ಮನೆಯನ್ನೆಲ್ಲಾ ಅಚ್ಚುಕಟ್ಟಾಗಿ ಸಿಂಗರಿಸಿದ್ದರು. ಒಳಗೆ ಹಾಲ್ ನಲ್ಲಿ ದೊಡ್ದದಾದ ಮಂಟಪ. ಅದರಲ್ಲಿ ಮಹಾಲಕ್ಷ್ಮಿ ಕಳಶ, ಲಕ್ಷ್ಮಿ ಮುಖವಾಡ, ಅದಕ್ಕೆ ನಾನಾವಿಧವಾದ ಆಭರಣದ ಅಲಂಕಾರ, ಬಣ್ಣ ಬಣ್ಣದ ನಾನಾ ರೀತಿಯ ಹೂವಿನಿಂದ ಅಲಂಕಾರ. ಹೊರಗೆ ಬಣ್ಣದ ದೀಪಾಲಂಕಾರ ಜಗಮಗಿಸುತಿತ್ತು. ನೋಡಿದವರಿಗೆ ಸಾಕ್ಷಾತ್ "ಮಹಾಲಕ್ಷ್ಮಿ ನಿಲಯ"ದಂತೆ ಕಂಗೂಳಿಸುತಿತ್ತು.
ಶೆಟ್ಟರಿಗೆ ಗೆಳೆಯರು, ಆಪ್ತರು, ಬಂಧುಗಳು ಹೀಗೆ ನೊರಾರು ಜನರ ಸಂಪರ್ಕ. ಈ ಹಬ್ಬದಲ್ಲಿ ಇವರೆಲ್ಲಾ ವಿಶೇಷ ಆಹ್ವಾನಿತರು. ಬಂದು ಹೋಗುವವರೇ ಹೆಚ್ಚು.
ಎಲ್ಲರಿಗೊ ತಾಂಬೂಲ , ಸಿಹಿ ಹಂಚುವುದು ಇದು ಇವರ ಮನೆಯ ಸಂಪ್ರದಾಯ.
"ಓ ಮೇಷ್ಟ್ರೇ ಬನ್ನಿ,ಬನ್ನಿ" ಎಂದು ಸುಬ್ಬು ಶ್ರೀನಿವಾಸರಾಯರ ಕಾಲಿಗೆ ಎರಗಿ ಆಶೀರ್ವಾದ ಪಡೆದ.
"ಎಲ್ಲಾ ಒಳ್ಳೆಯದಾಗಲಿ, ಏನಪ್ಪಾ ಸುಬ್ಬು ಚೆನ್ನಾಗಿದ್ದೀಯ" ಎಂದರು ಶ್ರೀನಿವಾಸರಾಯರು.
"ಚೆನ್ನಾಗಿದ್ದೀನಿ, ಏಲ್ಲಾ ನಿಮ್ಮ ಆಶೀರ್ವಾದ. ಬನ್ನಿ ಒಳಗೆ ಕುಳಿತುಕೂಳ್ಳಿ" ಎಂದರು ಸುಬ್ಬು.
ಶ್ರೀನಿವಾಸರಾಯರು ಈ ಹಬ್ಬದಲ್ಲಿ ವಿಶೇಷ ಆಹ್ವಾನಿತರು. ಈಗ ಪಾಠ ಹೇಳದಿದ್ದರೂ, ಹೇಳಿ ಕಳುಹಿಸಿದ ಹಾಗೆ ತಪ್ಪದೇ ಬರುತ್ತಿದ್ದರು.
ಶೆಟ್ಟರ ಮನೆಯಲ್ಲಿ ಇವರ ಬಗ್ಗೆ ವಿಶೇಷ ಗೌರವ. ಒಳಗೆ ಬಂದು ಸೊಫಾದ ಮೇಲೆ ಶೆಟ್ಟರ ಪಕ್ಕದಲ್ಲಿ ಕೂತರು.
ಲೀಲಮ್ಮ ಬಂದು ಕುಶೋಲೋಪರಿ ವಿಚಾರಿಸಿ "ಬಾದಮಿ ಹಾಲು ತರುತ್ತೀನಿ" ಕೊತ್ಕೊಳ್ಳಿ ಎಂದು ಒಳ ನಡೆದರು.
"ತಾತ ಇವರು ಯಾರು". ಎಂದಳು ಪುಟಾಣಿ ದೀಪ.
"ಓ ಮೇಷ್ಟ್ರೇ ಮರೆತಿದ್ದೆ, ಇವಳು ನಿಮ್ಮ ಶಿಷ್ಯನ ಮಗಳು"
"He is your Daddy's teacher, ನಮಸ್ಕಾರ ಮಾಡಮ್ಮ", ಎಂದರು ಶೆಟ್ಟರು.
ಇರಲಿ ಬಿಡಿ, ಪಾಪ ಚಿಕ್ಕವಳು. "What is your name"?
ದೀಪ.
"ವೆರಿ ನ್ಫೆಸ್. ಗಾಡ್ ಬ್ಲೆಸ್ ಯು, ಯು ನೊ ವಾಟ್ ಈಸ್ ದೀಪಾವಳಿ" ಎಂದರು ಮೇಷ್ಟ್ರು.
"ಇಟ್ ಈಸ್ ಫೆಸ್ಟಿವಲ್ ಆಫ್ ಲ್ವೆಟ್ಸ್" ಎಂದಳು.
"Very good, ಯು ನೊ ಲಾರ್ಡ್ ಕ್ರಿಷ್ಣ"
"ಓ ಯೆಸ್, wait i will show you photo" ಎಂದು ಕ್ರಿಷ್ಣನ ಫೋಟೊ ತರಲು ಒಳ ಓಡಿದಳು.
"ದೀಪು ಬಾ ಪಟಾಕಿ ಹಚ್ಚಣ" ಎಂದು ಕರೆದೋಯ್ದ ಶಂಕರ.
ಶಂಕರ ಮನೆ ಕೆಲಸದ ಹುಡುಗ. ಮನೆಯವರಿಗೆಲ್ಲಾ ಅಚ್ಚು ಮೆಚ್ಚು. ಬಹಳ ನಂಬಿಕಸ್ತ.
"ಓ ದೀಪು ಪಟಾಕಿ ಹಚ್ತೀಯ. ಗುಡ್, ಶಂಕರ್ ಹುಷಾರು ಕಣೋ" ಎಂದು ಹೇಳುತ್ತಾ, ಸುಬ್ಬು ಕಾಮೆರಾ ತರಲು ಒಳಗೆ ಹೋದರು.
ದೀಪು ಮತ್ತು ಶಂಕರ್ ನಕ್ಷತ್ರ ಕಡ್ದಿ , ಮತಾಪು ಹಚ್ಚುತ್ತಾ ನಲಿದಾಡುತ್ತಿದ್ದರು.
ಸುನೀ can you help me to trace film roll ಎಂದು ಒಳಗಿನಿಂದ ಜೋರಾಗಿ ಕರೆದರು ಸುಬ್ಬು.
oh yah, coming ಸುನೀತ ಒಳಗೆ ಓಡಿದರು.
ಇಬ್ಬರಿಗೊ ಇಂಡಿಯಾದಲ್ಲಿ ಮಗಳು ಪಟಾಕಿ ಹಚ್ಚುವ ಫೋಟೊ ತೆಗೆಯುವ ಆಸೆ.
"ದೀಪು ಫ್ಲವರ್ ಪಾಟ್ ಹಚ್ಚೋಣ" ಎಂದ ಶಂಕರ್.
ಓಕೆ ಎಂದಳು .
ಈಗ ನೋಡು ಈ ಸುಸುರ್ ಬತ್ತಿನ ಹೀಗೆ ತಿರುಗುಸ್ತಿದ್ದರೆ ಎಷ್ಟ್ ಚೆನ್ನಾಗಿ ಹೊ ತರ ಕಾಣುತ್ತೆ ಅಲ್ವ ಪುಟ್ಟಾ ಎಂದ.
ವೆರಿ ನ್ಫೆಸ್. ನಂಗೊ ಕೊಡು ಎಂದಳು.
ಈಗ ಬೇಡ ಮೊದಲು ಫ್ಲವರ್ ಪಾಟ್ ಹಚ್ಚಣ ಎಂದು ದೊಡ್ಡ ಫ್ಲವರ್ ಪಾಟ್ ಅನ್ನು ನೆಲದ ಮೇಲೆ ಇಟ್ಟ,
"ಶಂಕರ್ ಫಿಲ್ಮ್ ರೋಲ್ ಎಲ್ಲಿದೆ ನೋಡಿದಿಯ" ಎಂದು ಕೂಗಿದರು ಸುಬ್ಬು.
ಬಂದೆ ಅಣ್ಣ, ಎಂದು ಎರಡು ಸುಸುರ್ ಬತ್ತಿ ಹಚ್ಚಿ ದೀಪಾಳ ಕ್ವೆಗೆ ಕೊಟ್ಟು ಇಲ್ಲೇ ಇರು ಎಂದು ಹೇಳಿ ಒಳ ಓಡಿದ.
ಬೀ ಕೇರ್ ಫುಲ್ ಪುಟ್ಟಾ ಎಂದರು ಸುಬ್ಬು ಮಗಳಿಗೆ.
ದೊಡ್ಡದಾದ ಬಂಗಲೆ. ಆಗಿನ ಕಾಲಕ್ಕೆ ದೊಡ್ದ ಶ್ರೀಮಂತರು. ಮನೆಗೂ ಗೇಟಿಗೊ ಸ್ವಲ್ಪ ಅಂತರ ಜಾಸ್ತಿ.
ಪುಟ್ಟ ದೀಪ ಫ್ಲವರ್ ಪಾಟ್ ಇರುವದನ್ನು ನೋಡಿ, ಅದರ ಬಳಿ ನಡೆದಳು. ಹಚ್ಚಿದಳು.
ಫ್ಲವರ್ ಪಾಟ್ ಉರಿಯ ಹತ್ತಿತು.
" ದೀಪ ಲುಕ್ ಹಿಯರ್" ಎಂದು ಕೂಗಿದರು ಸುಬ್ಬು.
ದೀಪ ಹಾಗೆಯೆ ತಿರುಗಿ ನೋಡಿದಳು, ಫ್ಲವರ್ ಪಾಟ್ ನಿಂದ ಬಂದ ಬೆಂಕಿ ದೀಪಾಳ ಜರಿ ಮಿಶ್ರಿತ ರೇಷ್ಮೆ ಲಂಗವನ್ನು ಆಕ್ರಮಿಸಿತು.
ಅಯ್ಯೋ ದೀಪು, ಎಂದು ಧಾವಿಸಿ ಬಂದರು ಸುಬ್ಬು.
ವಿಕ್ಟೋರಿಯ ಆಸ್ಪತ್ರೆಗೆ ದೌಡಾಯಿಸಿದರು. ಆಗ ಬರ್ನ್ಸ್ Casuality ಇದ್ದದ್ದು ಅಲ್ಲಿ ಮಾತ್ರ.
ದೀಪುವಿನ ಚೀತ್ಕಾರ, ಕೇಳಿದ ಸುನೀತ ಆಸ್ಪತ್ರೆಯ ಬಾಗಿಲಲ್ಲೆ ಕುಸಿದರು.
ದೀಪುವನ್ನು ಪರೀಕ್ಷಿಸಿದ ಡಾಕ್ಟರ್ ಕ್ರಿಷ್ನಮೂರ್ತಿ, 60% ಬರ್ನ್ಸ್. She is very criticle. I cannot say anything now. ಎಂದರು.
ಅಮಾವಸ್ಯೆ ಕತ್ತಲಲ್ಲಿ ಉರಿದಿದ್ದ ದೀಪ, ನಂದಿ ಹೋದಳು, ಎಂದೂ ಬೆಳಕಾಗಲಿಲ್ಲ
-ಮಧ್ವೇಶ್..