ಬೆಳಗಿನ ಬೆಡಗು

ಬೆಳಗಿನ ಬೆಡಗು

ಕವನ

ಬೆಳಗಿನ ಬೆಡಗಿಗೆ ಏನೆಂದು ಹೆಸರಿಡಲಿ

ಹರಡುತಿದೆ ನಗುವ ಹಗಲು ಸುತ್ತಲೂ

ಭೇದಿಸಿ ಕರಿಯ ಕೋಟೆಯ ಕತ್ತಲು

ಹೊಳೆದಿವೆ ಹಸಿರ ತುದಿಯಲಿ ಮುತ್ತುಗಳು.

 

ಅರಳುತಿವೆ ಮೊಗ್ಗು ಅರುಣನ ಸ್ವಾಗತಿಸಿ

ಹರಡುತಿದೆ ಘಮವು ಕಿರಣಗಳ ತಬ್ಬಿ

ಮೂಡಣದ ರಂಗ ಓಕುಳಿಯ ಆಟಕೆ

ಸಾಕ್ಷಿಯಾಗಿವೆ ಆ ಹಸಿರ ಮಲೆಗಳು.

 

ನಿದ್ರೆಯ ಜಡವ ಜಗವು ಮರೆತು

ಮರಳಿದೆ ಕಾಯಕದ ಹಾದಿದೆ ಶರಣೆಂದು

ಶಾಂತತೆಯ ತೂರಿ ಶಬ್ದ ಗೋಪುರವೇರಿ 

ಚೈತನ್ಯ ಚರಕವದು ಮರಳುತಿದೆ ಹಳಿಗೆ.

 

ಹಾರಿವೆ ಹಕ್ಕಿಗಳು ಆನಂದವ ಅನಂತವಾಗಿಸಿ

ಅಂಗಳದಿ ಬರೆಯಲು ಚೆಲುವ ರಂಗೋಲಿ

ಗುಡಿಯ ದೇವನು ಜಲದಿ ಮಿಂದೆದ್ದು

ಎದುರಾದ ಭಕ್ತರಿಗೆ ಕತ್ತಲು ಕಳೆಯಿತಿಂದು.

-ನಿರಂಜನ ಕೇಶವ ನಾಯಕ, ಶಿಕ್ಷಕ, ಮಂಗಳೂರು.

ಚಿತ್ರ ಕೃಪೆ: ಇಂಟರ್ನೆಟ್ ತಾಣ

ಚಿತ್ರ್