ಬೆಳಗಾವಿ: ಹೆಸರಿನ ಗೊಂದಲ

ಬೆಳಗಾವಿ: ಹೆಸರಿನ ಗೊಂದಲ

ಬರಹ

ಬೆಳಗಾವಿಯ ರೈಲ್ವೆ ನಿಲ್ದಾಣದಲ್ಲಿ ತೆಗೆದ ಚಿತ್ರವಿದು. ಬೇರೆ ಊರಿನಿಂದ ಬಂದ ಯಾರಾದ್ರೂ ಇದನ್ನ ನೋಡಿದ್ರೆ ಗೊಂದಲಕ್ಕೆ ಈಡಾಗುವುದು ಖಂಡಿತ. ಇದು ಬೇ'ಲಗಾಂ' ಕಾ ಘೋಡಾ ಅಂತ ಎಲ್ಲರಿಗೂ ಅರ್ಥವಾಗಿದೆ! ಮರಾಠಿಗರು ಇದನ್ನು ಬೆಳಗಾಂವ್ ಎಂದು ಕರೆದರೆ, ದಕ್ಷಿಣ ಕರ್ನಾಟಕದವರು ಬೆಳಗಾಂ ಎನ್ನುತ್ತಾರೆ. ಆದ್ರೆ ಎಲ್ಲ ಸರಕಾರೀ ದಾಖಲೆಗಳಲ್ಲಿ ಇರುವ ಹೆಸರು ಬೆಳಗಾವಿ ಎಂದು. ಇತ್ತೀಚಿಗೆ ಇಲ್ಲಿ ಕನ್ನಡ ಪರ ಹೋರಾಟಗಳು, ಸಮ್ಮೇಳನಗಳು ನಡೆಯುತ್ತಿವೆ. ಆದರೆ ಈ ಊರಿನ ಹೆಸರಿನ ಬಗ್ಗೆ, ಅದರಲ್ಲೂ ಸಾರ್ವಜನಿಕ ಸ್ಥಳಗಳಲ್ಲಿ ಒಮ್ಮತದ ಅಭಿಪ್ರಾಯಗಳಿಲ್ಲ. ಆದಷ್ಟು ಬೇಗ ಬೆಳಗಾವಿ ಹೆಸರಿನ ಈ ಗೊಂದಲದಿಂದ ಮುಕ್ತವಾಗುವುದು ಎಂದು ಆಶಿಸುವೆ…